ನೇರಳೆ ಹಣ್ಣಿನ ವಿಶೇಷತೆಗಳು ..!

0
306

ಪ್ರಕೃತಿಯ ವಸ್ತುಗಳಲ್ಲಿ ಈ ಹಣ್ಣು ಕೂಡ ಒಂದು ತನ್ನದೇ ಆದ ಆರೋಗ್ಯ, ಗುಣ, ಶಕ್ತಿ ಯನ್ನು ಹೊಂದಿರುತ್ತದೆ.
ಹಣ್ಣನ್ನು ನೆನೆದರೆ,ಮೊದಲಿಗೆ ನೆನಪಿಗೆ ಬರುವುದು ನೇರಳೆ ಹಣ್ಣು ಇದು ರುಚಿಯಾಗಿದ್ದು ದೇಹಕ್ಕೆ ಶಕ್ತಿ ನೀಡಿ ,ದೇಹವನ್ನು ರೋಗನಿರೋಧಕ ಗೊಳಿಸುತ್ತದೆ.ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಹೆಚ್ಚಾಗಿದೆ.ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಶಕ್ತಿ ,ಪುಷ್ಟಿ,ರೋಗ ನಿರೋಧಕ ಶಕ್ತಿಯನ್ನು ಕೂಡ ನೀಡುತ್ತದೆ.

ರಾಮಾಯಣ ದಲ್ಲಿ ರಾಮ ತನ್ನ ಹದಿನಾಲ್ಕು ವರ್ಷ ವನವಸವನ್ನು ಈ ಹಣ್ಣು ತಿಂದುಕೊಂಡು ಕಳೆದನೆಂದು ಪುರಾಣದಲ್ಲಿ ಹೇಳಲಾಗಿದೆ. ಗುಜರಾತಿನಲ್ಲಿ ಈ ಹಣ್ಣನ್ನು ದೇವರ ಫಲ ಎಂದೇ ಕರೆಯುತ್ತಾರೆ. ವರ್ಷದಲ್ಲಿ ಲಭ್ಯವಿರುವ ಈ ಹಣ್ಣನ್ನು ತಿನ್ನಲೇಬೇಕು. ನಮಗೆ ಗೊತ್ತಿಲ್ಲದೇ ನಾವು ತಿಂದ ಸಣ್ಣ ಕಲ್ಲುಗಳನ್ನು ಈ ಹಣ್ಣು ಕರಗಿಸುವ ಗುಣ ಹೊಂದಿದೆ. ಹೃದಯದ ಕಲ್ಮಶ ಗಳನ್ನು ಶುದ್ದಿ ಮಾಡಿ ಹೃದಯದ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಜ್ವರ ಬಂದಾಗ ನೇರಳೆ ಜ್ಯೂಸ್ ಜೊತೆಗೆ ಧನ್ಯಪುಡಿ ಮಿಶ್ರಣ ಮಾಡಿ ಕುಡಿದರೆ ಶರೀರದ ತಾಪ ಕಡಿಮೆ ಆಗುತ್ತದೆ. ಉರಿಮೂತ್ರ ಆಗಿದ್ದಲ್ಲಿ ನೀರಿನೊಂದಿಗೆ ಮೂರು ಸ್ಫೂನ್ ನೇರಳೆ ರಸ ಎರಡು ಸ್ಫೂನ್ ನಿಂಬೆರಸ ಬೆರೆಸಿ ಕುಡಿದರೆ ಉರಿಮೂತ್ರ ಶಮನ ವಾಗುತ್ತದೆ.

ಶುಗರ್ ಇದ್ದವರಿಗೆ ಈ ಹಣ್ಣು ದೇವರ ಅನುಗ್ರಹವೆ ಸರಿ ಈ ಹಣ್ಣು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಗೊಳಿಸಿ ಸಕ್ಕರೆ ಕಾಯಿಲೆಯನ್ನು ಗುಣಪಡಿಸುವಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಗ್ಲೈಸೆನಿಕ್ ಇಂಡೆಕ್ಸ್ ಹೆಚ್ಚಾಗಿದ್ದು ದೇಹದ ಸಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ನೇರಳೆ ಹಣ್ಣು ಜೀರ್ಣ ಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದನ್ನು ಸೇವಿಸಿದಾಗ ಆಹಾರ ಸುಲಭವಾಗಿ ಜೀರ್ಣಗೊಳ್ಳುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ನಾವು ಸೇವಿಸಿದ ಆಹಾರ ಜೀರ್ಣಗೊಳಿಸಿ, ನಮ್ಮ ದೇಹದಲ್ಲಿರುವ ಜಂತು ಹುಳುಗಳನ್ನು ನಿಯಂತ್ರಿಸುತ್ತದೆ ಇಷ್ಟೆಲ್ಲ ಮಾಹಿತಿ ಇರುವ ಈ ಹಣ್ಣು ತುಂಬಾ ಮೌಲ್ಯಯುತವಾದುದು.

LEAVE A REPLY

Please enter your comment!
Please enter your name here