ಕ್ರಿಕೆಟಿಗನ ಪಾತ್ರದಲ್ಲಿ ಕಿಚ್ಚ ಸುದೀಪ್ : ಬಜೆಟ್ ಕೇಳಿದ್ರೆ ನೀವಂತು ಶಾಕ್ ಆಗ್ತಿರಾ!!

0
180

ಸದ ಒಂದಲ್ಲಾ ಒಂದು ಪಾತ್ರದಿಂದ ಎಲ್ಲರ ಗಮನ ಸೆಳೆಯುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದೇ ಮೊದಲ ಬಾರಿಗೆ ಪೈಲ್ವಾನ್ ಚಿತ್ರದಲ್ಲಿ ಬಾಕ್ಸರ್ ಅವತಾರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಕಿಚ್ಚನ ನ್ಯೂ ಲುಕ್‍ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹೀಗಿರುವಾಗಲೆ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸಿದ್ದಿ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಒಬ್ಬ ಒಳ್ಳೆಯ ಕ್ರಿಕೆಟಿಗ. ಇನ್ನು ಕಿಚ್ಚ ಅವರ ಬ್ಯಾಟಿಂಗ್ ಸ್ಟೈಲ್, ವಿಕೆಟ್ ಕೀಪಿಂಗ್, ಹಾಗೂ ಅಗ್ರೆಸಿವ್ ಕ್ಯಾಪ್ಟೆನ್ಸಿಯನ್ನು ಸಿಸಿಎಲ್ ಟೂರ್ನಿಯಲ್ಲಿ ನೋಡಿ ಅಭಿಮಾನಿಗಳೆಲ್ಲರು ಮಚ್ಚಿಕೊಂಡಿದ್ದಾರೆ. ಸಿಸಿಎಲ್ ಸಮಯದಲ್ಲಿ ಮಾತ್ರ ನೋಡಬಹುದಾಗಿದ್ದ ಸುದೀಪ್ ಅವರ ಆಟವನ್ನು ಈಗ ಬೆಳ್ಳಿತೆರೆಯ ಮೇಲೆ ನೋಡಬಹುದು. ಹೌದು ಕಿಚ್ಚ ಸುದೀಪ್ ಮುಂದಿನ ಚಿತ್ರದಲ್ಲಿ ಕ್ರಿಕೇಟಿಗನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಹೀಗೆಂದು ಖದ್ದು ಸುದೀಪ್ ಅವರೆ ಹೇಳಿಕೊಂಡಿದ್ದಾರೆ.

ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ನಡೆದ ಪೈಲ್ವಾನ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಮಾತಾನಾಡಿದ ಕಿಚ್ಚ ಈ ವಿಷಯವನ್ನು ಹೇಳಿದ್ದಾರೆ. ಇನ್ನು ಕಾರ್ತಿಕ್ ಗೌಡ ಅವರು ಪೈಲ್ವಾನ್ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಇನ್ನು ಕಾರ್ತಿಕ್ ಗೌಡ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದು 200 ರಿಂದ 300 ಕೋಟಿ ಬಜೆಟ್‍ನಲ್ಲಿ ಈ ಸಿನಿಮಾ ಸೆಟ್ಟೇರಲಿದೆಯಂತೆ. ಒಂದು ವೇಳೆ ಇಷ್ಟು ಬಜೆಟ್‍ನಲ್ಲಿ ಈ ಸಿನಿಮಾ ನಿರ್ಮಾಣವಾದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಇದು ಇತಿಹಾಸವಾಗಲಿದೆ.

ಇನ್ನು ಇತರ ಬಾಷೆಯಲ್ಲಿ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಕ್ರಿಡಾ ಆಧಾರಿತ ಸಿನಿಮಾಗಳು ತೆರೆಕಂಡಿರುವುದು ಬಹಳ ಕಡಿಮೆ. ಬಾಲಿವುಡ್‍ನಲ್ಲಿ ದಂಗಲ್,ಇಕ್ಬಾಲ್,ಸುಲ್ತಾನ್ ನಂತಹ ಕ್ರೀಡಾ ಸಿನಿಮಾಗಳು ತೆರೆಕಂಡು ಸೂಪರ್ ಹಿಟ್ ಆಗಿದ್ದವು. ಹಾಗೆಯೆ ಇತ್ತೀಚಿಗೆ ತೆಲುಗಿನಲ್ಲಿ ನಾನಿ ಅಭಿನಯದ ಜರ್ಸಿ ಸಿನಿಮಾ ತೆರೆ ಕಂಡು ಸಾಕಷ್ಟು ಸದ್ದು ಮಾಡಿತ್ತು. ಈಗಾ ಕನ್ನಡದಲ್ಲೂ ಕ್ರೀಡಾ ಅಧಾರಿತ ಸಿನಿಮಾಗಳ ಮೇನಿಯ ಶುರುವಾಗಲಿದೆ.

LEAVE A REPLY

Please enter your comment!
Please enter your name here