ಕನ್ನಡ ಚಿತ್ರದ ಶೂಟಿಂಗ್ ಸೆಟ್ ಅನ್ನು ತಮಿಳು ಚಿತ್ರದ ಚಿತ್ರೀಕರಣಕ್ಕೆ ಬಿಟ್ಟು ಕೊಟ್ಟು ಭಾಂದವ್ಯ ಬೆಸೆದ ಕನ್ನಡಿಗರು !

0
320

ಕನ್ನಡಿಗರು ವಿಶಾಲ ಮನೋಭಾವ ಉಳ್ಳವರು, ಸ್ನೇಹಕ್ಕೂ ಸಿದ್ದ ಸಮರಕ್ಕೂ ಬದ್ದ ಎನ್ನುವುದನ್ನು ಮತ್ತೊಮ್ಮೆ ಸಾಭಿತು ಮಾಡಿದ್ದಾರೆ. ಚಿತ್ರರಂಗದ ವಿಚಾರದಲ್ಲಿ ಕನ್ನಡ ಮತ್ತು ತಮಿಳು ಚಿತ್ರರಂಗಕ್ಕೂ ಮೊದಲಿನಂದಲೂ ಉತ್ತಮವಾದ ನಂಟಿದೆ. ಅಂದಿನ ಕಾಲದಲ್ಲಿ ಕನ್ನಡದ ಬಹುತೇಕ ಸಿನಿಮಾಗಳು ಚಿತ್ರೀಕರಣವಾಗುತ್ತಿದಿದ್ದು ಮದ್ರಾಸಿನಲ್ಲಿ. ಇತ್ತೀಚಿಗೆ ರಜನಿಕಾಂತ್ ಸೇರಿದಂತೆ ಸಾಕಷ್ಟು ತಮಿಳಿನ ಸ್ಟಾರ್ ಸಿನಿಮಾಗಳು ಬಹುತೇಕ ಚಿತ್ರೀಕರಣವಾಗುವುದು ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ.

 

 

ಕರ್ನಾಟಕವನ್ನು ಹೊರೆತು ಪಡಿಸಿ ಬೇರೆ ರಾಜ್ಯದ ಕಾರಾಗೃಹದಲ್ಲಿ, ಚಿತ್ರೀಕರಣದ ಅನುಮತಿ ನೀಡುತ್ತಿಲ್ಲ. ಆದ ಕಾರಣ ತಮಿಳಿನ ಸ್ಟಾರ್ ನಟರ ಸಿನಿಮಾದ ಚಿತ್ರೀಕರಣಕ್ಕಾಗಿ, ಕನ್ನಡ ಸಿನಿಮಾಗೆ ಹಾಕಿದ್ದ ಸೆಟ್
ಅನ್ನು ಬಿಟ್ಟುಕೊಟ್ಟು, ಭಾಂದವ್ಯ ಬೆಸೆದಿದ್ದಾರೆ ! ಯಾವ ಸಿನಿಮಾ ? ಯಾವ ಸ್ಟಾರ್ ನಟರು ತಿಳಿದುಕೊಳ್ಳಲು ಮುಂದೇ ಓದಿ.

 

 

ರಿಯಲ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಚಿತ್ರ ಬುದ್ಧಿವಂತ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸತತ 13 ದಿನಗಳ ಕಾಲ ಶಿವಮೊಗ್ಗದ ಕಾರಗೃಹದಲ್ಲಿ ಚಿತ್ರೀಕರಣ ನಡೆಸಿದೆ. ಎಂ. ಜಯರಾಮ್ ಅವರ ನಿರ್ದೇಶನಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿಯಲ್ಲಿ ಟಿ.ಆರ್ ಚಂದ್ರಶೇಖರ್ ನಿರ್ಮಿಸಿದ್ದು, ಸದ್ಯ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾಗಿದೆ.

 

 

ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿ ಮೂಡಿ ಬರುತ್ತಿರುವ ಎಲ್ಲಾ ಸಿನಿಮಾಗಳು ಉತ್ತಮ ವ್ಯಾಪಾರ ಮತ್ತು ವಹಿವಾಟು ನಡೆಸುತ್ತಿವೆ. ಈ ಸಂಸ್ಥೆ ಹಿಂದೆ ನಿರ್ಮಿಸಿದ್ದ ಎಲ್ಲಾ ಸಿನಿಮಾಗಳಿಗಿಂತ, ಬುದ್ದಿವಂತ-2 ಸಿನಿಮಾ ದೊಡ್ಡ ಬಜೆಟ್ ನಲ್ಲಿ ಮೂಡಿ ಬರುತ್ತಿದೆ ! ಲಕ್ಷಾಂತರ ರೂ. ಖರ್ಚು ಮಾಡಿ ಶಿವಮೊಗ್ಗ ಕಾರಾಗೃಹದಲ್ಲಿ ಚಿತ್ರೀಕರಣ ನಡೆಸಿದ್ದು, ಸಿನಿಮಾಗೆ ಬೇಕಿದ್ದ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡಿದೆ. ಮೊನ್ನೆಯಷ್ಟೆ ಚಿತ್ರೀಕರಣ ಮುಗಿಸಿ, ಬೆಂಗಳೂರಿಗೆ ವಾಪಸ್ ಆಗಲು ರೆಡಿಯಾಗುತ್ತಿದ್ದರು.

 

 

ಆ ಸಮಯದಲ್ಲಿ ತಮಿಳಿನ ತಲಪತಿ ವಿಜಯ್-64 ಸಿನಿಮಾದ ಪ್ರೊಡಕ್ಷನ್ ಮ್ಯಾನೆಜರ್ ಬಂದು ಚಿತ್ರತಂಡವನ್ನು ಭೇಟಿ ಮಾಡಿ, `ಮುಂದಿನ ದಿನದಿಂದ ನಮ್ಮ ಸಿನಿಮಾದ ಚಿತ್ರೀಕರಣವನ್ನು ಇಲ್ಲಿ ಮಾಡುತ್ತಿದ್ದೇವೆ, ನಿಮಗೇನು ಅಭ್ಯಂತರವಿಲ್ಲ ಎಂದರೆ ನೀವು ಸೃಷ್ಟಿಸಿರುವ ಸೆಟ್ ಅನ್ನು ಹಾಗೇ ಬಿಡಲು ಸಾಧ್ಯವಾಗುತ್ತದೆಯೇ’? ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಮನಸ್ಪೂರ್ವಕವಾಗಿ ಸಂತಸದಿಂದ ಟಿ.ಆರ್.ಚಂದ್ರಶೇಖರ್ ಅವರು ಒಪ್ಪಿಕೊಂಡಿದ್ದು, ಬಹಳ ಅತ್ಮೀಯವಾಗಿ ಮಾತನಾಡಿ, ಈಗಾಗಲೇ ನಾವು ಬಳಸಿದ್ದೇವೆ ನಿಮಗೂ ಇದು ಉಪಯೋಗವಾಗುತ್ತದೆ ಎಂದರೆ ಅದಕ್ಕಿಂತ ಸಮಾಧಾನದ ವಿಚಾರ ಬೇರೆ ಏನಿದೆ ಎಂದಿದ್ದಾರೆ.

 

 

ಈಗಾಗಲೇ ಶಿವಮೊಗ್ಗದ ಕಾರಾಗೃಹದಲ್ಲಿ ಚಿತ್ರಿಕರಣವನ್ನು ಪ್ರಾರಂಭಿಸಿದ್ದು, ಇನ್ನೂ ಹೆಸರಿಡದ ಈ ಸಿನಿಮಾಗೆ ಲೋಕೇಶ್ ಕನಕರಾಜ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆನೆಂದರೆ ಮಲ್ಟಿ ಸ್ಟಾರ್ ಸಿನಿಮಾ ಇದಾಗಿದ್ದು, ತಮಿಳಿನ ಸೂಪರ್ ಸ್ಟಾರ್ ಗಳಾದ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ವಿಜಯ್ ನಾಯಕನಾದರೆ, ವಿಜಯ್ ಸೇತುಪತಿ ಖಳನಾಯಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ ಎಂಬ ಸುದ್ಧಿ ಹೊರಬಂದಿದೆ.

 

 

ಕನ್ನಡ ಚಿತ್ರತಂಡ ದೊಡ್ಡ ಮನಸ್ಸಿನಿಂದ ತಮಿಳು ಸಿನಿಮಾವೊಂದಕ್ಕೆ, ಸಲೀಸಾಗಿ ಚಿತ್ರೀಕರಣಕ್ಕೆ ಸಹಕರಿಸಿರುವುದು, ಸದ್ಯ ಎರಡೂ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಕಾರಣವಾಗಿದೆ ಎನ್ನಬಹುದು !

LEAVE A REPLY

Please enter your comment!
Please enter your name here