‘ಕರ್ನಾಟಕಕ್ಕೆ ಪ್ರತ್ಯೇಕವಾದ ನಾಡ ಧ್ವಜದ ಅಗತ್ಯವಿಲ್ಲ’ ಎಂದ ಸಚಿವ ಸಿ.ಟಿ. ರವಿ..!

0
378

‘ಕರ್ನಾಟಕಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ. ರಾಷ್ಟ್ರಕ್ಕೆ ಒಂದೇ ಧ್ವಜ ಇರಲಿ. ಎರಡು ಧ್ವಜದ ಅವಶ್ಯಕತೆ ಇಲ್ಲ’ ಎಂಬ ಸಚಿವ ಸಿಟಿ ರವಿ ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕದ ನಾಡಧ್ವಜವನ್ನು ಸಾಂಸ್ಕೃತಿಕವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ ಎಂದು ಹೇಳುವ ಮೂಲಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆ ಕೈಬಿಟ್ಟಿರುವುದಾಗಿ ಸಚಿವ ಸಿ.ಟಿ. ರವಿ ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿಟಿ ರವಿ ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಬಾವುಟದ ಹಿರಿಮೆ ಗೊತ್ತಿಲ್ಲದ ಜನಪ್ರತಿನಿಧಿಗಳು ಯಾರೇ ಆಗಲಿ ರಾಜ್ಯ ಬಿಟ್ಟು ತೊಲಗಲಿ. ನೆಲ ಜಲಗಡಿ ಭಾಷೆ ಇವುಗಳ ಮೇಲೆ ಸ್ವಾಭಿಮಾನ ಇಲ್ಲದ ಬಿಜೆಪಿಯವರು ಮಾತ್ರ ಕನ್ನಡದ ಅಸ್ಮಿತೆಗೆ ಕನ್ನಡದ ಧ್ವಜಕ್ಕೆ ಅವಮಾನ ಮಾಡುವ ಆಲೋಚನೆ ಮಾಡಲು ಸಾಧ್ಯ ಎಂದು ಅನೇಕ ವಾಗ್ದಾಳಿ ನಡೆಸಿದ್ದಾರೆ.

“ನಿಮ್ಮನ್ನ, ನಿಮ್ಮ ಚೆಡ್ಡಿ ಪಡೆಯನ್ನ ಕೇಳಿ ನಾವು ಕನ್ನಡ ಬಾವುಟ ಹಾರಿಸಬೇಕೇ? ಇದೊಳ್ಳೆ ಕೋಳಿ ಕೇಳಿ ಮಸಾಲೆ ಅರಿದಂತಾಯ್ತಲ್ಲಾ? ಹೋಗ್ರಯ್ಯಾ ಹೋಗಿ.. ನಾವು ಎಲ್ಲೋದರೂ ಬಾವುಟ ಹಾರಿಸೇ ಹಾರಿಸ್ತೀವಿ.. ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ.. ಫೋಟೋ ನೋಡ್ಕೊಂಡು ತೆಪ್ಪಗೆ ಇರಿ..”

“ಕನ್ನಡ ಬಾವುಟ ಒಕ್ಕೂಟದ ಬಾವುಟಕ್ಕೆ ಪರ್ಯಾಯ ಅಲ್ಲ, ಕನ್ನಡ ನಾಡು ಒಕ್ಕೂಟಕ್ಕೆ ಪ್ರತಿಸ್ಪರ್ಧಿ ಅಲ್ಲ. ಬಾವುಟ ನಮ್ಮ ಗುರುತು ಆ ಗುರುತನ್ನು ಒಕ್ಕೂಟದ ಪ್ರಜೆಗಳಾಗಿ ಹೊಂದುವ,ತೋರಿಸಿಕೊಳ್ಳುವ ಹಕ್ಕು ಸ್ವಾತಂತ್ರ್ಯ ನಮಗಿದೆ.”
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ಒಕ್ಕೂಟ ಇದಕ್ಕೆ ವಿರೋಧಿಸುವ ಎಲ್ಲಾ ಶಕ್ತಿಗಳು ನಾಡ ದ್ರೋಹಿಗಳು

“ನಮ್ಮ ಕನ್ನಡ ಬಾವುಟವನ್ನು ನಾವು ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಅದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಸಿರಿಗನ್ನಡಮ್ ಗೆಲ್ಗೆ !! ಸಿರಿಗನ್ನಡಮ್ ಬಾಳ್ಗೆ !!
ನೆಲ ಜಲ ಗಡಿ ಭಾಷೆ ಇವುಗಳ ಮೇಲೆ ಸ್ವಾಭಿಮಾನ ಇಲ್ಲದ ಬಿಜೆಪಿಯವರು ಮಾತ್ರ ಕನ್ನಡದ ಅಸ್ಮಿತೆಗೆ ಕನ್ನಡದ ಧ್ವಜಕ್ಕೆ ಅವಮಾನ ಮಾಡುವ ಆಲೋಚನೆ ಮಾಡಲು ಸಾಧ್ಯ.
ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿಯ ಪ್ರತೀಕವು ನಮ್ಮ ಕನ್ನಡದ ಬಾವುಟ. #ಕನ್ನಡಧ್ವಜ_ಕನ್ನಡಿಗರಹೆಮ್ಮೆ”

LEAVE A REPLY

Please enter your comment!
Please enter your name here