ಬೆಂಗಳೂರು: 35 ರ ಹರೆಯದ ಬೆಡಗಿ ನಟಿ ಕಾಜಲ್ ಅಗರ್ವಾಲ್ ಮದ್ವೆ ಆಗಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಕಾಜಲ್ ನಂಗೂ ಮದ್ವೆ ಫಿಕ್ಸ್ ಆಯ್ತು ಅಂತ ಖುಷ್ ಆಗಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಕ್ಷೇತ್ರದಲ್ಲಿರುವ ನಟ ನಟಿಯರನ್ನ ಮದ್ವೆ ಬಗ್ಗೆ ವಿಚಾರಿಸಿದರೆ ನಂಗಿನ್ನೂ ಟೈಂ ಇದೆ.. ಬೆಸ್ಟ್ ಪಾರ್ಟ್ನರ್ ಸಿಕ್ಕಾಗ ಆದ್ರಾಯ್ತು ಅನ್ನೋ ವಿಚಾರ ಸಾಮಾನ್ಯವಾಗಿ ಕೇಳಿ ಬರುತ್ತೆ. ಆದ್ರೆ ಅವ್ರ ಸುತ್ತ ಕಟ್ಟೋ ಕಥೆಗಳ ವಿಚಾರ ಕೇಳ್ಬೇಕಾ.. ಅವ್ರು ಯಾರ್ಯಾರ ಜೊತೆ ಓಡಾಡ್ತಾರೋ ಅವ್ರ ಸುತ್ತ ಒಂದು ಕಣ್ಣಿರುತ್ತೆ.
ಕೆಲ ದಿನಗಳ ಹಿಂದಷ್ಟೇ ನಟಿ ಕಾಜಲ್ ಅಗರ್ವಾಲ್ ಮದ್ವೆ ವಿಚಾರ ಸದ್ದು ಮಾಡಿತ್ತು. ಕಾಜಲ್ ಒಬ್ಬರ ಜೊತೆ ಬಹಳ ಕ್ಲೋಸ್ ಆಗಿದ್ದಾರೆ. ಮದ್ವೆ ಆಗೋ ಮನಸ್ಸು ಮಾಡಿದ್ದಾರೆ.
ಲಾಕ್ಡೌನ್ ನಲ್ಲೇ ಕಾಜಲ್ ಸಿಂಪಲ್ ಆಗಿ ಎಂಗೇಜ್ ಆಗಿದ್ದಾರೆ. ಮುಂಬೈನಲ್ಲೇ ಆ ಕಾರ್ಯಕ್ರಮ ನಡೆದಿದೆಯಂತೆ ಎಂದೆಲ್ಲ ರೂಮರ್ ಕ್ರಿಯೇಟ್ ಆಗಿತ್ತು. ಇದೆಲ್ಲಾ ಗಾಸಿಪ್ ಗೂ ಬ್ರೇಕ್ ಹಾಕಿದ ಕಾಜಲ್, ನನ್ನ ಮದ್ವೆ ಫಿಕ್ಸ್ ಆಗಿದೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಹಸೆಮಣೆಗೆ ಇದೇ ತಿಂಗಳ 30 ರಂದು ಏರಲಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಕಾಜಲ್ ಅಗರ್ವಾಲ್ ನಂಗೊಬ್ರು ಬೆಸ್ಟ್ ಪಾರ್ಟ್ನರ್ ಸಿಕ್ಕಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ನಾನು ವೈವಾಹಿಕ ಜೀವನಕ್ಕೆ ಅಡಿಗಲ್ಲು ಇಡುತ್ತಿದ್ದೇನೆ. ಕೋವಿಡ್ 19 ಕಾರಣ ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ತಿಳಿಸಿದ್ದಾರೆ. ಮತ್ತು ಚಿತ್ರರಂಗದ ಕುರಿತು ಬರೆದುಕೊಂಡಿದ್ದಾರೆ. ಮದುವೆ ಆದೆ ಎಂದ ಮಾತ್ರಕ್ಕೆ ಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಲಾರೆ. ಮುಂದೆಯೂ ಚಿತ್ರಗಳಲ್ಲಿ ನಟಿಸಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಕಾಜಲ್ ಜೊತೆ ಹಸೆಮಣೆ ಹಂಚಿಕೊಳ್ಳುವವರು ಬೇರೆ ಯಾರು ಅಲ್ಲ, ಇಷ್ಟ್ ದಿನ ಗಾಸಿಪ್ ನಲ್ಲಿದ್ದ ಕ್ಯೂಟ್ ಬಾಯ್ ಗೌತಮ್ ಕಿಚಲು ಜೊತೆ ಎಂಗೇಜ್ ಆಗ್ತಿದ್ದಾರಂತೆ ಕಾಜಲ್.. ಮುಂಬೈ ಮೂಲದ ಉದ್ಯಮಿ ಗೌತಮ್ ಕಿಚುಲು ಜೊತೆ ಕಾಜಲ್ ಮದುವೆ ಆಗಲಿರುವುದು ಪಕ್ಕಾ ಎಂದು ಅವರೇ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಇವರಿಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಕ್ರಿಯೇಟ್ ಮಾಡ್ತಿದೆ..
ಇನ್ನು, ವಿದೇಶದಲ್ಲಿ ವ್ಯಾಸಂಗ ಮಾಡಿರುವ ಗೌತಮ್, ಸ್ವಂತ ಒಳಾಂಗಣ ವಿನ್ಯಾಸ ಕಂಪನಿಯನ್ನು ಹೊಂದಿದ್ದಾರೆ. ಇದೊಂದು ಲವ್ ಕಮ್ ಅರೆಂಜ್ ಮ್ಯಾರೇಜ್ ಎನ್ನಲಾಗಿದೆ. ಉದ್ಯಮಿ ಗೌತಮ್ ಜೊತೆ ಕಾಜಲ್ ಮದುವೆ ನಿಶ್ಚಯವಾಗಿದೆ. ಈ ಬಗ್ಗೆ. ಮುಂಬೈನಲ್ಲಿ ಮದುವೆ ನಡೆಯಲಿದ್ದು, ಕೆಲವೇ ಕೆಲವು ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
2004ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್ಗೆ ಚಿತ್ರರಂಗಕ್ಕೆ ಬಂದು 16 ವರ್ಷಗಳಾಗಿದೆ. ಆದ್ರೂ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿ.. ತೆಲುಗಿನಲ್ಲಿ ಚಿರಂಜೀವಿ ಅಭಿನಯದ ‘ಆಚಾರ್ಯ’ ಹಾಗೂ ತಮಿಳಿನಲ್ಲಿ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ , ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಪ್ಯಾರೀಸ್ ಪ್ಯಾರೀಸ್’ ಚಿತ್ರದಲ್ಲಿ ಅವರು ನಟಿಸಿದ್ದು, ರಿಲೀಸ್ಗೆ ರೆಡಿ ಇದೆ. ‘ಮೋಸಗಾಳ್ಳು’, ‘ಹೇ ಸಿನಮಿಕಾ’, ‘ಮುಂಬೈ ಸಾಗಾ’, ‘ಮಗಧೀರ’ ಅವರ ಇನ್ನಿತರ ಸಿನಿಮಾಗಳು. ಜೊತೆಗೆ ಒಂದು ವೆಬ್ ಸಿರೀಸ್ನಲ್ಲೂ ಅವರು ಬಣ್ಣ ಹಚ್ಚಿದ್ದಾರೆ.