ಕೀರ್ತಿ ಸುರೇಶ್, ತಮಿಳು,ತೆಲುಗು ಮತ್ತು ಮಲೆಯಾಳಂನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಮಹಾನಟಿ'. 2018 ರಲ್ಲಿ ತೆರೆಕಂಡ ನಟಿ ಸಾವಿತ್ರಿ ಅವರ ಜೀವನಚರಿತ್ರೆ ಆಧಾರಿತವಾದ
‘ಮಹಾನಟಿ’ ಸಿನಿಮಾದಲ್ಲಿ ಸಾವಿತ್ರಿ ಪಾತ್ರವನ್ನು ಅಭಿನಯಿಸಿ, ರಾಷ್ಟೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕೀರ್ತಿ ಸುರೇಶ್, ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ಯಕ್ಕೆ ಮೋಸ್ಟ್ ಬ್ಯುಸಿಯಸ್ಟ್ ಹೀರೋಯಿನ್ ಅಂತಾನೆ ಹೇಳಬಹುದು. ತಾನು ಮಾಡುವ ಪ್ರತಿಯೊಂದು ಪಾತ್ರಕ್ಕು ಜೀವತುಂಬುವ ಈ ನಟಿ ಕನ್ನಡಕ್ಕೆ ಯಾವಾಗ ಬರುತ್ತಾರೆ ಎಂದು ಕನ್ನಡ ಸಿನಿರಸಿಕರು ಕಾದು ಕುಳಿತ್ತಿದ್ದರು.

ಈಗ ಕೀರ್ತಿ, ಶ್ರೀ ಮುರುಳಿ ಅವರ ಮದಗಜ ಚಿತ್ರದ ಮೂಲಕ ಕನ್ನಡಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ.! ಇನ್ನು ಈ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್, ಮೊನೆಯಷ್ಟೆ ನಡೆದ ಸ್ಯೆಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಮಹೇಶ್ರವರ ಚೊಚ್ಚಲ ಚಿತ್ರ `ಅಯೋಗ್ಯ’ಗೆ ಮೂರು ಅವಾರ್ಡ್ ಬಂದಿದೆ.
ಅದರಲ್ಲೂ ಮಹೇಶ್ ಅವರಿಗೆ ಬೆಸ್ಟ್ ಡೆಬ್ಯು ಡೈರೆಕ್ಟರ್ ಅವಾರ್ಡ್ ಬಂದಿರುವುದು ಸಂತಸ ತಂದಿದೆಯಂತೆ.

ಇನ್ನು ಮದಗಜ ಪೋಸ್ಟರ್ ಬಿಡುಗಡೆ ಮಾಡಿದ ದಿನದಿಂದಲೂ ಯಾರು ಈ ಚಿತ್ರದ ಹೀರೋಯಿನ್ ಎನ್ನುವ ಪ್ರಶ್ನೆ.? ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇನ್ನು ಚಿತ್ರಕ್ಕೆ ಕನ್ನಡ ಚಿತ್ರ ನಟಿಯೇ ಅಭಿನಯಿಸುತ್ತಾರೆ ಎಂಬುವ ಮಾತುಗಳು ಸಹ ಇದ್ದವು. ಆದೆರೆ ಮೊನ್ನೆ ನಡೆದ ಸಿಮಾ ಅವಾರ್ಡ ಕಾರ್ಯಕ್ರಮದಲ್ಲಿ ಮಹೇಶ್ ಅವರು ಮಹಾನಟಿ ಕೀರ್ತಿ ಸುರೇಶ್ ಅವರನ್ನು ಬೇಟಿ ಮಾಡಿ ಮಾತಾನಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು, ಇದನ್ನು ನೋಡಿದವರೆಲ್ಲ ಕೀರ್ತಿಯವರೆ ಮದಗಜ ಚಿತ್ರದ ನಟಿ ಎಂದು ಬಾವಿಸಿದ್ದರು. ಇದರ ಬಗ್ಗೆ ಮಹೇಶ್ ಅವರನ್ನು ಸುದ್ದಿಗೋಷ್ಠಿ ಒಂದರಲ್ಲಿ ಹೇಳಿದ್ದಾರೆ. “ಕೀರ್ತಿ ಸುರೇಶ್ರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಗೌರಿ ಗಣೇಶ ಹಬ್ಬಕ್ಕೆ ಚಿತ್ರದ ಹೀರೋಯಿನ್ ಯಾರು ಅಂತಾ ರಿವಿಲ್ ಮಾಡ್ತಿನಿ” ಅಂತಾ ಹೇಳಿದ್ದಾರೆ.
