ಬೆಂಗಳೂರು: ಒಕ್ಕಲಿಗರು ಅದ್ಯಕ್ಷ ರಾಗ್ತಾರೆ ಎಂದ ಮಾತ್ರಕ್ಕೆ ಇಡೀ ಒಕ್ಕಲಿಗ ಸಮುದಾಯವೇ ಅವರ ಹಿಂದೆ ಹೋಗುತ್ತೆ ಅನ್ನೋದು ಸುಳ್ಳು.ಅವರೇನು ಕಿಂದರಿ ಜೋಗಿ ನಾ.? ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದರು.
ಜೆಪಿ ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಚುನಾವಣೆ ಅಂದ ಮೇಲೆ ಅಲ್ಲಿ ಇಲ್ಲಿ ಕೆಲವು ನಾಯಕರು ಹೋಗುವುದು ಸಹಜ. ಇಲ್ಲಿ ಯಾರೋ ಒಂದಿಬ್ಬರು ಹೋದರೆ ನಮಗೇನೂ ಲಾಸಿಲ್ಲ. ಇದು ರಾಜಕಾರಣ ಯಾರು ಬೇಜಾರು ಮಾಡಿಕೊಂಡ್ರೆ ಯಾರೂ ಕೇರ್ ಮಾಡಲ್ಲ.ಒಕ್ಕಲಿಗರು ಅದ್ಯಕ್ಷ ರಾಗ್ತಾರೆ ಎಂದ ಮಾತ್ರಕ್ಕೆ ಇಡೀ ಒಕ್ಕಲಿಗ ಸಮುದಾಯವೇ ಅವರ ಹಿಂದೆ ಹೋಗುತ್ತೆ ಅನ್ನೋದು ಸುಳ್ಳು.ಅವರೇನು ಕಿಂದರಿ ಜೋಗಿ ನಾ.? ಎಂದು ಪ್ರಶ್ನಿಸಿದರು.
ಆರ್ ಆರ್ ನಗರದಲ್ಲಿ ನನ್ನ ಪಕ್ಷದ ಕೆಲ ಮುಖಂಡರನ್ನು ಸೆಳೆಯಲು ಪ್ರಯತ್ನ ಮಾಡಲಾಗಯತ್ತಿದೆ. ನನ್ನ ಪಕ್ಷದ ಮುಖಂಡರನ್ನು ಡಿಕೆ ಶಿವಕುಮಾರ್ ಸೆಳೆಯುವುದಕ್ಕೆ ಸಾಧ್ಯವಿಲ್ಲ. ಆರ್ ಆರ್ ನಗರ ಚುನಾವಣೆ ಮೂಲಕ ಜೆಡಿಎಸ್ ಪಕ್ಷದ ಸಮಾಧಿ. ಹೀಗಂತ ನಮ್ಮ ಪಕ್ಷದ ಮುಖಂಡರ ಮನೆಯಲ್ಲಿ ಡಿಕೆಶಿ ಹೇಳಿದ್ದಾರೆ. ಈಗ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಇವಾಗ ಡಿಕೆಶಿ ಯವರು ಅವರಿಗೆ ಕೈ ಜೋಡಿಸ್ತಿದ್ದಾರೆ. ನಿರಂತರವಾಗಿ ನಾವು ಕಾಂಗ್ರೆಸ್ ಅಧ್ಯಕ್ಷರ ವಿರುದ್ದವೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಒಬ್ಬ ಪಕ್ಷದ ಅಧ್ಯಕ್ಷರಾಗಿ ಬೇರೆ ಪಕ್ಷದದಲ್ಲಿರುವ ಒಂದು ಸಮಾಜದವರನ್ನು ಕರೆದುಕೊಂಡು ಹೋಗೋದು ಅವರ ಭ್ರಮೆ. ಮೊದಲು ಡಿಕೆಶಿ ಯವರು ಸಮಾಜಕ್ಕೆ ಕೊಡುಗೆ ಹಾಗೂ ಕಾಣಿಕೆ ಏನೆಂದು ಹೇಳಬೇಕು ಎಂದರು.
ಜೆಡಿಎಸ್ ಅವನತಿಗೆ ಆರ್ ಆರ್ ನಗರದಿಂದಲೇ ಬುನಾದಿ ಹಾಕ್ತೀನಿ ಅಂದಿದಾರಂತೆ.. ಅದೆಲ್ಲಾ ಅವರ ಭ್ರಮೆ.
ಕಾಂಗ್ರೆಸ್ ಅಭ್ಯರ್ಥಿ ಚುನಾವಣೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಎಫ್ ಐ ಆರ್ ಹಾಕಿದ್ದಾರೆ. ನಾನು ಕೂಡಾ ನಮ್ಮ ಅಭ್ಯರ್ಥಿ ಜೊತೆ ಒಬ್ಬನೇ ನಾಮಪತ್ರ ಸಲ್ಲಿಕೆ ಮಾಡಲು ಹೋಗಿದ್ದೆ. ಎಫ್ ಐ ಆರ್ ಹಾಕಿದ್ದಕ್ಕೇ ಏನೋ ದಿಡೀರ್ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಅವರ ಹಿಂದಿನ ರಾಜಕೀಯ ಜೀವನ ನೆನಪು ಮಾಡಿಕೊಳ್ಳಲಿ. ಹಿಂದೆ ಕನಕಪುರ ದಲ್ಲಿ ಯಾರಿಗೆ ಹೇಗೆ ತೊಂದರೆ ಕೊಟ್ಟಿದ್ದಾರೆ. ಯಾರ ಯಾರ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಪಾರದರ್ಶಕ ವಾಗಿ ಅದೆಷ್ಟು ಚುನಾವಣೆ ನಡೆಸಿದ್ದಾರೆ. ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಂದ ನನಗೆ ಯಾವುದೇ ಆತಂಕ ಇಲ್ಲ. ಈ ಚುನಾವಣೆಯಲ್ಲಿ ಅವರಿಗೆ ಮತದಾರರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಳೆ ಹಾನಿಗೆ ವಿಶೇಷ ಅನುದಾನ ಘೋಷಿಸಿ
ರಾಜ್ಯದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಸಂಭವಿಸಿರುವ ಬೆಳೆ ಹಾನಿ, ಆಸ್ತಿ ನಷ್ಟಕ್ಕೆ ಸರ್ಕಾರ ತಕ್ಷಣ ವಿಶೇಷ ಅನುದಾನ ಘೋಷಣೆ ಮಾಡಬೇಕು. ನೆರೆಪೀಡಿತ ಪ್ರದೇಶಗಳ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಮತ್ತು ಸಚಿವರನ್ನು ತಕ್ಷಣವೇ ನಿಯೋಜಿಸಬೇಕು. ಸತತ ಎರಡು ವರ್ಷಗಳಿಂದ ನೆರೆಯಿಂದ ತತ್ತರಿಸಿರುವ ರಾಜ್ಯದ ರೈತರು ಈ ಬಾರಿ ಮತ್ತೆ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ, ಮನೆ-ಮಠ ಕಳೆದುಕೊಂಡು ನೆರೆಯಿಂದ ನೊಂದ ರಾಜ್ಯದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸುವ ಮೂಲಕ ವಿಶ್ವಾಸ ತುಂಬುವ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು. ಕೋರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ನೆರೆಹಾವಳಿಯಿಂದ ರೈತರು ದಿಕ್ಕೆಟ್ಟುಹೋಗಿದ್ದಾರೆ. ಉಪಚುನಾವಣೆಗಳಿಗಿಂತ ರೈತರ ಸಂಕಷ್ಟಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಿ ಸರ್ಕಾರ ತನ್ನ ಹೊಣೆಗಾರಿಕೆ ಪ್ರದರ್ಶಿಸಬೇಕಾದ ತುರ್ತು ಅಗತ್ಯವಿದೆ ಎಂದರು.