ಕೊಡಗಿನ ಈ ಮಹಿಳಾ ಮಣಿಗಳಿಗೆ ನಮ್ಮದೊಂದು ಸಲಾಂ…!

0
306

ಕಳೆದ ವರ್ಷದಂತೆ ಈ ವರ್ಷವೂ ಕೊಡಗಿನಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಗುಡ್ಡಗಳು ಕುಸಿಯುತ್ತಿದ್ದು, ಮತ್ತೊಂದು ಭೀಕರತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಆದರೆ ಈ ಬಾರಿ ಕೊಡಗಿನ ಜನತೆಯ ಪಾಲಿಗೆ ಹೊಸ ಶಕ್ತಿಯಾಗಿ ನಿಂತಿದ್ದಾರೆ ಮೂವರು ಮಹಿಳಾ ಮಣಿಗಳು.

ಹೌದು, ಡಿಸಿ ಅನೀಸ್ ಕಣ್ಮಣಿ, ಜಾಯ್, ಎಸ್ಪಿ ಡಾ. ಸಿಮನ್ ಡಿ ಪನೇಕರ್ ಮತ್ತು ಜಿಪಂ ಸಿಇಒ ಲಕ್ಷ್ಮೀ ಪ್ರಿಯಾ ಮೂವರು ಈ ಬಾರಿ ಪ್ರವಾಹ ಸಂತ್ರಸ್ತರ ಪರಿಹಾರ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೀಗಾಗಿಯೇ
“ಕೊಡಗಿನ‌ ಮೂವರು ಮಹಾಲಕ್ಷ್ಮೀಯರು ವರ ಮಹಾಲಕ್ಷ್ಮಿ ಹಬ್ಬದಂದು ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜನರನ್ನು ರಕ್ಷಿಸಲು ಮುಂದಾಗಿದ್ದು ಹೀಗೆ..” ಎಂಬ ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.

ಇನ್ನು ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುತ್ತದೆ. 34 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 817 ಕುಟುಂಬಗಳ ಒಟ್ಟು 2866 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ. ಈ ಎಲ್ಲ ವ್ಯವಸ್ಥೆಯ ಹಿಂದೆ ಈ ಮೂವರು ಮಹಿಳಾ ಅಧಿಕಾರಿಗಳ ಶ್ರಮವಿದೆ ಎಂಬುದು ವಿಶೇಷ.

LEAVE A REPLY

Please enter your comment!
Please enter your name here