ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಕೆಜಿಎಫ್ – 2 ಪೋಸ್ಟರ್

0
157

ರಾಕಿ ಬಾಯ್ ಬಹು ನಿರೀಕ್ಷಿತ ಕೆಜಿಎಫ್ ಸಾಮ್ರಾಜ್ಯದ ಮರು ನಿರ್ಮಾಣಕ್ಕೆ ಈಗಾಗಲೇ ಲಗ್ಗೆ ಇಟ್ಟಾಗಿದೆ. ಹೌದು ಕೆಜಿಎಫ್ ಫ್ಯಾನ್ಸ್ ಕಾಯುತ್ತಿದ್ದ ಆ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದೆ.

 

ಅಲ್ಲದೇ ಸಿಂಗಲ್ ಪೋಸ್ಟರ್ನಲ್ಲಿ ಕೆಜಿಎಫ್ ಚಾಪ್ಟರ್ 2 ಕಥೆ ಹೇಳಲು ಹೊರಟ್ಟಿದ್ದಾರೆ ಪ್ರಶಾಂತ್ ನೀಲ್. ಕೆಜಿಎಫ್ ಫಸ್ಟ್ ಚಾಪ್ಟರ್ ರಿಲೀಸ್ ಆದ ವರ್ಷಕ್ಕೆ ಸರಿಯಾಗಿ ಸೆಕೆಂಡ್ ಚಾಪ್ಟರ್-2 ಫಸ್ಟ್ ಪೋಸ್ಟರ್ ಬಂದಿದೆ. ಎಲ್ಲರ ವಾಟ್ಸ್ಅಪ್ ಸ್ಟೇಟಸ್, ಫೇಸ್ಬುಕ್, ಟ್ವಿಟರ್ ಇನ್ಸ್ಟಾ ವಾಲ್ನಲ್ಲಿ, ಸ್ಟೋರಿಯಲ್ಲಿ ರಾಕಿ ಭಾಯ್ ಸದ್ಯ ನಟ ಯಶ್ ಅಭಿನಯದ ಈ ಪೋಸ್ಟರ್ ಹವಾ ಕ್ರಿಯೇಟ್ ಮಾಡಿದೆ. ಇನ್ನು ರಾಕಿ ಭಾಯ್ ಅಭಿಮಾನಿಗಳ ಟ್ವಿಟ್ಟರ್, ಫೇಸ್ಬುಕ್ ಡಿಪಿಯಲ್ಲೂ ಕೆಜಿಎಫ್ ಕಿಲಾಡಿಯ ಹವಾ ಜೋರಾಗಿದೆ.

 

 

ಇನ್ನು ಕೆಜಿಎಫ್ ಮೊದಲ ಚಾಪ್ಟರ್ನಲ್ಲಿ ಗರುಡನ ದುರಾಡಳಿತಕ್ಕೆ ತುತ್ತಾಗಿದ್ದ ಕೆಜಿಎಫ್ ಸಾಮ್ರಾಜ್ಯಕ್ಕೆ ಆಪತ್ಬಾಂಧವನಾಗಿ ರಾಕಿ ಎಂಟ್ರಿ ಕೊಟ್ಟಿದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲಿ ಶೋಷಣೆಗೆ ಒಳಗಾಗಿದ್ದ ಕಾರ್ಮಿಕರಿಗೆ ಧೈರ್ಯ ತುಂಬಿ, ಗರುಡನ ಸಂಹಾರ ಮಾಡಿ ಅವರ ಭಯವನ್ನ ಸಂಪೂರ್ಣವಾಗಿ ಕೊನೆಗಾಣಿಸಿದ್ದ. ಈಗ ಅದೇ ಕಾರ್ಮಿಕರನ್ನು ಸೇರಿಸಿಕೊಂಡು ಮತ್ತೆ ಕೆಜಿಎಫ್ ಸಾಮ್ರಾಜ್ಯವನ್ನ ಮರುನಿರ್ಮಾಣ ಮಾಡುತ್ತಿದ್ದಾರೆ ನಟ ಯಶ್.

 

 

ಅದೇ ರೀತಿ ಫಸ್ಟ್ ಲುಕ್ ಪೋಸ್ಟರ್ ಇದೇ ಕಥೆಯಂದು ಮೇಲ್ನೋಟಕ್ಕೆ ತಿಳಿಸುತ್ತಿದೆ. ಕಾರ್ಮಿಕರ ಜೊತೆ ರಾಕಿ ಭಾಯ್ ದೊಡ್ಡ ಕಂಬವನ್ನ ಹಗ್ಗ ಕಟ್ಟಿ ಎಳೆದು ನಿಲ್ಲಿಸುವಂತೆ ಚಾಪ್ಟರ್-2 ಫಸ್ಟ್ ಲುಕ್ ಪೋಸ್ಟರ್ ಡಿಸೈನ್ ಮಾಡಿದೆ ಕೆಜಿಎಫ್ -2 ಚಿತ್ರತಂಡ. ‘ರೀ ಬಿಲ್ಡಿಂಗ್ ಆ್ಯನ್ ಎಂಪೈರ್’ ಅನ್ನೋ ಟ್ಯಾಗ್ಲೈನ್ ಇಟ್ಟು ಪೋಸ್ಟರ್ಗೆ ಖದರ್ ತಂದಿದೆ ಕೆಜಿಎಫ್ ಟೀಂ. ಬ್ಲೂ ಕಲರ್ ಶರ್ಟ್, ಬ್ಲಾಕ್ ಕಲರ್ ಬೆಲ್ಬಾಟಂ ಪ್ಯಾಟ್ ತೊಟ್ಟು ರಾಕಿ ಭಾಯ್ ಬಾಯಲ್ಲಿ ಸಿಗರೇಟ್ ಇಟ್ಕೊಂಡು ಖಡಕ್ ಲುಕ್ ಕೊಟ್ಟಿರುವುದು ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ.

 

ಸಿಕ್ಕಾಪಟ್ಟೆ ಸಮಯಾವಕಾಶ ತೆಗೆದುಕೊಂಡು ಪೋಸ್ಟರ್ನಲ್ಲೇ ಕೆಜಿಎಫ್ -2 ಥೀಮ್ ಹೇಳೋ ಪ್ರಯತ್ನ ಮಾಡಿರೋದು ಪ್ರಶಾಂತ್ ನೀಲ್ ಸೆಕೆಂಡ್ ಚಾಪ್ಟರ್ನಲ್ಲಿ ನಿಜವಾದ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

LEAVE A REPLY

Please enter your comment!
Please enter your name here