ಕನ್ನಡ ಕೋಗಿಲೆ -2 ವಿನ್ನರ್ ಖಾಸೀಮ್ ಅಲಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನೆರವಾಗಿದ್ದಾರೆ. ಹೌದು, ಕೃಷ್ಣಾ ತೀರದ ಜನರ ಬಳಿ ತೆರಳಿದ ಖಾಸೀಮ್ ಅಲಿ ಹಾವೇರಿಯಿಂದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಅಗತ್ಯವಸ್ತುಗಳನ್ನು ತಂದು ಪ್ರವಾಹ ಸಂತ್ರಸ್ತರಿಗೆ ನೀಡಿದ್ದಾರೆ. ಖಾಸೀಮ್ ಅವರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅದೇ ರೀತಿ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆಯಲ್ಲಿ ತೆರೆಯಲಾದ ಆಶ್ರಯ ಕೇಂದ್ರಕ್ಕೆ ಭೇಟಿ ನೀಡಿದ ಖಾಸೀಮ್ ಅಲಿ ಬಟ್ಟೆ, ಹಾಸಿಗೆ, ಹೊದಿಕೆ ಹಾಗೂ ದಿನಬಳಕೆಯ ವಸ್ತುಗಳನ್ನು ಸಂತ್ರಸ್ಥರಿಗೆ ನೀಡಿದರು. ಈ ಈ ವೇಳೆ ಮಾತನಾಡಿದ ಖಾಸೀಮ್ ಅಲಿ, “ನಮ್ಮ ಮನೆಯೂ ಸೇರಿ ಉತ್ತರ ಕರ್ನಾಟಕದ ಬಹುತೇಕ ಭಾಗ ಪ್ರವಾಹದಿಂದ ಮುಳುಗಿದೆ. ಅದನ್ನು ನೋಡಿ ನನಗೆ ತುಂಬಾ ಬೇಸರವಾಗಿತ್ತು. ನನ್ನ ಕಡೆಯಿಂದ ಏನಾದರೂ ಅಳಿಲು ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಸೇವೆ ಮಾಡಿದ್ದೇನೆ. ಇನ್ನು ಕರ್ನಾಟಕ ಜನತೆ ನನಗೆ ಪ್ರೀತಿ ಕೊಟ್ಟು ವೋಟ್ ಮಾಡುವ ಮೂಲಕ ಕನ್ನಡ ಕೋಗಿಲೆ ಸೀಸನ್- 2 ವಿಜೇತರನ್ನಾಗಿ ಮಾಡಿದ್ದಾರೆ. ಈ ಮೂಲಕವಾದರು ಅವರಿಗೆ ನಾನು ಕೃತಜ್ಞತೆ ಹೇಳುತ್ತೇನೆ” ಎಂದರು.
