ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು, ಇದರ ವತಿಯಿಂದ ದಿನಾಂಕ 08/12/2019 ರಂದು ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ ಬೆಂಗಳೂರಿನಲ್ಲಿ , ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ರವೀಂದ್ರನಾಥ ಇವರ ಅಧ್ಯಕ್ಷತೆಯಲ್ಲಿ ಭಾವಿ ವಧು ವರರ ಮುಖಾಮುಖಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಸುಮಾರು 250ಕ್ಕೂ ಹೆಚ್ಚು ಗೌಡ ಸಮಾಜದ ಯುವಕ ಯುವತಿಯರು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೋಂದಣಿಯನ್ನು ಮಾಡಿಕೊಂಡರು.
ಆಗಮಿಸಿದ ಬಾಂಧವರು ಹಾಗೂ ಅತಿಥಿಗಳು ಈ ಸಮಾಜಮುಖಿ ಕಾರ್ಯಕ್ರಮ ಹಾಗೂ ಯುವಕ ಯುವತಿಯರ ಭವಿಷ್ಯದ ಚಿಂತನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಮುಂದಿನ ಜೀವನದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರಾಜ್ಯ ಯುವ ಒಕ್ಕಲಿಗರ ಸಂಘ (ರಿ) ಬೆಂಗಳೂರು ರಾಜ್ಯ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ (ರಿ) ಬೆಂಗಳೂರು ಪತ್ರಿಕಾ ಕಾರ್ಯದರ್ಶಿಯವರಾದ ಡಾಕ್ಟರ್ ದೇವಿಪ್ರಸಾದ್ ಬೊಳ್ಮ ಧರ್ಮಸ್ಥಳ , ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷರಾದ ರಾಜೇಶ್ ತೇನನ, ಉಪಾಧ್ಯಕ್ಷರಾದ ರವೀಂದ್ರನಾಥ್ ಕೇವಲ,
ಕಾರ್ಯದರ್ಶಿ ಪಾಣತ್ತಲೆ ಪಳಂಗಪ್ಪ, ಸೋಮಣ್ಣ ಕುಂಭಗೌಡನ, ನಾಗೇಶ್ ಕಲ್ಲುಮುಟ್ಲು, ಸ್ಥಾಪಕ ಅಧ್ಯಕ್ಷೆ ಸುಶೀಲಾ ಉಲ್ಲಾಸ್, ಮಹಿಳಾ ಯುವ ಘಟಕದ ಉಪಾಧ್ಯಕ್ಷೆ ನೇಹಾ ರೋಷನ್ , ಜ್ಯೋತಿ ಕುಶಾಲಪ್ಪ , ಶಶಿಪ್ರಭಾ ಮಾಡ್ತಿಲ, ಲತಾ ರಾಜೇಶ್ ಕಟ್ರತನ, ಗಂಗಮ್ಮ ನೆರಿಯನ , ಪದ್ಮಾ ಕೊಳ್ತಾರ, ನಂಗಾರು ನಿಂಗರಾಜು, ಹಾಗೂ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ , ಸುಳ್ಯ , ಪುತ್ತೂರು , ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಬೆಂಗಳೂರು ,ಚಿಕ್ಕಮಗಳೂರು, ಹಾಸನ, ಸಮಾಜ ಬಾಂಧವರು ಉಪಸ್ಥಿತರಿದ್ದರು, ಲೀಲಾ ಸೋಮಣ್ಣ ಹಾಗೂ ಶರ್ಮಿಳಾ ನಟರಾಜ್ ಕಾರ್ಯಕ್ರಮ ನಿರೂಪಿಸಿದರು