ಜರ್ನಿ ಆಫ್ ‘ಗಿರ್ಮಿಟ್’ & ರಾಕಿಂಗ್ ಕಪಲ್ !

0
221

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್,
‘ಮೊಗ್ಗಿನ ಮನಸ್ಸು’ ಚಿತ್ರದಿಂದ ಪರಿಚಯರಾಗಿ,’ಡ್ರಾಮಾ’ ಚಿತ್ರದ ಮುಖಾಂತರ ಪರಿಚಯ ಸ್ನೇಹವಾಗಿ, ‘Mr & Mrs ರಾಮಾಚಾರಿ’ಯಲ್ಲಿ ಸ್ನೇಹ ಪ್ರೇಮವಾಗಿ, ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಮುಖಾಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನ ಮೋಸ್ಟ್ ಫೇವರಿಟ್ ಕಪಲ್ ಅಂತಾನೇ ಹೇಳಬಹುದು !

ಚಂದನವನದಲ್ಲಿ ತನ್ನದೇ ಆದ ಫ್ಯಾನ್ ಫಾಲೋಯರ್ಸ್ಗಳನ್ನು ಹೊಂದಿರುವ ಈ ರಾಕಿಂಗ್ ಕಪಿಲ್ಗೆ ಐರಾ ಎಂಬ ಮುದ್ದಾದ ಮಗಳು ಸೇರ್ಪಡೆಯಾಗಿದ್ದಾಳೆ !

ಕೆಜಿಎಫ್ ನಿಂದ ಕನ್ನಡಕ್ಕೆ ಹೆಮ್ಮೆ ತಂದುಕೊಟ್ಟ ‘ಯಶ್’, ಸದ್ಯ ಈಗ ಕೆಜಿಎಫ್ ಚಾಪ್ಟರ್ ಎರಡನೇ ಭಾಗದಲ್ಲಿ ಬ್ಯುಸಿ ಆಗಿದ್ದಾರೆ . ಹಾಗೂ ‘ಆದಿಲಕ್ಷ್ಮೀ ಪುರಾಣ’ ಚಿತ್ರದ ಮೂಲಕ ರಾಧಿಕಾ ಪಂಡಿತ್ ಮತ್ತೆ ಚಂದನವನಕ್ಕೆ ರೀ ಎಂಟ್ರಿ ತೆಗೆದುಕೊಂಡಿದ್ದಾರೆ..

ಇದರ ಬೆನ್ನಲ್ಲೇ ಈ ಜೋಡಿ ಮತ್ತೆ ಕಮಾಲ್ ಮಾಡಲು ರೆಡಿ ಆಗಿದ್ದಾರೆ.. ಆದರೆ ಈ ಬಾರಿ ತೆರೆಯ ಮುಂದಲ್ಲ, ತೆರೆಯ ಹಿಂದೆ !

‘ಗಿರ್ಮಿಟ್’ ಎನ್ನುವ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ‘ಯಶ್’ ಹಾಗೂ ‘ರಾಧಿಕಾ’ !

‘ಗಿರ್ಮಿಟ್’,ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಐದು ಭಾಷೆಯಲ್ಲಿ ತಯಾರಾಗಿರುವ ಚಿತ್ರ ..

ಇನ್ನು ಕನ್ನಡದಲ್ಲಿ ‘ಗಿರ್ಮಿಟ್’ ಅಂತಿರುವ ಚಿತ್ರ ಹಿಂದಿ ಹಾಗೂ ತೆಲುಗಿನಲ್ಲಿ ‘ಪಕ್ಕಾ ಮಾಸ್’ ಎಂದು ಟೈಟಲ್ ಇಟ್ಟುಕೊಂಡಿದೆ.. ತಮಿಳು ಹಾಗೂ ಮಲಯಾಳಂನಲ್ಲಿ ‘ಪೋಡಿ ಮಾಸ್’ ಅಂತ ಫಿಕ್ಸ್ ಮಾಡಲಾಗಿದೆ ..

ಇಷ್ಟು ಮಾತ್ರವಲ್ಲದೆ ಇಂಗ್ಲಿಷ್ನಲ್ಲೂ ಬರುತ್ತಿದೆ ‘ಗಿರ್ಮಿಟ್’

ಇತ್ತೀಚೆಗೆ ಕನ್ನಡ ಸಿನಿಮಾಗಳು ತ್ರಿಭಾಷಾ ಹಾಗೂ ಪಂಚಭಾಷೆಯಲ್ಲಿ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ ! ಈಗ ಗಿರ್ಮಿಟ್ ಚಿತ್ರತಂಡ ಒಂದು ಹೆಜ್ಜೆ ಮುಂದೆನೇ ಹೋಗಿದೆ.. ಪಂಚಭಾಷೆ ಮಾತ್ರವಲ್ಲದೆ ಇಂಗ್ಲಿಷ್ನಲ್ಲೂ ಈ ಗಿರ್ಮಿಟ್ ತೆರೆ ಕಾಣಲು ರೆಡಿಯಾಗಿದೆ ..

ನಿರ್ದೇಶಕರು ಈಗಾಗಲೇ ಇಂಗ್ಲಿಷಿನಲ್ಲಿ ಡಬ್ಬಿಂಗ್ ಪ್ರಾರಂಭ ಮಾಡಿದ್ದು ಇದಕ್ಕಾಗಿ ಹೊಸದೊಂದು ತಂಡವನ್ನು ರಚಿಸಿದ್ದಾರೆ.. ಅಷ್ಟೇ ಅಲ್ಲದೆ ಹಾಡುಗಳನ್ನು ಇಂಗ್ಲಿಷ್ನಲ್ಲಿ ಹಾಡುವುದಕ್ಕಾಗಿಯೇ ಇನ್ನೊಂದು ಟೀಮ್ನ ಅಡಿ ಮಾಡಿದ್ದಾರಂತೆ ಒಟ್ಟಾರೆ ಕನ್ನಡದ ಕಂಪನ್ನು ಇಂಗ್ಲಿಷ್ ನಲ್ಲೂ ಹಬ್ಬಿಸುತ್ತಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತಹ ವಿಚಾರ ..

ಇನ್ನು ಈ ಸಿನಿಮಾವನ್ನು ತಯಾರು ಮಾಡಿರುವುದು ಕನ್ನಡದ ಮಲ್ಟಿ ಟ್ಯಾಲೆಂಟ್ ರವಿ ಬಸುರು ಮತ್ತು ಅವರ ತಂಡ….

ಇನ್ನು ರವಿ ಬಸ್ರೂರ್ ಅವರಿಗೆ ನಿರ್ದೇಶನ ವೇನು ಹೊಸದಲ್ಲ! ಕುಂದಾಪುರ ಕನ್ನಡದಲ್ಲಿ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರು.. ಹಾಗೆ ಪವರ್ ಸ್ಟಾರ್ ನಿರ್ಮಾಣದಲ್ಲಿ ಕಟಕ ಎಂಬ ಚಿತ್ರವನ್ನು ಸಹ ನಿರ್ದೇಶನ ಮಾಡಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗೆ ಪಾತ್ರರಾಗಿದ್ದರು ..

ಇನ್ನು ನಿರ್ದೇಶಕ ಮತ್ತು ಸಂಗೀತ ಸಂಯೋಜಕರಾಗಿರುವ ರವಿ, ಕಳೆದ ಬಾರಿ ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡಿ ಭಾರತ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು..
ಇನ್ನು ಅವರದೇ ಸಿನಿಮಾಗೆ ಯಾವ ರೀತಿ ಸಂಗೀತ ನೀಡಿರುತ್ತಾರೆ ಎಂಬುದು ಕಾದು ನೋಡಬೇಕಾಗಿದೆ ..

ಇನ್ನು ಈ ಸಿನಿಮಾದ ನಾಯಕ ನಾಯಕಿ ಯಾರು ಗೊತ್ತಾ ??

ಮಕ್ಕಳನ್ನು ಇಟ್ಟುಕೊಂಡು ಪಾಠ ಮಾಡೋದು ಕಷ್ಟ ಅನ್ನೋ ಈ ಕಾಲದಲ್ಲಿ 280ಕ್ಕೂ ಹೆಚ್ಚು ಮಕ್ಕಳನ್ನು ಸೇರಿಸಿ ಸಿನಿಮಾ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ ರವಿ !

ಮಕ್ಕಳು ಸಿನಿಮಾ ಅಂದ ತಕ್ಷಣ ಎಲ್ಲರೂ ಅಂದುಕೊಳ್ಳುತ್ತಾರೆ ಇದೊಂದು ಆರ್ಟ್ ಸಿನಿಮಾ.. ಆದರೆ ರವಿ ಬಸರೂರ್ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ..ಹೌದು ಇದು ಪಾರ್ಟ್ ಸಿನಿಮಾ ಅಲ್ಲವಂತೆ, ಪಕ್ಕಾ ಕಮರ್ಷಿಯಲ್ ಮಾಸ್ ಸಿನಿಮಾ !

ಇದರಲ್ಲಿ ಪ್ರೀತಿ ಪ್ರೇಮ ಸ್ನೇಹ ಫ್ಯಾಮಿಲಿ ಸೆಂಟಿಮೆಂಟ್ ಸಾಹಸ ಎಲ್ಲವೂ ಇದೆ.
ವಿಶೇಷ ಅಂದರೆ ಅವನ್ನೆಲ್ಲಾ ಮಕ್ಕಳೇ ನಿರ್ವಹಿಸಿದ್ದಾರೆ ! ಸಿನಿಮಾದಲ್ಲಿ ಮಕ್ಕಳೇ ದೊಡ್ಡವರ ರೀತಿ ನಟಿಸಿದ್ದಾರೆ.. ಮಕ್ಕಳೇ ಇಲ್ಲಿ ವಿಲನ್ ,ಮಕ್ಕಳೇ ಅಪ್ಪ ಅಮ್ಮ ಎಲ್ಲವೂ !
ದೊಡ್ಡವರು ಮಾಡುವ ಪಾತ್ರವನ್ನು ಮಕ್ಕಳಿಂದಲೇ ಮಾಡಿಸಿದ್ದಾರೆ ನಿರ್ದೇಶಕ ರವಿ ಬಸ್ರೂರ್

ಇನ್ನು ಎನ್ ಎಸ್ ರಾಜಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು, ಪವರ್ ಸ್ಟಾರ್ ಅಪ್ಪು ರವರು ಟೀಸರ್ ಬಿಡುಗಡೆ ಮಾಡಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ ! ಹಾಗೆ ಅಪ್ಪು ಅವರು ಸಹ ಚಿತ್ರದಲ್ಲಿ ಒಂದು ಹಾಡು ಹಾಡಿರುವುದು ವಿಶೇಷ !

ಧ್ವನಿ ನೀಡಿದ ಹೆಸರಾಂತ ಕಲಾವಿದರು !
ಚಿತ್ರದ ವಿಶೇಷತೆನೆ ಇದು, ಮಕ್ಕಳು ದೊಡ್ಡವರಂತೆ ಅಭಿನಯ ಮಾಡಿದ್ದಾರೆ. ಮಕ್ಕಳ ಈ ಪಾತ್ರಕ್ಕೆ ಹಿರಿಯ ಕಲಾವಿದರು ಧ್ವನಿ ನೀಡಿದ್ದಾರೆ. ಇನ್ನು ಚಿತ್ರದ ನಾಯಕ ನಟನಾಗಿ ಬಾಲ ಪ್ರತಿಭೆ ಅಶ್ಲೇಷ್ ರಾಜ್ ಅಭಿನಯಿಸಿದ್ದರೆ ಕಟಕ ಖ್ಯಾತಿಯ ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ !

ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದರಿಂದ ಚಿತ್ರದ ಡಬ್ಬಿಂಗ್ ಅನ್ನು ರಾಧಿಕಾ ಹಾಗೂ ಯಶ್ ಮಾಡಬೇಕೆಂಬುದು ರವಿ ಅವರ ಆಸೆಯಾಗಿತ್ತಂತೆ !

ಕಥೆ ಕೇಳಿದ ‘ರಾಕಿಂಗ್ ಕಪಲ್’ ಒಂದು ಮಾತನ್ತಾಡದೆ ಚಿತ್ರದ ಕಂಪ್ಲೀಟ್ ಡಬ್ಬಿಂಗ್ ಮುಗಿಸಿ ಕೊಟ್ಟಿದ್ದಾರೆ !

ಮಕ್ಕಳ ಖಡಕ್ ಆಕ್ಟಿಂಗ್ಗೆ ರಾಕಿ ಬಾಯ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಧಿಕಾ ವಾಯ್ಸ್ ನೀಡಿರೋದ್ರಿಂದ ಸಿನಿಮಾದ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗಿದೆ !

ಇಷ್ಟು ಮಾತ್ರವಲ್ಲದೇ ಚಿತ್ರದಲ್ಲಿ ತಾರಾ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ರಂಗಾಯಣ ರಘು, ಸಾಧುಕೋಕಿಲಾ ಪೆಟ್ರೋಲ್ ಪ್ರಸನ್ನ, ಅನುಪಮಾ ಗೌಡ ,ಅನುರಾಧ ಭಟ್ ,ಶಿವರಾಜ್ ಕೆ ಆರ್ ಪೇಟೆ ಮುಂತಾದವರು ಚಿತ್ರದಲ್ಲಿ ಡಬ್ ನೀಡಿದ್ದಾರೆ ..

ಓಂಕಾರ್ ಮೂವೀಸ್ ಹಾಗೂ ಬಾಸೂರು ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ,ರವಿ ಬಸ್ರೂರ್ ಅವರೇ ಸ್ವತಃ ಸಂಗೀತ ,ಧ್ವನಿ ವಿನ್ಯಾಸ ಮತ್ತು ಚಿತ್ರಕಥೆಯನ್ನು ನಿರ್ವಹಿಸಿದ್ದಾರೆ.. ರವಿ ಅವರ ಸಹೋದರ ಸಚಿನ್ ಬಸೂರು ಛಾಯಾಗ್ರಹಣ ಮಾಡಿರುವುದು ವಿಶೇಷ ..

ಒಟ್ಟಾರೆ ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗ ಗಗನಕ್ಕೆ ಏರುತ್ತಿರುವುದು ಪ್ರತಿಯೊಬ್ಬ ಕನ್ನಡಿಗನು ಹಾಗೂ ಚಿತ್ರರಂಗದವರು ಹೆಮ್ಮೆ ಪಡುವಂತಹ ವಿಷಯ ..
ಇನ್ನು ಡಬ್ಬಿಂಗ್ ಮುಗಿಸಿದ ಚಿತ್ರತಂಡ ತೆರೆಯ ಮೇಲೂ ಅಪ್ಪಳಿಸಲು ರೆಡಿ ಆಗ್ತಾ ಇದೆ !

LEAVE A REPLY

Please enter your comment!
Please enter your name here