ಜೋಗಿ ಚಿತ್ರದ ನಟಿ ಜೆನಿಫರ್ ಈಗ ಎಲ್ಲಿದ್ದಾರೆ..? ಹೇಗಿದ್ದಾರೆ ಗೊತ್ತಾ..?

0
141

ಕೆಲವೊಂದು ಸಿನಿಮಾಗಳು ನಮ್ಮ ಬದುಕಿನಲ್ಲಿನ ಸಂಬಂಧದಲ್ಲಿನ ಮೌಲ್ಯಗಳನ್ನು ತಿಳಿಸುತ್ತವೆ. ಅಂತಹದ್ದೇ ಒಂದು ಕನ್ನಡದ ಅಪ್ರತಿಮ ಸಿನಿಮಾ ಜೋಗಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದ ಪ್ರೇಮ್ ನಿರ್ದೇಶನದಲ್ಲಿ 2005 ರಲ್ಲಿ ಮೂಡಿಬಂದ ಜೋಗಿ ಸಿನಿಮಾ ಕನ್ನಡಿಗರ ಮನ ಗೆದ್ದಿತ್ತು. ಮದರ್ ಸೆಂಟಿಮೆಂಟ್ ಹಾಗೂ ರೌಡಿಸಂ ಈ ಎರಡನ್ನು ಬೆರೆಸಿ ಒಂದು ಮನ ಮಿಡಿಯುವ ಕಥೆಯನ್ನು ಪ್ರೇಮ್ ಅವರು ಅಚ್ಚುಕಟ್ಟಾಗಿ ಸಿನಿಮಾ ಮಾಡಿ ಕನ್ನಡಿಗರಿಗೆ ಅರ್ಪಿಸಿದರು. ಇಂತಹದೊಂದು ಅದ್ಭುತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನಟಿ ಜೆನಿಫರ್ ಕೋತ್ವಾಲ್ ತನ್ನ ಮನಮೋಹಕ ನಟನೆ ಹಾಗೂ ಡ್ಯಾನ್ಸ್ ನಿಂದ ಕನ್ನಡಿಗರ ಮನ ಗೆದ್ದಿದ್ದರು ಮುಂಬೈ ಬೆಡಗಿ.

ಜೆನಿಫರ್ ಅವರು ಆಗಸ್ಟ್ 14, 1983 ರಂದು ಮುಂಬೈನಲ್ಲಿ ಜನಿಸಿದರು. ಜೋಗಿ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ತಮ್ಮ ಮೊದಲ ಚಿತ್ರದಿಂದಲೇ ಕನ್ನಡ ಸಿನಿಮಾರಂಗದಲ್ಲಿ ಸಕ್ಕತ್ ಫೇಮಸ್ ಆದರು. ನಂತರ ಕನ್ನಡದ ಸುಮಾರು 12 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೋಗಿ, ಶ್ರೀ, ಮಸ್ತಿ, ಯುಗಾದಿ, ಲವ-ಕುಶ, ಸತ್ಯವಾನ್ ಸಾವಿತ್ರಿ, ಬಿಸಿಲೇ, ಪ್ರಿನ್ಸ್ , ಈ ಬಂಧನ, ಹುಲಿ ಸೇರಿದಂತೆ ಕನ್ನಡದಲ್ಲಿ 13 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೆನಿಫರ್ ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲಿ 2 ಸಿನಿಮಾ, ತೆಲುಗಿನಲ್ಲಿ ಎರಡು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


ಜೆನಿಫರ್ ಅವರ ಕನ್ನಡದ ಕೊನೆಯ ಚಿತ್ರ ಹುಲಿ. ಈ ಚಿತ್ರದ ನಂತರ ಜೆನಿಫರ್ ಮತ್ತೆ ಕನ್ನಡ ಸಿನಿಮಾರಂಗದತ್ತ ಮುಖ ಮಾಡಲಿಲ್ಲ. ಹುಲಿ ಸಿನಿಮಾ 2012 ರಲ್ಲಿ ತೆರೆಕಂಡಿತ್ತು. ಇವರು ಮತ್ತೆ ಸಿನಿಮಾಗಳಲ್ಲಿ ನಟಿಸದೇ ಇರಲು ಒಂದು ಮುಖ್ಯವಾದ ಕಾರಣವಿತ್ತು. ನಟಿ ಜೆನಿಫರ್ ಕೋತ್ವಾಲ್ ಅವರು ಡಿಸ್ಕ್ ಇಂಜ್ಯುರಿ ಇಂದಾಗಿ ಸಿನಿಮಾಗಳಲ್ಲಿ ನಟಿಸಲು ಹಿಂಜರಿದರು. ಇನ್ನು ಇತ್ತೀಚಿಗೆ ಜೆನಿಫರ್ ಅವರು ಜೋಗಿ ಸಿನಿಮಾದ 15 ನೇ ವರ್ಷದ ಸಂಭ್ರಮಾಚರಣೆಯನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಜೋಗಿ ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೀತಿಯ ಅಭಿಮಾನಿಗಳು ಕಳುಹಿಸಿದ ಸಂದೇಶಗಳನ್ನು ಶೇರ್ ಮಾಡಿದ್ದಾರೆ. ನಟಿ ಜನಿಫರ್ ಅವರು ಹದಿನೈದು ವರ್ಷಗಳ ಹಿಂದಿನ ಜೋಗಿ ಸಿನಿಮಾವನ್ನು ನೆನಪಿಸಿಕೊಂಡು ಕನ್ನಡ ಸಿನಿಮಾ ರಂಗದ ಮೇಲೆ ಅವರು ತೋರಿರುವ ಪ್ರೀತಿ, ಅವರ ಅಭಿಮಾನವನ್ನು ಕಂಡರೆ ತುಂಬಾ ಹೆಮ್ಮೆ ಎನಿಸುತ್ತದೆ. ಪ್ರಸ್ತುತ ಜೆನಿಫರ್ ಅವರು ಮುಂಬೈನಲ್ಲಿ ನಲೆಸಿದ್ದಾರೆ.

– ಸುಷ್ಮಿತಾ

LEAVE A REPLY

Please enter your comment!
Please enter your name here