ಏನಿದು ಕಣ್ವಮಠ ಸ್ವಾಮೀಯ ‘ರಾಸಲೀಲಿಯ’ ವೈರಲ್ ವೀಡಿಯೋ ಮತ್ತು ಆಡಿಯೋ..?

0
292

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹುಣಸಿಹೊಳಿ ಗ್ರಾಮದಲ್ಲಿ ಇರುವ ಪ್ರಮುಖ ಕಣ್ವಮಠ ಪೀಠಾಧಿಪತಿಯ ವಿದ್ಯಾವಾರೀಧಿತೀರ್ಥ ಸ್ವಾಮೀಜಿಯ ಕಾಮಪುರಾಣದ ಆಡಿಯೋ ವೈರಲ್‍ಗೊಂಡ ಹಿನ್ನೆಲೆ ಸ್ವಾಮೀಜಿ ಪೀಠತ್ಯಾಗ ಮಾಡಲು ಮುಂದಾಗಿದ್ದಾರೆ. ಸ್ವಾಮೀಜಿಯ ಕಾಮಪುರಾಣ ಆಡಿಯೋ ಸದ್ಯ ಸ್ಥಳೀಯ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಈ ಕುರಿತು ಹೇಳಿಕೆ ನೀಡಿರುವ ವಿದ್ಯಾವಾರಿಧಿತೀರ್ಥ ಸ್ವಾಮಿಗಳು ಇದು ಒಂದು ಮೋಸ, ಇದರಲ್ಲಿ ನಂದೇನು ತಪ್ಪಿಲ್ಲ.! ನಾನು ತಪಿತಸ್ಥನಲ್ಲ, ಇದೆಲ್ಲಾ ಕೆಲವರ ಷಡ್ಯಂತ್ರ ಎಂದು ಹೇಳಿಕೊಂಡಿದ್ದಾರೆ.

ಕಣ್ವಮಠ ಪೀಠಾಧಿಪತಿಯಾದ ಶ್ರೀ ವಿದ್ಯಾವಾರೀಧಿತೀರ್ಥ ಸ್ವಾಮಿಗಳ ಅಕ್ರಮ ಸಂಬಂಧದ ಗುಟ್ಟು ರಟ್ಟಾಗಿರುವುದು ಎಲ್ಲಡೆ ಸಾಕಷ್ಟು ಸುದ್ದಿಯಾಗುತ್ತಿದ್ದು, ಹಲವರು ಕಿಡಿಕಾರಿದ್ದಾರೆ. ಸ್ವಾಮೀಜಿಯ ವಿರುದ್ದವೇ ಹಲವು ಸಾಕ್ಷಿಗಳು ಇದ್ದರೂ ಕೂಡ ಇದರಲ್ಲಿ ನನ್ನದೂ ಯಾವ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಮೇಲೆ ಕೆಳೆದ 3-4 ವರ್ಷಗಳಿಂದಲೂ ಈ ರೀತಿಯ ಆರೋಪ ಮಾಡವವರು ಹೆಚ್ಚಾಗಿದ್ದಾರೆ. ಈ ಪೀಠದ ಹೆಸರು ಹಾಳು ಮಾಡುವ ಉದ್ದೇಶದಿಂದ ಹಲವು ಷಡ್ಯಂತ್ರಗಳನ್ನು ರೂಪಿಸಿ ಈ ರೀತಿ ಮಾಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಮೈಸೂರು ಮೂಲದ ಮಹಿಳೆಯೊಂದಿಗೆ ಅಶ್ಲೀಲವಾಗಿ ವಾಟ್ಸಪ್‍ನಲ್ಲಿ ಸಂಭಾಷಣೆ ನಡೆಸಿರುವುದು ತಿಳಿದುಬಂದಿದೆ. ವಾಟ್ಸಪ್‍ನಲ್ಲಿ ನಡೆಸಿರುವ ಚಾಟ್‍ಗಳು ಸೇರಿದಂತೆ ವೀಡಿಯೋ ಮತ್ತು ಆಡಿಯೋ ಬಹಿರಂಗವಾಗಿದ್ದರೂ ಕೂಡ ಸ್ವಾಮೀಗಳು ಇದು ನಾನು ಮಾಡಿರುವ ಸಂದೇಶಗಳಲ್ಲ. ನನ್ನ ಮೊಬೈಲ್ ಬೇರೆಯವರು ಉಪಯೋಗಿಸಿ ಈ ಕುತಂತ್ರದ ಕೆಲಸ ಮಾಡಿದ್ದಾರೆ. ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ. ಅನ್ಯರ ಷಡ್ಯಂತ್ರಗಳಿಗೆ ನಾನು ಬಲಿಪಶು ಆಗಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿಹಾಕ್ಕಿದ್ದಾರೆ.

LEAVE A REPLY

Please enter your comment!
Please enter your name here