ವೈರಲ್ ಆಯ್ತು ಸಲಿಂಗಿಗಳ ಪ್ರೀವೆಡ್ಡಿಂಗ್ ಫೊಟೋಶೂಟ್…ಬೆಂಗಳೂರಲ್ಲಿ ಮದುವೆಯಾಗುತ್ತಿರುವ ಕೇರಳ ಜೋಡಿ

0
752

ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಾಕ್ ಆಗುತ್ತಿರುವುದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಬಗ್ಗೆ. ಒಂದೆಡೆ ದೇಶವಿಡೀ ಪ್ರೀ ವೆಡ್ಡಿಂಗ್ ಫೋಟೋಶೂಟ್ ಬ್ಯಾನ್ ಆಗಬೇಕು, ಇದು ನಮ್ಮ ಸಂಸ್ಕøತಿಯಲ್ಲ ಎಂದು ಬುದ್ಧಿಜೀವಿಗಳು ವಾದ ಮಾಡುತ್ತಿದ್ದರೆ, ಮತ್ತೊಂದೆಡೆ ಹೊಸ ಪ್ರೀ ವೆಡ್ಡಿಂಗ್ ಫೋಟೋಶೂಟ್ ಒಂದು ವೈರಲ್ ಆಗಿದೆ.

 

 

ಇದೇನಪ್ಪಾ ಈ ಫೋಟೋಶೂಟ್‍ನಲ್ಲಿ ಅಂತ ವಿಶೇಷ ಏನಿದೆ ಎಂದು ಯೋಚಿಸುತ್ತಿದ್ದೀರ..? ಹೌದು ಇದು ನಿಜಕ್ಕೂ ಅಪರೂಪದ ಪ್ರೀ ವೆಡ್ಡಿಂಗ್ ಫೋಟೋಶೂಟ್.

 

 

ಏಕೆಂದರೆ ಇಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವುದು ಸಲಿಂಗಕಾಮಿಗಳು. ಕೇರಳದ ಈ ಸಲಿಂಗಿಗಳು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಕಳೆದ ವರ್ಷ ಸುಪ್ರೀಂ ಕೋರ್ಟ 377 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

 

 

ನಂತರ ಎಲ್ಲರಂತೆ ತಾವೂ ಕೂಡಾ ಏಕೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಬಾರದು ಎಂದು ಯೋಚಿಸಿದ್ದಾರೆ. ಮೇಕಪ್ ಇಲ್ಲದೆ, ವಿಭಿನ್ನ ಕಾಸ್ಟ್ಯೂಮ್ ಇಲ್ಲದೆ ತಮ್ಮ ಮನೆ ಸುತ್ತಮುತ್ತಲೇ ಫೋಟೋಶೂಟ್ ಮಾಡಿಸಿದ್ದಾರೆ.

 

 

ಅಂದಹಾಗೆ ಈ ಜೋಡಿಗಳ ಹೆಸರು ನಿವೇದ್ ಆಂಟೋನಿ ಚುಲಿಕ್ಕಲ್ ಹಾಗೂ ಅಬ್ದುಲ್ ರಹೀಮ್, ಇವರಿಬ್ಬರೂ ಕೇರಳದವರಾಗಿದ್ದು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಮದುವೆಯಾಗುತ್ತಿದ್ದಾರೆ. ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಇವರಿಬ್ಬರ ಮನೆಯಲ್ಲಿ ಇವರ ಪ್ರೀತಿಗೆ ಹಾಗೂ ಮದುವೆಗೆ ವಿರೋಧವಿದೆ.

 

 

ವಿರೋಧದ ನಡುವೆಯೂ ಈ ಇಬ್ಬರೂ ಮದುವೆಯಾಗುತ್ತಿದ್ದಾರೆ. ಜೊತೆಗೆ ಈ ಫೋಟೋಶೂಟ್ ಮೂಲಕ ಸಲಿಂಗಿಗಳಿಗೂ ಕೂಡಾ ತಮಗೆ ಇಷ್ಟಬಂದ ಹಾಗೆ ಜೀವಿಸುವ ಹಕ್ಕಿದೆ ಎಂದು ಸಂದೇಶ ನೀಡಲು ಹೊರಟಿದ್ದಾರೆ.

LEAVE A REPLY

Please enter your comment!
Please enter your name here