ಚಂದ್ರಯಾನ-2 ವಿಫಲ ಭಾವುಕರಾದ ಇಸ್ರೋ ಅಧ್ಯಕ್ಷ ಕೆ. ಶಿವನ್..! ವಿಡಿಯೋ ನೋಡಿ

0
1038

ಭಾರತದ ಹೆಮ್ಮೆಯ ಚಂದ್ರಯಾನ-2 ವಿಫಲಗೊಂಡಿದೆ. ಕೊನೆಯ ಕ್ಷಣದ ಲ್ಯಾಡಿಂಗ್ ವೇಳೆ ಲ್ಯಾಂಡರ್ ವಿಕ್ರಮ ಸಂವಹನ ಕಳೆದುಕೊಂಡಿತು. ಹೀಗಾಗಿ ಯೋಜನೆ ವಿಫಲವಾಯಿತು. ಇದರಿಂದ ಇಸ್ರೋ ಮುಖ್ಯಸ್ಥ ಶಿವನ್ ಅವರು ಭಾವುಕರಾಗಿ ಕಣ್ಣಿರಿಟ್ಟರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವನ್ ಅವರನ್ನು ಆಲಂಗಿಸಿ, ಸಂತೈಸಿದ್ದಾರೆ.

ಇನ್ನು ಇಸ್ರೋ ಸಾಧನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಸ್ರೋ ಕಂಟ್ರೋಲ್ ಸೆಂಟರ್‍ನಲ್ಲಿ ಮಾತನಾಡಿ, “ಭಾರತ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಯಾರೂ ಹತಾಶರಾಗಬೇಡಿ ನಿಮ್ಮೊಂದಿಗೆ ನಾನಿದ್ದೇನೆ. ಚಂದ್ರಯಾನ-2 ಪ್ರಯಾಣ ಒಂದು ಸುಂದರ ಕ್ಷಣ. ನಿಮ್ಮ ಪ್ರಯತ್ನವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಇಂದಿನ ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ. ಚಂದ್ರನನ್ನು ತಲುಪುವ ನಮ್ಮ ಆಸೆ ಇನ್ನಷ್ಟು ಬಲಗೊಂಡಿದೆ. ಆರ್ಬಿಟರ್ ಈಗಲೂ ಚಂದ್ರನ ಸುತ್ತ ಸುತ್ತುತ್ತಿದೆ ಎಂದು ಇಸ್ರೋ ವಿಜ್ಞಾಗಳ ಸಾಧನೆಯನ್ನು ಕೊಂಡಾಡಿದರು. ಭಾಷಣ ಪೂರ್ಣಗೊಂಡ ಬಳಿಕ ಭಾವುಕರಾಗಿದ್ದ ಶಿವನ್ ಅವರನ್ನು ಪ್ರಧಾನಿ ಮೋದಿಯವರು ಸಂತೈಸಿದರು.

ಚಂದ್ರನ ಮೇಲೆ ವಿಕ್ರಮ ಲ್ಯಾಂಡರ್‍ನ್ನು ಇಳಿಸುವ ಕೊನೆಯ 12 ನಿಮಿಷಗಳ ಕಾರ್ಯಾಚರಣೆಯಲ್ಲಿ ಉಂಟಾದ ವಿಫಲತೆಯಿಂದ ಇಡೀ ಯೋಜನೆಯೇ ವಿಫಲಗೊಂಡಿತು. ಚಂದ್ರನ ಅಂಗಳ 2.1 ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಹೀಗಾಗಿ ಸಿಗ್ನಲ್‍ಗಾಗಿ ನಿರೀಕ್ಷಿಸಲಾಯಿತು. ಆದರೆ, ಯಾವುದೇ ಸಿಗ್ನಲ್ ಸಿಗಲಿಲ್ಲ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಇಸ್ರೋ ಅಧ್ಯಕ್ಷ ಶಿವನ್ ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here