ಜೊತೆ- ಜೊತೆಯಲಿ ಸೀರಿಯಲ್ ನ ರೆಕಾರ್ಡ್ ಬ್ರೇಕ್ ಮಾಡಿದ ಆ ಹೊಸ ಸೀರಿಯಲ್ ಯಾವುದು ಗೊತ್ತಾ ?

0
746

ಕಿರುತೆರೆಯ ವಾಹಿನಿಗಳಲ್ಲಿ ಈಗಾಗಲೇ ದರಸಮರ ಜೋರಾಗಿದೆ. ಕಳೆದ ಕೆಲವು ವಾರದಲ್ಲಿ ನಂಬರ್ 1 ಧಾರವಾಹಿ ಈಗ ಕೆಳಗಿಳಿದಿದೆ. ಈ ಬಾರಿ ಟಿಆರ್ಪಿ ಸಮರದಲ್ಲಿ ಜೀ ಕನ್ನಡದ ‘ಜೊತೆ ಜೊತೆಯಲಿ’ ಧಾರಾವಾಹಿ ಹಿಂದೆ ಹೋಗಿ ಕಲರ್ಸ್ ಕನ್ನಡದ ಮಂಗಳಗೌರಿ ಸೀರಿಯಲ್ ಪಡೆದುಕೊಂಡಿದೆ.

 

ಹೌದು, ಮಂಗಳಗೌರಿ ಧಾರಾವಾಹಿಯಲ್ಲಿ ಕಳೆದ ಒಂದು ವಾರದಿಂದ ಹೀರೋಯಿನ್ ಮಂಗಳಗೌರಿಯ ಸಾವಿನ ಸಂಚಿಕೆ ಪ್ರಸಾರವಾಗುತ್ತಿದೆ. ಈಕೆಯ ಪ್ರಾಣ ಉಳಿಸಿಕೊಳ್ಳಲು ಶತಾಯಗತಾಯ ಹೀರೋ ಸೈಕಲ್ ಹೊಡೆಯುತ್ತಿದ್ದಾನೆ. ಇದೇ ಕಾರಣಕ್ಕಾಗಿ ಮಂಗಳಗೌರಿ ಮದುವೆ ಧಾರವಾಹಿ 6829 ಪಾಯಿಂಟ್ಸ್ ಪಡೆದಿದ್ದು , ಜೊತೆ ಜೊತೆಯಲಿ ಧಾರಾವಾಹಿಗೆ 5361 ಪಾಯಿಂಟ್ಸ್ ಸಿಕ್ಕಿದೆ.

 


ಉಳಿದ ಸ್ಥಾನದಲ್ಲಿ ಜೀ ಕನ್ನಡದ ಕಾರ್ಯಕ್ರಮಗಳೇ ತುಂಬಿಕೊಂಡಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (5562) ಎರಡನೇ ಸ್ಥಾನದಲ್ಲಿ, ನಾಗಿಣಿ (4719) ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿ, ಯಾರೇ ನೀ ಮೋಹಿನಿ (4524) ಐದನೇ ಸ್ಥಾನದಲ್ಲಿ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here