ಸದ್ಯದಲ್ಲೇ ಸೆಟ್ಟೇರಲಿದೆ ಕಿರಿಕ್ ಪಾರ್ಟಿ ೨ : ರಶ್ಮಿಕಾ ಜಾಗವನ್ನು ತುಂಬುತ್ತಿರುವ ನಾಯಕಿ ಯಾರು?

0
257

ಕನ್ನಡ ಚಿತ್ರರಂಗದಲ್ಲಿ ನಟ,ನಿರ್ದೇಶಕ, ನಿರ್ಮಾಪಕರಾಗಿರುವ ರಕ್ಷಿತ್ ಶೆಟ್ಟಿ, ತಮ್ಮ ವಿಭಿನ್ನ ಸ್ಕ್ರೀನ್ ಪ್ಲೇ ಮತ್ತು ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ‘ನಮ್ ಏರಿಯಲ್ ಒಂದ್ ದಿನ’ ಎಂಬುವ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, `ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’ ಚಿತ್ರದ ಮುಖಾಂತರ ಸಿಂಪಲ್ ಸ್ಟಾರ್ ಆಗಿ ಹೊರಹೊಮ್ಮಿದರು ನಂತರ 2014 ರಲ್ಲಿ `ಉಳಿದವರು ಕಂಡಂತೆ’ ಎಂಬುವ ವಿಶೇಷ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಾನೂ ಒಬ್ಬ ಉತ್ತಮ ನಿರ್ದೇಶಕನೆಂದು ಸಾಬೀತು ಮಾಡಿದರು.

 

 

ಹೀಗೆ ಸಾಲುಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದ ಸಿಂಪಲ್ ಸ್ಟಾರ್ 2016 ರಲ್ಲಿ ಕಿರಿಕ್ ಪಾರ್ಟಿ ಎಂಬುವ ಕ್ಯಾಂಪಸ್ ರೊಮ್ಯಾಂಟಿಕ್ ಹಾಸ್ಯ ಚಿತ್ರವನ್ನು ಬರೆದು ಅಭಿನಯಿಸಿದರು, ಈ ಸಿನಿಮಾ ರಾಜ್ಯಾದ್ಯಾಂತ 15 ಚಿತ್ರಮಂದಿರಗಳಲ್ಲಿ 250 ದಿನಗಳು ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 365 ದಿನಗಳನ್ನು ಪೂರೈಸುವ ಮುಖಾಂತರ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಸಿನಿಮಾದ ಮುಖ್ಯ ಆಕರ್ಷಣೆ ಎಂದರೆ ಸಾನ್ವಿ ಪಾತ್ರದಾರಿ ರಶ್ಮಿಕಾ ಮಂದಣ್ಣ, ಸಿನಿಮಾ ಹಿಟ್ ಆಗಲು ಈ ಪಾತ್ರವೂ ಸಹ ಮುಖ್ಯ ಕಾರಣ ಎಂದರೆ
ತಪ್ಪಾಗಲಾರದು.

 

 

ಕಿರಿಕ್ ಪಾರ್ಟಿ ಸಿನಿಮಾದ ನಂತರ ರಕ್ಷಿತ್ ಮತ್ತು ರಶ್ಮಿಕಾ ವಿವಾಹವಾಗುತ್ತಿದ್ದೇವೇ ಎಂದು ಅನೌನ್ಸ್ ಮಾಡಿಕೊಂಡಿದ್ದರು. ಸುದ್ಧಿ ಕೇಳಿದ ಸಾಕಷ್ಟು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ತದನಂತರ ಎಂಗೇಜ್‍ಮೇಂಟ್,ಬ್ರೇಕಪ್ ಕಹಾನಿಗಳೆಲ್ಲವೂ ತಮಗೆಲ್ಲರಿಗೂ ಗೊತ್ತಿರುವ ವಿಚಾರ.

 

 

ಇದೀಗ ಸ್ಯಾಂಡಲ್ ವುಡ್ ನ ಶೆಟ್ರು, ತಮ್ಮ ಕನಸಿನ ಕೂಸು ಅವನೇ ಶ್ರೀಮನ್ನಾರಾಯಣ ಚಿತ್ರದ ಬಿಡುಗಡೆ ಕೆಲಸದಲ್ಲಿ ನಿರತರಾಗಿದ್ದಾರೆ. ಇದೇ ತಿಂಗಳು 27 ರಂದು ಈ ಚಿತ್ರ ಭಾರತಾದ್ಯಂತ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.ಸದ್ಯ ಕನ್ನಡದ ಹೆಮ್ಮೆ ಕೆಜಿಎಫ್ ಚಿತ್ರದ ಬಳಿಕ ಸಖತ್ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅವನೇ ಶ್ರೀಮನ್ನಾರಾಯಣ ಎಂದರೆ ತಪ್ಪಾಗಲಾರದು.. ಇದೀಗ ಇದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ತಮ್ಮ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದು , ಕಿರಿಕ್ ಪಾರ್ಟಿ ೨ ಬರಲಿದೆ ಎಂದು ಪ್ರಕಟಿಸಿದ್ದಾರೆ!

 

 

ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಹೊಸದೊಂದು ದಾಖಲೆ ಬರೆದಿತ್ತು. ಇದೀಗ ಈ ಚಿತ್ರದ ಸೀಕ್ವಲ್ ಮಾಡುತ್ತಿದ್ದೇನೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಟ್ವಿಟರ್ ಮೂಲಕ ತಿಳಿಸಿದ್ದಾರೆ..
ಹೌದು ಈ ರೀತಿ ಟ್ವೀಟ್ ಮಾಡಲು ಕಾರಣಕರ್ತರು ಒಬ್ಬರಿದ್ದಾರೆ..ಅವರೇ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತ ಹೆಗ್ಡೆ..

 

 

ಸದ್ಯ ಭಾರತಾದ್ಯಂತ ಅವನೇ ಶ್ರೀನಾರಾಯಣ ಚಿತ್ರದ ಟ್ರೈಲರ್ ಜೋರಾಗಿಯೆ ಸದ್ದು ಮಾಡುತ್ತಿದೆ,ಇದನ್ನು ವೀಕ್ಷಿಸಿದ ಸಂಯುಕ್ತ ಹೆಗ್ಡೆ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ..ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ರು ನಾವು ಕೆಪಿ2 ಮಾಡೋಣ ಎಂದು ಹೇಳಿದ್ದಾರೆ (ಕಿರಿಕ್ ಪಾರ್ಟಿ೨ ).

 

 

ರಕ್ಷಿತ್ ಶೆಟ್ಟಿ ಅವರು ಏನೇ ಮಾಡಿದರು.. ಏನೇ ಹೇಳಿದರು.. ಖಂಡಿತವಾಗಿಯೂ ಸುಮ್ಮನೆ ಮಾತ್ರ ಅಲ್ಲ.ಎಲ್ಲವೂ ಫಿಕ್ಸ್ ಆಗಿ ಪರ್ಫೆಕ್ಟ್ ಆದರೆ ಮಾತ್ರ ಈ ರೀತಿಯಾದ ವಿಚಾರಗಳನ್ನು ಬಿಟ್ಟುಕೊಡುತ್ತಾರೆ..ಹೀಗಿರುವಾಗ ಅವರೇ ಕಿರಿಕ್ ಪಾರ್ಟಿ ೨ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದರೆ ಇಂದಲ್ಲ ನಾಳೆ ಆ ಸಿನಿಮಾ ಬಂದೇ ಬರುತ್ತದೆ.

 

 

ಆದರೆ ಈ ಸಿನಿಮಾ ಯಾವಾಗ ಸೆಟ್ಟೇರಲಿದೆ, ಯಾರು ಯಾರು ತಾರಾಗಣದಲ್ಲಿದ್ದಾರೆ ಅನ್ನೋದು ಮಾತ್ರ ಇನ್ನೂ ಗುಟ್ಟಾಗಿದೆ. ಆದರೆ ಹಿಂದಿನ ಸಿನಿಮಾದ ನಾಯಕಿ ಸಂಯುಕ್ತಾ ಹೆಗ್ಡೆ ಮಾತ್ರ ಸೀಕ್ವೆಲ್​ನಲ್ಲಿ ಫಿಕ್ಸ್​ ಅನ್ನೋದು ಈ ಟ್ವೀಟ್​ನಿಂದ ಖಚಿತವಾಗಿದೆ.

LEAVE A REPLY

Please enter your comment!
Please enter your name here