ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ವರ್ಗಾವಣೆ, ತುಘಲಕ್ ಆಡಳಿತವಾಯ್ತಾ ಯಡ್ಡಿ ಆಡಳಿತ..!?

0
469

ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಇದೀಗ ದೆಹಲಿ ಸುಲ್ತಾನ ಮೊಮ್ಮದ್ ಬಿನ್ ತುಘಲಕ್‍ನ ಆಡಳಿತದತ್ತ ಸಾಗುತ್ತಿದೆ. ಇತಿಹಾಸದಲ್ಲಿ ಹುಚ್ಚು ನಿರ್ಧಾರಗಳಿಗೆ ಹೆಸರುವಾಸಿಯಾದ ತುಘಲಕ್ ತೆಗೆದುಕೊಂಡ ಎಲ್ಲ ನಿರ್ಧಾರಗಳು ಅವನ ಸಾಮ್ರಾಜ್ಯದ ವಿನಾಶಕ್ಕೆ ಕಾರಣವಾಗಿದ್ದವು. ಇದೇ ದಾರಿಯಲ್ಲಿ ಸಾಗುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಹುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಹೌದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಕೇವಲ ಎರಡು ತಿಂಗಳು ಮಾತ್ರ ಕಳೆದಿದೆ. ಆದರೆ ಈ ಅವಧಿಯಲ್ಲಿ 4000ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಇತಿಹಾಸದ ನಂಬರ್ ಒನ್ ಟ್ರಾನ್ಸ್ ಫರ್ ಸರ್ಕಾರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನರ ಪುತ್ರ ಬಿ.ವೈ. ವಿಜಯೇಂದ್ರ ಈ ವರ್ಗಾವಣೆಯ ದಂಧೆಗಿಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಸಹಕಾರ, ಇಂಧನ, ಲೋಕೋಪಯೋಗಿ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಭಾರೀ ಪ್ರಮಾಣದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಆ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಯಾವೊಂದು ಸರ್ಕಾರವೂ ಅಧಿಕಾರಕ್ಕೆ ಬರಬರುತ್ತಿದ್ದಂತೆಯೇ ಇಷ್ಟು ವರ್ಗಾವಣೆ ನಡೆಸಿರಲಿಲ್ಲ ಎಂಬ ದಾಖಲೆ ಸೃಷ್ಟಿಯಾಗಿದೆ.

ಎಲ್ಲ ಇಲಾಖೆಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ವರ್ಗಾವಣೆ ನಡೆದಿದೆ. ನಿರ್ದಿಷ್ಟ ಜಾಗಕ್ಕೆ ಇಂತಿಂತವರೇ ಬರಬೇಕು ಎಂದು ಬಿಜೆಪಿ ಸರ್ಕಾರ ಬಯಸಿರುವುದು ಸ್ಪಷ್ಟವಾಗಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಸಾವಿರಾರೂ ಕೋಟಿ ರೂಪಾಯಿಗಳಷ್ಟು ನಷ್ಟವಾದರೂ, ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ. ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ ನೆರವು ಬರದೆ ರಾಜ್ಯ ಸರ್ಕಾರ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಬಿ.ಎಸ್. ಯಡಿಯೂರಪ್ಪ ಒರ್ವ ದುರ್ಬಲ ಸಿಎಂ ಆಗಿದ್ದು, ಸ್ವಪಕ್ಷದ ಪ್ರಧಾನಿಯನ್ನು ಭೇಟಿ ಮಾಡಲು ಹೆಣಗಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here