ಒಂದು ಚಿತ್ರವನ್ನು ಎಷ್ಟು ಬಾರಿ ನೋಡಲು ಸಾಧ್ಯ ಎಂದು ಕೇಳಿದರೆ, ಪ್ರತಿಯೊಬ್ಬರೂ ಎರಡು, ಮೂರು ಬಾರಿ ಎಂದು ಹೇಳಿದರೆ ಸಾಕು, ಅಯ್ಯೋ ಅಷ್ಟೊಂದು ಬಾರಿ ನೋಡಿದೀರಾ ಎಂದು ಎದುರಿಗಿದ್ದವರು ಉದ್ಘರಿಸುತ್ತಾರೆ. ಚಿತ್ರತಾರೆಯರು ಒಂದರೆಡು ಬಾರಿ ಒಂದೇ ಸಿನಿಮಾ ನೋಡುವುದು ಅಪರೂಪ. ಆದರೆ, ಚಿತ್ರರಂಗದ ಕಿಚ್ಚ ಮಾತ್ರ ಒಂದೇ ಸಿನಿಮಾವನ್ನು ಹತ್ತರಿಂದ ಹನ್ನೊಂದು ಬಾರಿ ನೋಡಿದ್ದಾರಂತೆ. ಅದೂ ಅವರ ಪತ್ನಿಯೊಂದಿಗೆ! ಪತ್ನಿಯ ಧಮ್ಕಿಗೆ ಹೆದರದೆ ಫೈಲ್ವಾನ್ ಈ ರೀತಿ ಮಾಡಿದ್ದಾರಂತೆ.
ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರ ತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರದ ಕುರಿತ ಸಂದರ್ಶನವೊಂದರಲ್ಲಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿ ಈ ರೀತಿ ಹೇಳಿದ್ದಾರೆ. ನನ್ನ ಪತ್ನಿಯಿಂದಾಗಿ ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಹತ್ತರಿಂದ ಹನ್ನೊಂದು ಬಾರಿ ನೋಡಿದ್ದೇನೆ. ನೀನು ನನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗದಿದ್ದರೆ ನಾನು ಬೇರೆಯವರ ಜೊತೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಪ್ರತೀ ಬಾರಿ ಅವಳ ಜೊತೆ ಚಿತ್ರಮಂದಿರಕ್ಕೆ ಹೋಗಿ ಕುಳಿತು, ಚಿತ್ರ ನೋಡಿ ಮರಳಿ ಬರುತ್ತಿದ್ದೆ ಎಂದು ಮಡದಿಯ ಧಮ್ಕಿ ಕುರಿತು ಹೇಳಿದ್ದಾರೆ.
ಮೊದಲ ಬಾರಿ ಸಿನಿಮಾ ನೋಡಿದಾಗ ಹೃತಿಕ್ ರೋಷನ್ ಅವರ ನಟನೆ, ಡ್ಯಾನ್ಸ್, ಸ್ಟೈಲ್ ಸೇರಿದಂತೆ ಅವರ ಅಭಿನಯ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾದಲ್ಲಿ ಹೃತಿಕ್ ಡ್ಯಾನ್ಸ್ ಮಾಡುತ್ತಿದ್ದಾಗ, ಇಲ್ಲಿ ನನ್ನ ಪತ್ನಿ ನನ್ನ ಕೈ ಚಿವುಟುತ್ತಿದ್ದರು. ಆಗ ನನಗೆ ಸಿಟ್ಟು ಬರುತ್ತಿತ್ತು. ನಾನು ಒಬ್ಬ ನಟ. ನನಗೂ ರಾಜ್ಯದ ತುಂಬ ಅಭಿಮಾನಿಗಳು ಇದ್ದರು. ಆದರೆ, ನನ್ನ ಪತ್ನಿ ಬೇರೆ ನಟನ ಅಭಿಮಾನಿಯಾಗಿದ್ದು, ಬೇಸರ ಮೂಡಿಸುತ್ತಿತ್ತು ಎಂದು ಹಾಸ್ಯಭರಿತವಾಗಿ ಹೇಳಿದರು.
Q&A …….. https://t.co/tvrTquxudh
— Kichcha Sudeepa (@KicchaSudeep) December 10, 2019