ಖ್ಯಾತ ಹಿಂದಿ ನಟಿಗೆ ಮೂರು ಭಾಷೆಗಳಲ್ಲಿ ಧ್ವನಿ ನೀಡುತ್ತಿರುವ ಕನ್ನಡದ ನಂದಿತ ಶ್ವೇತ

0
582

‘ಜಿಂಕೆ ಮರೀನಾ…ನೀ ಜಿಂಕೆ ಮರೀನಾ’ ಹಾಡು ನೆನಪಿದೆ ಅಲ್ವಾ..? ‘ನಂದ ಲವ್ಸ್ ನಂದಿತ’ ಚಿತ್ರದ ಹಾಡು ಇದು. ಈ ಸಿನಿಮಾದಲ್ಲಿ ಯೋಗೀಶ್ ಜೊತೆ ನಟಿಸಿದ್ದ ನಂದಿತ ಶ್ವೇತ ಕೂಡಾ ನಿಮಗೆ ಚೆನ್ನಾಗಿ ನೆನಪಿರಬಹುದು.

 

 

ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿನಟಿಸಿದ ನಂತರ ತಮಿಳಿನಲ್ಲಿ ಅವಕಾಶ ದೊರೆತಿದ್ದರಿಂದ ಶ್ವೇತ ಚೆನ್ನೈಗೆ ಹಾರಿದರು. ಇದಾದ ನಂತರ ತೆಲುಗು ಸಿನಿಮಾಗಳಲ್ಲಿ ಕೂಡಾ ನಟಿಸಿದರು. ಇದೀಗ ನಂದಿತ ಶ್ವೇತ ಕನ್ನಡಕ್ಕಿಂತ ತೆಲುಗು, ತಮಿಳು ಚಿತ್ರಪ್ರೇಮಿಗಳಿಗೆ ಹೆಚ್ಚು ಪರಿಚಯ. ಸದ್ಯಕ್ಕೆ ತೆಲುಗು, ಕನ್ನಡ, ತಮಿಳು ಸೇರಿ ಸುಮಾರು 4-5 ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

 

 

ಇನ್ನು, ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿರುವ ಸಲ್ಮಾನ್ ಖಾನ್ ಹಾಗೂ ಸುದೀಪ್ ಅಭಿನಯದ ‘ದಬಾಂಗ್ -3’ ಚಿತ್ರದ ಸೋನಾಕ್ಷಿ ಸಿನ್ಹ ಅವರ ಪಾತ್ರಕ್ಕೆ ಶ್ವೇತ ಡಬ್ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ ಭಾಷೆಯ ವರ್ಷನ್ಗೆ ಧ್ವನಿ ನೀಡಿದ್ದಾರೆ. ಶ್ವೇತ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸೋನಾಕ್ಷಿ ಅವರಂತ ನಟಿಗೆ ಧ್ವನಿ ನೀಡಿದ್ದಕ್ಕೆ ನನಗೆ ಖುಷಿ ಆಗುತ್ತಿದೆ. ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here