ಕೆಂಪೇಗೌಡ-೨ ಚಿತ್ರದ ವಿಮರ್ಶೆ

0
102

ತಾರಾ ಬಳಗ- ಕೋಮಲ್ ಕುಮಾರ್, ಲೂಸ್ ಮಾದ ಯೋಗೇಶ್, ಶ್ರೀಶಾಂತ್, ನಾಗಬಾಬು, ರಕ್ಷಿಕ ಶರ್ಮಾ, ಆಲಿ, ಚೇತನ್ ಶರ್ಮಾ, ಸುರೇಂದ್ರ ಪ್ರಸಾದ್,ಲೋಹಿತಾಶ್ವ ದತ್ತಣ್ಣ

ನಿರ್ದೇಶನ – ಶಂಕರೇಗೌಡ

ನಿರ್ಮಾಣ -ವಿ ವಿನೋದ್

ಛಾಯಾಗ್ರಹಣ -ಮೋಹನ್

ಸಂಗೀತ -ವರುಣ್ ಉನ್ನಿ

ಮೂರು ವರ್ಷಗಳಿಂದ ಚಿತ್ರ ಆಗ ಬರುತ್ತದೆ ಈಗ ಬರುತ್ತದೆ ಎಂದು ಕಾಯುತ್ತಲೇ ಇದ್ದೇವೆ! ಒಟ್ಟಾರೆ ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ಒಳ್ಳೆಯ ಓಪನಿಂಗ್ ತೆಗೆದುಕೊಂಡಿದೆ. ಸದಾ ಕಾಮಿಡಿ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಕೋಮಲ್ ಕುಮಾರ್ ಈ ಚಿತ್ರದಲ್ಲಿ ಶ್ರದ್ಧೆ ಮತ್ತು ಶ್ರಮ ಎರಡನ್ನೂ ವಹಿಸಿನಾನು ಒಬ್ಬ ಕಮರ್ಷಿಯಲ್ ಹೀರೋ ಎಂಬುದನ್ನು ತೋರಿಸಿಕೊಟ್ಟಿದ್ದಾರೆ !
ಇನ್ನು ಪೊಲೀಸ್ ಪಾತ್ರಕ್ಕೆ ಯಾವ ರೀತಿ ಬೇಕೋ ಆ ರೀತಿ ಖಡಕ್ ಆಗಿ ತಯಾರಿ ಮಾಡಿಕೊಂಡಿದ್ದಾರೆ. ಕೋಮಲ್ ಕುಮಾರರನ್ನೂ ಹೊಸ ಅವತಾರದಲ್ಲಿ ನೋಡಬಹುದು ! ಇನ್ನು ಚಿತ್ರದಲ್ಲಿ ಕೆಂಪೇಗೌಡನ ಹೈಲೈಟ್. ಇನ್ನು ಚಿತ್ರದಲ್ಲಿ ವಿಲನ್ ಆಗಿ ಮಾಜಿ ಕ್ರಿಕೆಟಿಗ, ಕೇರಳದ ವೇಗಿ ಶ್ರೀಶಾಂತ್ ಮತ್ತು ಲೂಸ್ ಮಾದ ಯೋಗೇಶ್ ಅಭಿನಯಿಸಿ ಅಚ್ಚರಿ ಮೂಡಿಸಿದ್ದಾರೆ ..

ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!

ಒಬ್ಬ ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ರಾಜಕೀಯ ಪಕ್ಷಗಳ ಆಟದ ವಸ್ತುವಾಗುವುದು, ದೂರದ ದೇಶಕ್ಕೆ ದುಡಿಯಲು ಹೋದ ಯುವಕ ನಿಗೂಢವಾಗಿ ಸಾಯುವುದು, ವಿದೇಶದಲ್ಲೇ ಕೂತು ರಾಜ್ಯದ ಆಡಳಿತವನ್ನು ನಿರ್ಧರಿಸುವ ಬ್ಯುಸಿನೆಸ್‌ ಮ್ಯಾನ್‌, ತಮ್ಮ ತಂದೆ ಕಟ್ಟಿದ ಪಕ್ಷದಲ್ಲಿ ತಮಗೇ ಸ್ಥಾನ ಸಿಗದೆ ಹುಚ್ಚನ ಪಟ್ಟದಕ್ಕಿಸಿಕೊಳ್ಳುವ ವ್ಯಕ್ತಿ, ಇದನ್ನೆಲ್ಲ ನೋಡಿ ಸಿಟ್ಟಾಗುವ ಆತನ ಮಗ ಮುಂದೆ ಕಾರ್ಪೋರೇಟ್‌ ಸಾಮ್ರಾಜ್ಯ ಕಟ್ಟಿತಾನೇ ಮುಖ್ಯಮಂತ್ರಿ ಆಗುವುದು, ಈ ಎಲ್ಲ ಘಟನೆಗಳಿಗೂ ಅಡ್ಡಿಯಾಗಿ ನಿಲ್ಲುವ ಕೆಂಪೇಗೌಡ.
ಈ ಎಲ್ಲದರ ನಡುವೆ ಸಿಎಂ ಹಾಗೂ ವಿದೇಶಕ್ಕೆ ಹೋದ ಯುವಕನ ಸಾವು ಕೆಂಪೇಗೌಡನನ್ನು ಕೆರಳಿಸುತ್ತದೆ. ಈ ಎರಡು ಪ್ರಕರಣಗಳ ಹಿಂದೆ ಹೊರಟ ಕೆಂಪೇಗೌಡನಿಗೆ ಹ್ಯಾಕರ್‌ ದಂಧೆ ತೆರೆದುಕೊಳ್ಳುತ್ತದೆ. ಈ ಹ್ಯಾಕರ್‌ ಮಾಸ್ಟರ್‌ ಮುಂದೆ ಸಿಎಂ ಕೂಡ ಆಗುತ್ತಾನೆ. ನಂತರ ಏನು ಎಂಬುದನ್ನು ನೀವು ಚಿತ್ರ ನೋಡಬೇಕು.

ಇನ್ನು ಸಿನಿಮಾದಲ್ಲಿ ಮೋಹನ್ ರವರ ಉತ್ತಮ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮೇಕಿಂಗ್ಗೆ ಹೆಚ್ಚು ಗಮನ ಸೆಳೆಯುತ್ತದೆ. ಇನ್ನು ಕೋಮಲ್ ಅವರನ್ನು ಬೇರೆ ರೀತಿಯಲ್ಲಿಯೇ ನೋಡಬಹುದು !ಅದನ್ನು ಬಿಟ್ಟರೆ ಬೇರೆ ಯಾವ ಪಾತ್ರಗಳಿಗೂ ಹೆಚ್ಚಿನ ಮಹತ್ವವಿಲ್ಲ. ಅಲ್ಲದೆ ಸಂಭಾಷಣೆ ಮತ್ತು ಎಡಿಟಿಂಗ್ನಲ್ಲಿ ಇನ್ನಷ್ಟು ವರ್ಕ್ ಬೇಕಿತ್ತು ಅನಿಸುತ್ತದೆ. ಅಲ್ಲದೇ ಪರಭಾಷಾ ನಟರಿಗಿಂತ ಕನ್ನಡದವರೇ ಇದ್ದಿದ್ದರೆ ಸಿನಿಮಾ ನೋಡಿದವರಿಗೆ ಇನ್ನಷ್ಟು ಇಷ್ಟವಾಗುತ್ತಿತ್ತು ಎಂದು ಹೇಳಬಹುದು

LEAVE A REPLY

Please enter your comment!
Please enter your name here