ಸಂಪೂರ್ಣ ನಾಶವಾಗಿದ್ದ ದೇಶದಲ್ಲಿದೆ ನಮ್ಮೂರ ಹೆಸರು..!

0
203

ಭಾರತದ ಐಟಿ ರಾಜಧಾನಿ, ಸಿಲಿಕಾನ್ ವ್ಯಾಲಿ ಜಗದ್ವಿಖ್ಯಾತ ನಗರ ಬೆಂಗಳೂರು ಕರ್ನಾಟಕದ ಆಡಳಿತ ಕೇಂದ್ರ. ಇದು ವಿಶ್ವದಾದ್ಯಂತ ನೆಲೆಸಿರುವ ಜನರನ್ನು ತನ್ನತ್ತ ಅಯಸ್ಕಾಂತದಂತೆ ಸೆಳೆದುಕೊಂಡಿದೆ, ಇಲ್ಲಿ ನೂರಾರು ವಿಶೇಷತೆಗಳು ಇದ್ದು ಬಹಳಷ್ಟು ಜನರಿಗೆ ತಿಳಿಯದಂತಿದೆ. ಇಲ್ಲಿನ ಒಂದು ವೃತ್ತ ಇನ್ನೊಂದು ದೇಶದ ರಾಜಧಾನಿಯ ಹೆಸರು ಎಂಬುದು ಕುತೂಹಲ ಮೂಡಿಸುತ್ತದೆ.

ಸರಿ ಸುಮಾರು 1 ಕೋಟಿ ಜನಸಂಖ್ಯೆ ಹೊಂದಿರುವ ಶತಮಾನಗಳ ಇತಿಹಾಸವಿರುವ ದೇಶ ಈಗ ಪ್ರಗತಿಯತ್ತ ಸಾಗಿದೆ. ಇಲ್ಲಿನ ಕೈಗಾರಿಕೆ, ಕೃಷಿ ಎಲ್ಲವೂ ಮಾದರಿಯಂತಿದೆ. ಈ ಪುಟ್ಟದೇಶ ಜರ್ಮನಿಯ ನಾಜಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ನಾಜಿಗಳು ಈ ದೇಶವನ್ನು ಇನ್ನಿಲ್ಲದಂತೆ ಲೂಟಿ ಮಾಡಿದ್ದರು ಎರಡನೇ ಮಹಾಯುದ್ಧ ಸಮಯದಲ್ಲಿ. ಆದರೂ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಮುನ್ನಗ್ಗುತ್ತಿರುವ ಈ ರಾಷ್ಟ್ರ ಸಾಂಸ್ಕ್ರತಿಕ ಮತ್ತು ಭಾವನಾತ್ಮಕ ಸಂಬಂಧಗಳಿಗೆ ಕೊಡುವ ಬೆಲೆ ಅಷ್ಟಿಷ್ಟಲ್ಲ. ಈ ದೇಶದ ಒಂದು ನಂಟಸ್ಥಿಕೆ ನಮ್ಮ ಬೆಂಗಳೂರಿಗಿದೆ ಎನ್ನುವುದೇ ಖುಷಿಯ ವಿಚಾರ.

ಬೆಲೂರಷ್ಯನ್ ಭಾಷೆ ಮಾತನಾಡುವ ಮತ್ತು ರೂಬಲ್ ಎಂಬ ನಾಣ್ಯ ಪದ್ಧತಿ ಚಾಲ್ತಿಯಲ್ಲಿರುವ ಬೆಲರೂಸ್ ಎಂಬ ಪುಟ್ಟ ದೇಶ ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಕಂಡ ಏಳು ಬೀಳು ಸಾಮಾನ್ಯವಲ್ಲ. ಸ್ವಾವಿಕ್ ಎಂಬ ಮೂಲನಿವಾಸಿಗಳು ವಾಸವಾಗಿದ್ದ ಬೆಲೂರಸ್ ನಾಜಿಗಳ ಹೊಡೆತಕ್ಕೆ ಸಂಪೂರ್ಣ ನಾಶವಾಗಿತ್ತು ನಂತರ ಮರುನಿರ್ಮಿಸಿದ ಕೀರ್ತಿ ಅಲ್ಲಿನ ಪ್ರಜೆಗಳಿಗೆ ಸಲ್ಲಬೇಕು.

ಬೆಲೂರಸ್ 16 ನೇ ಶತಮಾನದಲ್ಲಿ ಪೋಲೆಂಡ್ ಆಳ್ವಿಕೆಗೆ ಒಳಪಟ್ಟರೆ ಮುಂದೆ 18 ನೇ ಶತಮಾನದಲ್ಲಿ ರಷ್ಯಾ ಆಡಳಿತಕ್ಕೆ ಒಳಪಟ್ಟಿತು. ಮೊದಲ ಮಹಾಯುದ್ಧ ಸಮಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯಿಂದ ಬೆಲೂರಸ್ ಹೊಸ ರೂಪಪಡೆಯಿತು ಸೋವಿಯತ್ ಒಕ್ಕೂಟದೊಂದಿಗೆ ಗುರುತಿಸಿಕೊಂಡಿತ್ತು 1992ರಲ್ಲಿ ಬೇರ್ಪಟ್ಟು ತನ್ನದೇ ಅಸ್ತಿತ್ವಕ್ಕಾಗಿ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿತು. ಇಲ್ಲಿನ ಸಾಂಸ್ಕøತಿಕ ಚಟುವಟಿಕೆಗಳು ಇಲ್ಲಿನ ಜನರ ಹವ್ಯಾಸವಾಗಿದ್ದು ರಷ್ಯಾದೊಂದಿಗಿನ ಉತ್ತಮ ಸಂಪರ್ಕ ಸಂಬಮಧಗಲು ಈ ಬೆಲೂರಸ್ ಬೆಳವಣಿಗೆಗೆ ನೆರವಾಗಿದೆ.

ಬೆಲೂರಸ್ ರಷ್ಯಾದೊಂದಿಗಿನ ಒಡನಾಟದಂತೆ ಇತರ ದೇಶಗಳೊಂದಿಗೂ ಚೆನ್ನಾಗಿದೆ. ಭಾರತ ದೇಶಕ್ಕೂ ಬೆಲೂರಸ್ ಸಂಬಂಧ ಗಟ್ಟಿಗೊಳ್ಳುತ್ತಲೇ ಇದೆ. ಇದೇ ಸಾಂಸ್ಕøತಿಕ ಸಂಬಂಧಕ್ಕಾಗಿ ಬೆಲೂರಸ್ ರಾಜಧಾನಿ ಮಿನ್ಸ್ಕ್‍ನಲ್ಲಿ ಬೆಂಗಳೂರಿನ ಹೆಸರಿನ ಒಂದು ಸರ್ಕಲ್ ನಿರ್ಮಿಸಲಾಗಿದೆ. ಇನ್ನು ನಮ್ಮ ಬೆಂಗಲೂರಿನಲ್ಲೂ ಮಿನ್ಸ್ಕ್ ಹೆಸರಿನ ಸರ್ಕಲ್ ನಿರ್ಮಿಸಿದ್ದು ಎರಡೂ ದೇಶಗಳ ಭಾಂದವ್ಯ ಗಟ್ಟಿಯಾಗಿದೆ.

LEAVE A REPLY

Please enter your comment!
Please enter your name here