ಜಯಲಲಿತಾ ಆಗಿ ಕಂಗನಾ ನಿತ್ಯಾ ಮೆನನ್ ಆಯ್ತು.. ಈಗ ಮೂರನೆಯವರ ಸರದಿ !

0
247

ಜಯಲಲಿತಾ ಅವರ ಜೀವನ ಚರಿತ್ರೆ ಕುರಿತು ಎರಡು ಸಿನಿಮಾಗಳು ರೆಡಿಯಾಗುತ್ತಿವೆ. ಕಾಲಿವುಡ್ ನಲ್ಲಿ ‘ದಿ ಐರನ್ ಲೇಡಿ’ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ತಯಾರಾಗುತ್ತಿದ್ದರೆ, ಜಯಲಲಿತಾ ಅವರ ಪಾತ್ರದಲ್ಲಿ ನಿತ್ಯಾ ಮೆನನ್ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಬಾಲಿವುಡ್ ನಲ್ಲಿ ಜಯಲಲಿತಾ ಆಗಿ ಕಂಗನಾ ಕಾಣಿಸಿಕೊಂಡಿರುವ ತಲೈವಿ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕೊಂಚ ಬೇಸರ ಉಂಟಾಗಿದೆ.!

 

 

ಕಂಗನಾ ರನೌತ್ ನಟನೆಯ ವಿಷಯಕ್ಕೆ ಬಂದರೆ ಮಾತೇ ಇಲ್ಲ.. ತಮ್ಮ ಅದ್ಭುತ ನಟನೆಯಿಂದ ಎಲ್ಲರನ್ನು ಗಮನ ಸೆಳೆಯುತ್ತಾರೆ. ಆದರೆ ತಲೈವಿ ಸಿನಿಮಾದಲ್ಲಿ ಎಡವಿದ್ದಾರೆ ಎಂದು ಸಾಕಷ್ಟು ಸಿನಿ ತಜ್ಞರು ಮಾತನಾಡುತ್ತಿದ್ದಾರೆ!

 

 

ಈಗ ಇವೆರಡೂ ಸಿನಿಮಾಗಳಿಗೂ ಫೈಟ್ ನೀಡೋದಕ್ಕೆ ‘ಕ್ವೀನ್’ ಎಂಬ ಶೀರ್ಷಿಕೆಯುಳ್ಳ ವೆಬ್ ಸೀರಿಸ್ ಒಂದು ರೆಡಿಯಾಗಿದೆ. ಇನ್ನು ಈ ಕಥೆಯೂ ಕೂಡ ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಆಧಾರಿಸಿದೆ!

ಈ ವೆಬ್ ಸೀರೀಸ್ ನಲ್ಲಿ ಜಯಲಲಿತಾ ಅವರ ಬಗ್ಗೆ ಮೂರು ಹಂತದಲ್ಲಿ ಕಥೆ ಎಣೆಯಲಾಗಿದೆ. ಬಾಲ್ಯದ ಜೀವನ, ಟೀನೆಜ್ ಕಥೆ (ಅದರಲ್ಲಿ ಸಿನಿಮಾ ನಟಿ ಆದ ಕಥೆ) ಹಾಗೂ ರಾಜಕೀಯ ಜೀವನವನ್ನು ತೆರೆಗೆ ತರಲಾಗುತ್ತಿದೆ. ವಿಶೇಷ ಅಂದರೆ ಜಯಲಲಿತಾ ಅವರ ಪಾತ್ರದಲ್ಲಿ ಬಹುಭಾಷಾ ನಟಿ ರಮ್ಯಾಕೃಷ್ಣನ್ ನಟಿಸುತ್ತಿದ್ದು, ಈಗಷ್ಟೇ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

 

 

ಗೌತಮ್ ಮೆನನ್ ಮತ್ತು ಪ್ರಶಾಂತ್ ಮುರುಗೇಶನ್ ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದು, ಡಿಸೆಂಬರ್ 5 ರಂದು ಕ್ವೀನ್ ವೆಬ್ ಸೀರೀಸ್ ಟ್ರೈಲರ್ ಬಿಡುಗಡೆಯಾಗುತ್ತಿದೆ. ಈ ವೆಬ್ ಸೀರೀಸ್ ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಸಾರವಾಗಲಿದೆ. ಈಗಷ್ಟೇ ಟೀಸರ್, ಟ್ರೈಲರ್ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ, ಪ್ರಸಾರದ ದಿನಾಂಕ ಸದ್ಯ ಪ್ರಕಟಿಸಿಲ್ಲ.

LEAVE A REPLY

Please enter your comment!
Please enter your name here