‘ಕಾಗೆ ಬಂಗಾರ’ ಗೆ ಕೂಡಿ ಬಂತು ಮುಹೂರ್ತ ಭಾಗ್ಯ !

0
176

ಎಲ್ಲರಿಗೂ ನೆನಪಿದೆ ಅನ್ನಿಸುತ್ತೆ, ಸುಕ್ಕ ಸೂರಿ ನಿರ್ದೇಶನದ ಕೆಂಡಸಂಪಿಗೆ 2015ರಲ್ಲಿ ತೆರೆಕಂಡು ಭಾರೀ ಸದ್ದು ಮಾಡಿತ್ತು.. ಹೌದು ಈ ಸಿನಿಮಾ ಯಶಸ್ವಿಯಾಗಿ ನೂರು ದಿನಗಳ ಗಡಿ ದಾಟಿತ್ತು..
ಇನ್ನು ಚಿತ್ರದ ವಿಶೇಷತೆ ಏನಪ್ಪಾ ಅಂದರೆ, ಚಿತ್ರದ ಮೊದಲ ಭಾಗ ಬಿಡುಗಡೆ ಮಾಡುವ ಮೊದಲೇ ಎರಡನೇ ಭಾಗವನ್ನು ಬಿಡುಗಡೆ ಮಾಡಿದ್ದಾರೆ.ಹೌದು ಕೆಂಡಸಂಪಿಗೆ( ಭಾಗ ೨ ಗಿಣಿಮರಿ ಕೇಸ್ )ಈ ಚಿತ್ರವು ಮುಂಬರುವ ‘ಕಾಗೆ ಬಂಗಾರ’ದ ಉತ್ತರ ಭಾಗವಾಗಿದೆ..

ಇನ್ನು ಕೆಂಡಸಂಪಿಗೆ, ಸೂರಿ ನಿರ್ದೇಶನದ ಮತ್ತು ಸುರೇಂದ್ರನಾಥ್ ಬರೆದ ಕನ್ನಡದ ಥ್ರಿಲ್ಲರ್ ಸಿನಿಮಾ.ಚಿತ್ರದ ಮುಖ್ಯ ಪಾತ್ರದಲ್ಲಿ ವಿಕ್ಕಿ ವರುಣ್ ಮತ್ತು ಮಾನ್ವಿತಾ ಹರೀಶ್ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ..
ಅಪರಾಧ ಪ್ರಕರಣದಲ್ಲಿ ರೂಪುಗೊಂಡು ಪೊಲೀಸರಿಂದ ಓಡಿ ಹೋಗುವ ದಂಪತಿಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾವಸ್ತುವೇ ಈ ಗಿಣಿಮರಿ ಕೇಸ್ ! ಈ ಚಿತ್ರಕ್ಕೆ ಎಲ್ಲೆಡೆ ಭಾರಿ ಪ್ರಶಂಸೆ ಬಂದಿತ್ತು ..

ಅದೇಕೋ ಏನೋ ಕೆಲವು ಕಾರಣಗಳಿಂದ ಈ ಸಿನಿಮಾ ಶುರುವಾಗಿರಲಿಲ್ಲ. ಆದರೆ ಈ ಚಿತ್ರಕ್ಕೆ ಈಗ ಮರುಜೀವ ಬಂದಿದೆ !
ಸದ್ಯ ಸೂರಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ ಕನಸಿನ ‘ಕಾಗೆ ಬಂಗಾರ’ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ ಎಂಬ ಸುದ್ದಿಗಳನ್ನು ನೀಡಿದ್ದಾರೆ ಇದರಿಂದ ಶನಿ ರಸಿಕರೆಲ್ಲಾ ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದಾರೆ ..

ಮೊದಲೇ ಹೇಳಿದ ಹಾಗೆ ಕೆಂಡಸಂಪಿಗೆ ಗಿಣಿಮರಿ ಕೇಸ್, ಪಾರ್ಟ್ ೨ ಭಾಗವನ್ನು ಒಳಗೊಂಡಿತ್ತು .. ಈ ಚಿತ್ರದ ಉಳಿದ ಭಾಗಗಳಾದ ‘ಕಾಗೆ ಬಂಗಾರ’, ‘ಬ್ಲ್ಯಾಕ್ ಮ್ಯೂಸಿಕ್’ ಸಿನಿಮಾಗಳನ್ನು ಆದಷ್ಟು ಬೇಗ ಮಾಡುತ್ತೇನೆ ಎಂದು ಸೂರಿ ಹೇಳಿಕೊಂಡಿದ್ದಾರು.ಆದರೆ ಹಲವಾರು ಕಾರಣದಿಂದ ಸಿನಿಮಾದ ಸುದ್ದಿ ಹೊರ ಬಂದಿರಲೇ ಇಲ್ಲ .
ಇನ್ನು ಅಭಿಮಾನಿಗಳಿಗೆ ಸೂರಿ, ಒಂದು ಪೋಸ್ಟರ್ ಬಿಡುಗಡೆ ಮಾಡುವ ಮುಖಾಂತರ ಮುಂದಿನ ವರ್ಷ ‘ಕಾಗೆ ಬಂಗಾರ’ ಆರಂಭವಾಗಲಿದೆ ಎಂದು ಹೇಳಿದ್ದಾರೆ ! ಇನ್ನು ಕಾಗೆ ಬಂಗಾರ ಚಿತ್ರದ ಮುಖ್ಯಭೂಮಿಕೆಯಲ್ಲಿ ಸಿದ್ದಿ ಪ್ರಕಾಶ್ ಕಾಣಿಸಿಕೊಳ್ಳಲಿದ್ದಾರೆ

LEAVE A REPLY

Please enter your comment!
Please enter your name here