ಯಶ್ ಜೊತೆ ಸೇರಿ ಕೆಜಿಎಫ್ ಭಾಗ 3 ಮಾಡ್ತಾರಂತೆ ವಿಜಯ್ ದೇವರಕೊಂಡ….ನಿಜಾನಾ…..?

0
147

ಕೆಜಿಎಫ್ ಸಿನಿಮಾ ಬಿಡುಗಡೆಯಾಗಿದ್ದೇ ಆಗಿದ್ದು ಎಲ್ಲೆಡೆ ಕನ್ನಡ ಚಿತ್ರರಂಗದ್ದೇ ಮಾತು. ಯಶ್ ಕೂಡಾ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಈ ಸಿನಿಮಾ ಸೀಕ್ವೆಲ್ ಶೂಟಿಂಗ್ ಭರದಿಂದ ಸಾಗುತ್ತಿದ್ದು ಈ ವರ್ಷ ಕೆಜಿಎಫ್ ಭಾಗ 3 ಬಿಡುಗಡೆಯಾಗುವ ಸಾಧ್ಯತೆ ಇದೆ.ಇನ್ನು ಕೆಜಿಎಫ್ ಭಾಗ 2 ಬಿಡುಗಡೆಯಾಗಿಲ್ಲ, ಆಗಲೇ ಕೆಜಿಎಫ್ ಭಾಗ 3ದ ಬಗ್ಗೆ ಮಾತುಕತೆ ನಡೆಯುತ್ತಿದೆ.

ಅರೆ, ಇದು ನಿಜನಾ ಎಂದು ಆಶ್ಚರ್ಯ ಪಡಬೇಡಿ. ಇತ್ತೀಚಿಗೆ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಹಾಗೂ ರಾಕಿಂಗ್ ಸ್ಟಾರ್ ಯಶ್ ಎದುರಾಗಿದ್ದರು. ಈ ವೇಳೆ ಯಶ್ನಿಂದ ಏನಾದರೂ ಕದಿಯಲು ಅವಕಾಶ ದೊರೆತರೆ ನೀವು ಏನನ್ನು ಕದಿಯುತ್ತೀರಿ ಎಂದು ನಿರೂಪಕಿ ವಿಜಯ್ ದೇವರಕೊಂಡ ಅವರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿಜಯ್, ಯಶ್ ಅವರಿಂದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕದಿಯುತ್ತೇನೆ,ಏಕೆಂದರೆ ಅವರಿಂದ ರಹಸ್ಯವಾಗಿ ಕೆಜಿಎಫ್ 3 ಕೆಲಸವನ್ನು ಆರಂಭಿಸಬಹುದು ಎಂದು ವಿಜಯ್ ನಗುತ್ತಲೇ ಹೇಳಿದರು.

ಆದರೆ ನಿಜಕ್ಕೂ ಪ್ರಶಾಂತ್ ನೀಲ್ ಅವರಿಗೆ ಕೆಜಿಎಫ್ ಭಾಗ 3 ಮಾಡುವ ಯೋಜನೆ ಇದೆಯಾ …ಇಲ್ಲವಾ ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು ಈ ವರ್ಷ ಕೆಜಿಎಫ್ ಬಿಡುಗಡೆಯಾದರೆ ವೀಕ್ಷಕರನ್ನು ಎಷ್ಟರ ಮಟ್ಟಿಗೆ ತಲುಪಲಿದೆ ಕಾದು ನೋಡಬೇಕು.

LEAVE A REPLY

Please enter your comment!
Please enter your name here