‘ಜೊತೆಜೊತೆಯಲಿ’ ಟೈಟಲ್ ಹಾಡಿನ ಗಾಯಕರು, ಸಂಗೀತ ನಿರ್ದೇಶಕರು ಇವರೇ..!

0
309

ಧಾರಾವಾಹಿ ಎಂದರೆ ಮೂಗು ಮುರಿಯುತ್ತಿದ್ದವರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಧಾರಾವಾಹಿ ಎಂದರೆ ಅದು ಅನಿರುಧ್ ಹಾಗೂ ಮೇಘಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಜೊತೆಜೊತೆಯಲಿ’. ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿ ಆರಂಭವಾದಾಗಿನಿಂದ ಇಲ್ಲಿವರೆಗೂ ಇತರ ಧಾರಾವಾಹಿಗಳಿಗಿಂತ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಅದ್ಧೂರಿ ವೆಚ್ಚದಲ್ಲಿ ಸಿನಿಮಾದಂತೆಯೇ ಈ ಧಾರಾವಾಹಿಯನ್ನು ಚಿತ್ರೀಕರಿಸಲಾಗುತ್ತಿದೆ. ಧಾರಾವಾಹಿ ಕಥೆ ಮಾತ್ರವಲ್ಲ, ಶೀರ್ಷಿಕೆ ಗೀತೆ ಕೂಡಾ ಎಲ್ಲರಿಗೂ ಬಹಳ ಇಷ್ಟವಾಗಿದೆ. ‘ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು’ ಎಂಬ ಈ ಹಾಡನ್ನು ಧಾರಾವಾಹಿಪ್ರಿಯರು ದಿನಕ್ಕೆ ಒಮ್ಮೆಯಾದರೂ ಗುನುಗುತ್ತಾರೆ. ಬಹಳ ಮಂದಿ ಈ ಹಾಡನ್ನೇ ತಮ್ಮ ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿಕೊಂಡಿದ್ದಾರೆ. ಧಾರಾವಾಹಿ ಕಥೆಯೊಂದಿಗೆ ಈ ಹಾಡು ಕೂಡಾ ಬಹಳ ಫೇಮಸ್ ಆಗುತ್ತಿದೆ.

ಅಂದಹಾಗೆ ಈ ಹಾಡಿನ ಸಾಹಿತ್ಯ ಬರೆದವರು ಜೀ ಕನ್ನಡದ ಫಿಕ್ಷನ್ ಹೆಡ್ ಹರ್ಷಪ್ರಿಯ. ವಿನಯ್ ರಾಜ್‍ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಸಿನಿಮಾಗೆ ಸಂಗೀತ ನೀಡಿದ ಸುನಾದ್ ಗೌತಮ್ ಅವರು ‘ನೂರು ಕಾಲ’ ಹಾಡಿಗೆ ಸಂಗೀತ ನೀಡಿದ್ದಾರೆ. ಇನ್ನು ಈ ಹಾಡಿನ ಗಾಯಕರು ನಿನಾದ ಮತ್ತು ನಿಹಾಲ್ ತಾವ್ರೋ ಹಾಗೂ ರಜತ್ ಹೆಗಡೆ. ವಿಶೇಷ ಎಂದರೆ ನಿನಾದ ಅವರು ಸುನಾದ್ ಗೌತಮ್ ಅವರ ಸಹೋದರಿ. ಇವರೆಲ್ಲರ ಪ್ರಯತ್ನದಿಂದ ಸುಂದರವಾಗಿ ಮೂಡಿ ಬಂದಿರುವ ಈ ಹಾಡು ನೂರು ಕಾಲ ಎಲ್ಲರ ಮೋಸ್ಟ್ ಫೇವರೆಸ್ಟ್ ಪಟ್ಟಿಯಲ್ಲಿರುವುದು ಗ್ಯಾರಂಟಿ.

LEAVE A REPLY

Please enter your comment!
Please enter your name here