ಕನ್ನಡಿಗರು ಬಿಬಿಎಂಪಿ ವಿರುದ್ಧ ಕಿಡಿಕಾರಲು ಕಾರಣವೇನು.?

0
129

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ಸದಾ ಯಾವುದಾದರೂ ಒಂದು ಎಡವಟ್ಟು ಮಾಡಿಕೊಳ್ಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು ತೀರ ಸಹಜವಾಗಿ ಹೋಗಿದೆ. ಅದೇ ರೀತಿಯಲ್ಲಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಘಟನೆಯೊಂದು ನಡೆದಿದೆ. ಹೌದು, ಪ್ರತಿ ಬಾರಿ ಕರ್ನಾಟಕದಲ್ಲಿ ಕನ್ನಡ ಮೊದಲು ಆನಂತರ ಬೇರೆ ಭಾಷೆಗಳಿಗೆ ಪ್ರಾಮುಖ್ಯತೆ ನೀಡಬೇಕು, ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು ಎಂದು ಹೇಳುವ ಬಿಬಿಎಂಪಿ ತನ್ನ ಮಾತನ್ನು ಮರೆತು ಮಾಡುವ ಪ್ರತಿಯೊಂದು ಕೆಲಸ ಅದಕ್ಕೆ ಬದ್ಧವಾಗಿರುವ ಬದಲು ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

 

 

ಬಿಬಿಎಂಪಿ ಪಾಲಿಕೆಯೇ ನೋಟಿಸ್ ನಲ್ಲಿ ಕನ್ನಡವನ್ನು ಬಳಸುವ ಬದಲು ಇಂಗ್ಲಿಷಿನಲ್ಲಿ ನಮೂದಿಸಿ ನೀಡಿರುವ ನೋಟಿಸ್ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ. ಕೆ.ಆರ್ ಮಾರುಕಟ್ಟೆಯಲ್ಲಿ ಅಕ್ರಮ ಮಳಿಗೆಗಳು ತೆರೆದುಕೊಂಡಿರುವ ಕಾರಣಕ್ಕಾಗಿ ಮಳಿಗೆಗಳ ತೆರವಿಗೆ ಬಿಬಿಎಂಪಿ ನೋಟಿಸ್ ನೀಡಿತ್ತು. ಕನ್ನಡದಲ್ಲಿ ಉಲ್ಲೇಖಿಸಬೇಕಾದ ನೋಟಿಸ್ನಲ್ಲಿ ಸಂಪೂರ್ಣವಾಗಿ ಇಂಗ್ಲಿಷಿನಲ್ಲಿ ಉಲ್ಲೇಖಿಸಿ ಪ್ರಕಟಿಸಿದ ಕಾರಣ ದೊಡ್ಡ ವಿವಾದಕ್ಕೆ ಸಿಲುಕಿಕೊಂಡಿದೆ.

 

 

ಸದಾ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವ ಬಿಬಿಎಂಪಿ ವೆಸ್ಟ್ ಸಹಾಯಕ ಕಂದಾಯಧಿಕಾರಿಗೆ ತಲುಪಿಸುವ ನೋಟಿಸ್ನಲ್ಲಿ ಇಂಗ್ಲಿಷ್ ಬರೆದ ಪರಿಣಾಮ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.ಕೆಲ ತಿಂಗಳ ಹಿಂದೆ ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಕನ್ನಡ ಬದಲು ಇಂಗ್ಲಿಷ್ ಹೆಚ್ಚಾಗುತ್ತಿದೆ. ಇಂಗ್ಲಿಷ್ ಭಾಷೆಯಲ್ಲಿರುವ ನಾಮಫಲಕದಲ್ಲಿ ಕನ್ನಡ ಮೊದಲು ಇರಬೇಕು, ಅಗ್ರಸ್ಥಾನ ನೀಡುವ ವಿಚಾರವಾಗಿ ತಿಳಿಸಿತ್ತು. KFCCI( ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ)

 

 

ಇದರ ಜೊತೆಗೆ ಬಿಬಿಎಂಪಿಗೆ ರಸ್ತೆಯಲ್ಲಿರುವ ಹಳ್ಳಗಳು, ಸಂಚಾರ ನಿಯಮಗಳ ಫಲಕಗಳು, ಟ್ರಾಫಿಕ್ ಸಮಸ್ಯೆ, ಕಳಪೆ ಕಾಮಗಾರಿ, ನಿಂತ ಮಳೆ ನೀರು ಇಂಥ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಿಬಿಎಂಪಿ’ಗೆ ಇದನ್ನು ಶೀಘ್ರವಾಗಿ ನಿರ್ವಹಿಸಬೇಕೆಂದು ತಿಳಿಸಿತ್ತು. ಜೊತೆಗೆ ನಾಮಫಲಕದಲ್ಲಿ ಕನ್ನಡ ಅಳವಡಿಕೆಯ ವಿಚಾರದಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ಕಿರುಕುಳ ನೀಡಬಾರದೆಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.

LEAVE A REPLY

Please enter your comment!
Please enter your name here