‘ಶವ ಸಂಸ್ಕಾರ ಭತ್ಯೆ’ ಹೆಚ್ಚಳ ಮಾಡಿ ನಗೆಪಾಟಲಿಗೀಡಾದ ಬಿಜೆಪಿ ಸರ್ಕಾರ..!

0
789

ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಶವ ಸಂಸ್ಕಾರ ಭತ್ಯೆ ಹೆಚ್ಚಳ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ. ಪೊಲೀಸರಿಗೆ ನೀಡಬೇಕಾಗಿದ್ದ ವೇತನ ಹೆಚ್ಚಳ ಪ್ರಸ್ತಾಪವನ್ನು ತಡೆಹಿಡಿದು ಇದೀಗ ನೌಕರರ ಶವ ಸಂಸ್ಕಾರ ಭತ್ಯೆ ಹೆಚ್ಚಳ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಎಂಬ ಟೀಕೆ ವ್ಯಕ್ತವಾಗಿದೆ.

ಇನ್ನು ರಾಜ್ಯ ಬಿಜೆಪಿ ಸರ್ಕಾರವು ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಮೃತಪಟ್ಟರೆ ನೀಡಲಾಗುವ ಶವ ಸಂಸ್ಕಾರ ಭತ್ಯೆಯನ್ನು 25 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಇನ್ನು ಈ ಹಿಂದೆ ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಮರಣ ಹೊಂದಿದರೆ 5 ಸಾವಿರ ರೂಪಾಯಿ ಶವ ಸಂಸ್ಕಾರ ಭತ್ಯೆ ನೀಡಲಾಗುತ್ತಿತ್ತು. ಶವ ಸಂಸ್ಕಾರ ಭತ್ಯೆ ಹೆಚ್ಚಳ ಮಾಡಿರುವ ಕ್ರಮ ಸರಿಯಾಗಿದೆ ಆದರೆ ಅದನ್ನು ಜಾರಿಗೊಳಿಸುವ ಸಮಯ ಇದಾಗಿರಲಿಲ್ಲ. ಈಗಾಗಲೇ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು , ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿದೆ. ಅದೆಲ್ಲವನ್ನು ಬಿಟ್ಟು ಶವ ಸಂಸ್ಕಾರ ಭತ್ಯೆ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಮಧ್ಯೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಟ್ರೆಂಡ್ ಆಗುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಕ್ರಮಕ್ಕೆ ವ್ಯಂಗ್ಯ ಮಾಡಲಾಗುತ್ತಿದೆ. ಇದ್ದಾಗ ವೇತನ ಮತ್ತು ಭತ್ಯೆ ಕೊಡದ ಬಿಜೆಪಿ ಸರ್ಕಾರ ಸತ್ತ ಮೇಲೆ ಹೆಚ್ಚಿನ ಭತ್ಯೆ ಕೊಡಲು ಮುಂದಾಗಿರುವುದು ಯಾವ ಉದ್ದೇಶಕ್ಕೆ..? ಎಂಬ ಪ್ರಶ್ನೆ ಎದ್ದಿದೆ. ಕೆಲವರಂತು ಬಿಜೆಪಿ ಸರ್ಕಾರದಲ್ಲಿ ಸರ್ಕಾರಿ ನೌಕರರು ಸಾಯುವುದೇ ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.

LEAVE A REPLY

Please enter your comment!
Please enter your name here