ಸಿನಿಮಾ ನಟರು ರಾಜಕೀಯಕ್ಕೆ ಎಂಟ್ರಿ ನೀಡುವುದು, ರಾಜಕೀಯ ನಾಯಕರ ಮಕ್ಕಳು ಸಿನಿಮಾಗೆ ಬರುವುದು ಸಾಮಾನ್ಯ. ಇದೀಗ ತಮಿಳುನಾಡು ಮಾಜಿ ಸಿಎಂ ದಿವಂಗತ ಕರುಣಾನಿಧಿ ಅವರ ಮೊಮ್ಮಗ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರ ಪುತ್ರ ಉದಯ್ನಿಧಿ ಕೂಡಾ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.
ಉದಯ್ನಿಧಿ ಅಭಿನಯದ ಈ ಸಿನಿಮಾಗೆ ‘ಸೈಕೋ’ ಎಂದು ಹೆಸರಿಡಲಾಗಿದ್ದು ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ. ಈ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು ಒಂದೊಂದು ದೃಶ್ಯ ಕೂಡಾ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಉದಯ್ನಿಧಿ ಜೊತೆಗೆ ಅದಿತಿ ರಾವ್ ಹಾಗೂ ನಿತ್ಯಾ ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಬಲ್ ಮೀನಿಂಗ್ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಚಿತ್ರಕ್ಕೆ ಮೈಸ್ಕಿನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ನೀಡಿದ್ದಾರೆ. ಉದಯ್ನಿಧಿ ಸಿನಿಮಾ ಮಾತ್ರವಲ್ಲ ತಂದೆಯೊಂದಿಗೆ ಡಿಎಂಕೆ ಪಕ್ಷದ ಕೆಲಸಗಳಲ್ಲಿ ಕೂಡಾ ಸಕ್ರಿಯರಾಗಿದ್ದಾರೆ.