ಟಿ ಆರ್ ಪಿ ವಿಷಯದಲ್ಲಿ ಜೊತೆ- ಜೊತೆಯಲಿ ಎದುರು ಮಕಾಡೆ ಮಲಗಿದ ಬಿಗ್ ಬಾಸ್

0
1164

ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಎಂದೇ ಹೆಸರಾದ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಎಲ್ಲಾ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಈ ಶೋ ಬಂದಾದ ಮೇಲೆ ಮಿಕ್ಕೆಲ್ಲಾ ಸೀರಿಯಲ್ ಗಳು ಮೂಲೆಗುಂಪು ಮಾಡುತ್ತದೆ ಎಂಬ ಆರೋಪವಿದೆ. ಈ ಮೂಲಕ ಕಲರ್ಸ್ ಕನ್ನಡ ಚಾನೆಲ್ ಗೆ ವಾಹಿನಿಗೆ ಟಿ ಆರ್ ಪಿ ಸಿಗಲಿದೆ ಎಂಬುದು ಜನರ ಹಾಗೂ ಮುಖ್ಯಸ್ಥರ ಊಹೆಯಾಗಿತ್ತು.

ಈ ಬಾರಿ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಜೀ ಕನ್ನಡದ ಪ್ರತಿಷ್ಠಿತ ಧಾರವಾಹಿ ಜೊತೆ- ಜೊತೆಯಲಿ ಸೀರಿಯಲ್ ನಿಂದ ಕಲರ್ಸ್ ಕನ್ನಡಕ್ಕೆ ನಯಾಪೈಸ ಲಾಭ ಆಗಲಿಲ್ಲ. ಆದರೆ ಬಿಗ್ ಬಾಸ್ ಮೂಲಕ ತನ್ನ ಗತವೈಭವವನ್ನು ಮತ್ತೆ ಪಡೆಯುವ ಭರವಸೆ ಇಟ್ಟು ಕೊಂಡಿತ್ತು. ಅದು ಕೈಗೂಡಲಿಲ್ಲ. ಬಿಗ್ ಬಾಸ್ ಎದುರು ಹೊಸದೊಂದು ಪ್ಲಾನ್ ಮಾಡಿದ್ದ ಜೀ ಕನ್ನಡ ಒಂದು ಸ್ಟ್ರಾಟೆಜಿ ಬಿಗ್ ಬಾಸ್ ಗೆ ಬಲವಾದ ಏಟು ಕೊಟ್ಟಿದೆ. ಈ ಸೀರಿಯಲ್ ಲಾಂಚ್ ಆದ ಕೇವಲ 3 ವಾರದಲ್ಲಿಯೇ ವಾರಗಳಲ್ಲಿ ದಾಖಲೆ ಟಿಆರ್ಪಿ ಗಳಿಸಿ ಜನಪ್ರಿಯತೆಯ ತುತ್ತತುದಿಯ ಜೊತೆ- ಜೊತೆಯಲಿ ಹಾಗೂ ಪಾರು ಧಾರಾವಾಹಿಯನ್ನು30 ನಿಮಿಷದ ಬದಲು 1 ಗಂಟೆಯ ಮಹಾಸಂಚಿಕೆಯಾಗಿಸಿ ಬಿಗ್ ಬಾಸ್ ಕಡೆ ವೀಕ್ಷಕರು ತಿರುಗಿ ನೋಡದಂತೆ ಜೀ ಕನ್ನಡ ಮಾಡಿತು.

ಇದೇ ಕಾರಣದಿಂದ ಅಂದಾಜು 10 ಪಾಯಿಂಟ್ ನಿರೀಕ್ಷೆಯಲ್ಲಿದ್ದ ಬಿಗ್ ಬಾಸ್ 4.7 ಪಾಯಿಂಟಿಗೆ ಇಳಿಕೆಯಾಗಿ ತೃಪ್ತಿಪಡಬೇಕಾಯ್ತು. ಜೊತೆ-ಜೊತೆಯಲಿ 12.7 ಅಂಕ ಗಳಿಸಿ ಎದುರಾಳಿಯನ್ನು ಮಕಾಡೆ ಮಲಗುವಂತೆ ಮಾಡಿದೆ. ಮಧ್ಯ ವಯಸ್ಸಿನ ಓರ್ವ ಯಶಸ್ವಿ ಶ್ರೀಮಂತ ಉದ್ಯಮಿ ನಾಯಕ ಆರ್ಯವರ್ಧನ್ ಆಗಿ ಅನಿರುದ್ಧ್ ಕಾಣಿಸಿಕೊಂಡಿದ್ದಾರೆ.

ಇಲ್ಲಿ ನಾಯಕನಿಗೆ ಬ್ಯುಸಿನೆಸ್ ಮೇಲಿರುವ ಆಸಕ್ತಿ ಮದುವೆ ಹಾಗೂ ಸಂಸಾರದಲ್ಲಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬಡತನದಲ್ಲಿಯೇ ಬೆಳೆದರೂ ಕನಸಿನ ಅರಮನೆಯನ್ನು ಕಟ್ಟಿಕೊಂಡು ಆಶಾಭಾವನೆಯಲ್ಲಿ ಬದುಕುವ ಓರ್ವ ನಾಯಕಿಯ ಮೇಲೆ ಪ್ರೀತಿ ಮೂಡುತ್ತದೆ ಎಂಬ ಕುರಿತಾಗಿ ಕಥಾ ಹಂದರ ಧಾರಾವಾಹಿಯಲ್ಲಿದೆ ಎನ್ನುವುದು ಜೊತೆ-ಜೊತೆಯಲಿ ಸೀರಿಯಲ್ ಸಾರಾಂಶ.

ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ.

LEAVE A REPLY

Please enter your comment!
Please enter your name here