ಗುರುವಾರದಂದು ಬಿಜೆಪಿ ಕಚೇರಿಯಲ್ಲಿ ಕಟೀಲ್ ಪದಗ್ರಹಣ.!

0
146

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಮಂಗಳೂರಿನ ಮಣ್ಣಗುಡ್ಡಿಯಲ್ಲಿರುವ ಆರ್’ ಎಸ್ಎಸ್ ಶಕ್ತಿ ಕೇಂದ್ರ ಸಂಘ ನಿಕೇತನಕ್ಕೆ ಭೇಟಿ ನೀಡಿದರು. ಆರ್’ಎಸ್ಎಸ್ ಸಂಸ್ಥಾಪಕ ಬಿರಾದಾರ್ ಅವರ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಅಲ್ಲಿಯ ಪ್ರಮುಖರು ಮತ್ತು ಪ್ರಚಾರಕರ ಜೊತೆ ದೀರ್ಘ ಮಾತುಕತೆ ನಡೆಸಿದರು.
ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿ ಪದಗ್ರಹಣ ಮಾಡಲಿದ್ದಾರೆ.

ಮಾಧ್ಯಮದವರೊಡನೆ ಅವರು ಮಾತನಾಡಿದ್ದು, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಾನು ಬಂದದ್ದು, ಹತ್ತಾರು ಜವಾಬ್ದಾರಿಗಳನ್ನು ಪಾರ್ಟಿ ವಿಶ್ವಾಸದಿಂದ, ಗೌರವದಿಂದ ನನಗೆ ನೀಡಿದೆ. ಪ್ರತಿಯೊಂದು ಕೆಲಸಗಳನ್ನು ವಿಶ್ವಾಸದಿಂದ ನಿರ್ವಹಿಸಿದ್ದೇನೆ! ಅದೇ ನಿಟ್ಟಿನಲ್ಲಿ ಪಕ್ಷ ವಿಶ್ವಾಸದಿಂದ ಜವಾಬ್ದಾರಿಯನ್ನು ನೀಡಿದೆ. ನನಗೆ ಕೊಟ್ಟಿರುವ ಕಾರ್ಯವನ್ನು ಯಶಸ್ವಿಗೊಳಿಸುತ್ತೇನೆ. ನಮ್ಮ ಪಕ್ಷದ ಒಗ್ಗಟ್ಟಿನಿಂದ ಮಾತ್ರ ಪ್ರತಿಯೊಂದು ಸಾಧನೆ ಮಾಡುವಲ್ಲಿ ನಾವು ಮುಂದಿದ್ದೇವೆ.

ರಾಜ್ಯ ಪ್ರವಾಸ ಮಾಡಬೇಕು,ರಾಜ್ಯದಲ್ಲಿ ಉಂಟಾಗುತ್ತಿರುವ ಗಂಭೀರ ಪರಿಸ್ಥಿತಿಗಳನ್ನು ಪರಿಶೀಲನೆ ಮಾಡುತ್ತೀವಿ. ರಾಜ್ಯದಲ್ಲಿ ಎಲ್ಲೆಡೆ ಪಾರ್ಟಿಯ ಸಂಘಟನೆಗಳನ್ನು ಸ್ಥಾಪಿಸಬೇಕು. ಇಂಥ ಹತ್ತು, ಹಲವಾರು ಜವಾಬ್ದಾರಿಗಳು ನಮ್ಮ ಮೇಲಿದೆ. ಅದನ್ನು ಎಲ್ಲ ಪಕ್ಷದ ಹಿರಿಯರ ಮಾರ್ಗದರ್ಶನದಿಂದ ಯಶಸ್ವಿ ಮಾಡುತ್ತೇವೆ. ರಾಜ್ಯವನ್ನು ಅಭಿವೃದ್ಧಿ ಮಾಡುವಲ್ಲಿ ನಾವು ಸದಾ ಮುಂದಿರಲಿದ್ದೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here