ಕಳೆದ ವರ್ಷ ಬಿಡುಗಡೆಯಾದ ‘ಕೆಜಿಎಫ್’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಬರೋಬ್ಬರಿ ಐದು ಭಾಷೆಗಳಲ್ಲಿ ಬಿಡುಗಡೆಗೊಂಡು ಈ ಚಿತ್ರ ಭರಪೂರ ಮನರಂಜನೆಯನ್ನು ನೀಡಿತ್ತು… ನಾಯಕನಿಂದ ಹಿಡಿದು, ನಾಯಕಿ, ವಿಲನ್, ಪುಟಾಣಿ ಮಕ್ಕಳು, ಸಪೋರ್ಟಿಂಗ್ ಆರ್ಟಿಸ್ಟ್ ಗಳು ಕೂಡ ಚೆಂದವಾಗಿ ತೆರೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಸಿದ್ದರು. ಯಶ್ ಹೊರತುಪಡಿಸಿ ಚಿತ್ರದ ಪ್ರಮುಖ ವಿಲನ್ ಗರುಡ ಪಾತ್ರಧಾರಿಯಾಗಿ ಮಿಂಚಿದ ರಾಮ್ ರವರು ಕೂಡ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಇದೀಗ ಗರುಡಾ ರಾಮ್ ನಟನಾ ಕಲೆಯನ್ನು ಪರಭಾಷೆಯಲ್ಲಿ ಪಸರಿಸಲು ತಯಾರಾಗಿದ್ದಾರೆ.

ಹೌದು, ‘ಕೆಜಿಎಫ್’ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ರಾಮಚಂದ್ರ ರಾಜು, ಗರುಡ ಪಾತ್ರದಲ್ಲಿ ಖಡಕ್ ಆಗಿ ನಟಿಸಿದ್ದಾರೆ. ಗರುಡರವರ ಮೈಕಟ್ಟು, ಅವರ ಡೈಲಾಗ್ ಹೇಳುವ ಪರಿ, ಪ್ರತಿಯೊಂದು ನೋಡುಗರನ್ನು ಸೆಳೆದಿತ್ತು. ರಾಮ್ ರವರ ಗರುಡ ಪಾತ್ರ ಅಭಿಮಾನಿಗಳಿಗೆ ಬಹಳಷ್ಟು ಇಷ್ಟವಾಗಿತ್ತು.
ಇದೀಗ ಹೊಸ ವಿಷಯವೇನೆಂದರೇ, ‘ಜಯಂ’ ರವಿ ಹಾಗೂ ತಾಪ್ಸಿ ಪನ್ನು ಅಭಿನಯದ ಇನ್ನೂ ಹೆಸರಿಡದ ತಮಿಳು ಸಿನಿಮಾದಲ್ಲಿ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅಹ್ಮದ್ ನಿರ್ದೇಶನ ಮಾಡುತ್ತಿದ್ದು, ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ಮುಂದಿನ ಶೆಡ್ಯೂಲ್ ನಲ್ಲಿ ರಾಮ್ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಗರುಡಾ ರಾಮ್ ರಶ್ಮಿಕಾ ಹಾಗೂ ಕಾರ್ತಿ ನಟಿಸುತ್ತಿರುವ ‘ಸುಲ್ತಾನ್’ ಚಿತ್ರತಂಡದಲ್ಲಿ ಭಾಗಿಯಾಗಿದ್ದಾರೆ. ಕನ್ನಡದ ಪ್ರತಿಭೆ ಗರುಡಾ ರಾಮ್ ಇದೀಗ ಬೇರೆ ಭಾಷೆಯಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಉಂಟು ಮಾಡಿದೆ.