ಬಾಲಿವುಡ್ ಮೂವಿಯಲ್ಲಿಸಲ್ಮಾನ್ ಖಾನ್ ಜೊತೆ ಅಭಿನಯಿಸಲಿದ್ದಾರೆ ನಮ್ಮ ಕನ್ನಡದ ಹುಡುಗಿ.!

0
259

ಸಲ್ಮಾನ್ ಖಾನ್ ರ ಬಾಲಿವುಡ್ನ ಮೂವಿಯಲ್ಲಿ ಅಭಿನಯಿಸಲು ನಮ್ಮ ಕನ್ನಡದ ಬೆಡಗಿ ಪೂಜಾ ಹೆಗ್ಡೆಯವರಿಗೆ ಅವಕಾಶ ಸಿಕ್ಕಿದೆ ಎಂಬುದು ಸಂತಸಕಾರಿ ವಿಚಾರ. ಅವರೊಂದಿಗೆ ಅಭಿನಯಿಸಲು ಮುಂದಾದ ಚಿತ್ರಕ್ಕೆ ‘ಕಿಕ್ 2’ ಎಂದು ಈಗೇಗಲೇ ಹೆಸರಿಡಲಾಗಿದೆ. ಪೂಜಾ ಹೆಗ್ಡೆ ಮೂಲತಃ ಕರ್ನಾಟಕದವರು. ಈಗಾಗಲೇ ದಕ್ಷಿಣ ಭಾರತ ಮತ್ತು ಬಾಲಿವುಡ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅಲ್ಲದೇ ನಟಿ ಪೂಜಾ ಸಾಕಷ್ಟು ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.

 

ಇದರೊಟ್ಟಿಗೆ ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಸಿನಿಮಾಗೆ ಹೂ ಎನ್ನುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕಿಕ್ – 2 ಸಿನಿಮಾದ ಮುಂಚೆ ಪೂಜಾ ‘ಹೌಸ್ಫುಲ್ 4’ ಚಿತ್ರದಲ್ಲೂ ನಟಿಸಿದ್ದರು. ಈ ಹಿಂದೆ ಅದು ಬಾಕ್ಸ್ ಆಫೀಸ್ನಲ್ಲೂಹಿಟ್ ಕೂಡ ಆಗಿತ್ತು. ಇದೇ ಸಂದರ್ಭದಲ್ಲೇ ಇವರ ಕಾಲ್ಶೀಟ್ ಅನ್ನು ಪಡೆದಿದ್ದರು ಎನ್ನಲಾಗಿದೆ. ಸದ್ಯ ತಮಿಳು ಮತ್ತು ತೆಲುಗಿನಲ್ಲಿ ಹೆಗ್ಡೆ ಬಿಝಿ ಆಗಿರುವ ಪೂಜಾರವರು ಅಲ್ಲುಅರ್ಜುನ್ ಜತೆಗಿನ ‘ಅಲಾ ವೆಂಕಟಪುರಂಲೋ’ ಚಿತ್ರದಲ್ಲಿ ನಟಿಸಿದ್ದು ಇದು ಮುಂದಿನ ವರ್ಷದ ಆರಂಭದಲ್ಲೇ ತೆರೆಗೆ ಬರಲಿದೆ.

 

ಪ್ರಭಾಸ್ ಜತೆ ‘ಜಾನ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಖಿಲ ಅಕ್ಕಿನೇನಿ ಸಿನಿಮಾಕ್ಕೂ ಇವರೇ ಹೀರೋಯಿನ್. ಕನ್ನಡದ ಬೆಡಗಿ ಪೂಜಾ ಹೆಗ್ಡೆ ಅವರದು ಮುಖ್ಯ ಪಾತ್ರವಾದರೆ ಕಿಕ್ 2ನಲ್ಲಿ ಇನ್ನೂ ಒಬ್ಬ ಬೆಡಗಿಯರು ಇರುತ್ತಾರೆ. ಕಿಕ್ ಭಾಗ 1ರಲ್ಲಿ ಅಭಿನಯಿಸಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಸಹ ಸಿನಿಮಾದಲ್ಲಿ ಇರುತ್ತಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here