ಜೇಮ್ಸ್ ಬಾಂಡ್ ಸಿನಿಮಾಗಳ ಮೊದಲ ನಟ ಶಾನ್ ಕಾನರಿ…

0
91

ಜೇಮ್ಸ್ ಬಾಂಡ್ ಸಿನಿಮಾ ಖ್ಯಾತಿಯ ನಟ ಶಾನ್ ಕಾನರಿ ಇನ್ನಿಲ್ಲ. ಜೇಮ್ಸ್ ಬಾಂಡ್ ಎಂದರೇ ಕಾನರಿ ಎಂಬಷ್ಟರ ಮಟ್ಟಿಗೆ ಪ್ರಪಂಚದಾದ್ಯಂತ ಮನೆಮಾತಾಗಿದ್ದ ಶಾನ್ ಕಾನರಿ ನಿ’ಧನ ಅಭಿಮಾನಿಗಳಲ್ಲಿ ನೋವು ತಂದಿದೆ. ಸರ್ ಥಾಮಸ್ ಶಾನ್ ಕಾನರಿ ಅವರ ಪೂರ್ಣ ಹೆಸರು. ಕಳೆದ ಆಗಸ್ಟ್ ನಲ್ಲಿ ತಮ್ಮ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಶಾನ್ ಕಾನರಿ ಈಗ ವಿ’ಧಿವಶರಾಗಿದ್ದು ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಶಾನ್ ಜೇಮ್ಸ್ ಬಾಂಡ್ ಪಾತ್ರ ಮಾಡಿದ್ದ ಮೊದಲ ನಟನಾಗಿದ್ದು, 1962ರಿಂದ 1971ರವರೆಗೆ ಮೂಡಿಬಂದ 6 ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಶಾನ್‌ ಕಾನರಿ ಹೀರೋ ಆಗಿ ಅಭಿನಯಿಸಿ, ವಿಶ್ವಾದ್ಯಂತ ಸಿನಿರಸಿಕರ ಮನಗೆದ್ದಿದ್ದರು.

Dr. No ಜೇಮ್ಸ್‌ ಬಾಂಡ್‌ ಸಿರೀಸ್‌ನ ಮೊದಲ ಚಿತ್ರ. ಈ ಸಿನಿಮಾ ಮೂಲಕವೇ ಶಾನ್ ಅಪಾರ ಜನ ಮೆಚ್ಚುಗೆ ಪಡೆದಿದ್ದರು. ಅದಾದ ಬಳಿಕ ಜೇಮ್ಸ್ ಬಾಂಡ್ ಸರಣಿಯ 5 ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಜನ ಮೆಚ್ಚುಗೆ ಪಡೆದಿದ್ದರು. ಶಾನ್ ಕೇವಲ ಜೇಮ್ಸ್ ಬಾಂಡ್ ಸಿನಿಮಾ ಮಾತ್ರವಲ್ಲ ಇನ್ನಿತರ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಅದ್ಭುತ ಅಭಿನಯಕ್ಕಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಹಾಲಿವುಡ್ ನಲ್ಲಿ ಜೇಮ್ಸ್ ಬಾಂಡ್ ಸರಣಿಯ 22ಕ್ಕೂ ಹೆಚ್ಚು ಸಿನಿಮಾಗಳು ಬಂದಿದ್ದು, ಇಲ್ಲಿಯವರೆಗೆ ಬಾಂಡ್‌ ಪಾತ್ರವನ್ನು ಮಾಡಿದ ನಟರ ಪೈಕಿ ಶಾನ್ ಕಾನರಿ ಅತ್ಯುತ್ತಮ ನಟ ಎಂದೇ ಅಭಿಮಾನಿಗಳ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದರು.

1930, ಆಗಸ್ಟ್ 25ರಂದು ಸ್ಕಾಟ್ ಲ್ಯಾಂಡ್ ನ ಫೌಂಟೇನ್ ಬ್ರಿಡ್ಜ್ ನಲ್ಲಿ ಜನಿಸಿದ ಶಾನ್ ಕಾನರಿ, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು. 1988ರಲ್ಲಿ ಶಾನ್ ಕಾನರಿ ‘ದಿ ಅನ್‍ಟಚೇಬಲ್ಸ್’ ಸಿನಿಮಾದಲ್ಲಿನ ನಟನೆಗೆ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಚಿತ್ರದಲ್ಲಿ ಶಾನ್ ಕಾನರಿ ಐರಿಷ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಮೂರು ಬಾರಿ ‘ಗೋಲ್ಡನ್‌ ಬ್ಲೋಬ್‌’ ಅವಾರ್ಡ್‌ ಕೂಡ ಪಡೆದುಕೊಂಡಿದ್ದರು.

ಡಾ. ನಂ., ಫ್ರಮ್ ರಷ್ಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲ್, ಯು ಓನ್ಲಿ ಲಿವ್ ಟ್ವೈಸ್, ಡೈಮಂಡ್ ಫೇವರ್ ಮತ್ತು ನೇವರ್ ಸೇ ನೇವರ್ ಅಗೇನ್, ‘ದಿ ಹಂಟ್ ಫಾರ್ ರೆಡ್ಡ್ ಅಕ್ಟೋಬರ್’ ಮತ್ತು ಇಂಡಿಯನಾ ಜೋನ್ಸ್ ಎಂಡ್ ದಿ ಲಾಸ್ಟ್ ಕ್ರೂಸೆಡ್, ರಾಕ್, ಮರ್ಡರ್‌ ಆನ್‌ ದಿ ಓರಿಯಂಟ್‌ ಎಕ್ಸ್‌ಪ್ರೆಸ್‌’, ‘ದ ಮ್ಯಾನ್‌ ಹೂ ವುಡ್‌ ಬಿ ಕಿಂಗ್‌’, ‘ದ ನೇಮ್‌ ಆಫ್‌ ದ ರೋಸ್‌’ ಶಾನ್ ಕಾನರಿ ಯಶಸ್ವಿ ಚಿತ್ರಗಳು.

ಜೇಮ್ಸ್ ಬಾಂಡ್ 007 ಎಂಬುದು 1953 ರಲ್ಲಿ ಲೇಖಕ ಇಯಾನ್ ಫ್ಲೆಮಿಂಗ್‌‍ನಿಂದ ಸೃಷ್ಟಿಯಾದ ಒಂದು ಕಾಲ್ಪನಿಕ ಪಾತ್ರ. 12 ಕಾದಂಬರಿ ಹಾಗೂ 2 ಸಣ್ಣ ಕಥೆಗಳಲ್ಲಿ ಇದು ಒಳಗೊಂಡಿದೆ. 1962ರಲ್ಲಿ ಡಾ.ನೋ ಸಿನಿಮಾದಿಂದ ಆರಂಭವಾದ ಜೇಮ್ಸ್ ಬಾಂಡ್ ಹಾಲಿವುಡ್ ನಲ್ಲಿ ಅತಿ ಹೆಚ್ಚು ಓಡಿದ ಹಾಗೂ ದುಡ್ಡು ಗಳಿಸಿದ ಚಿತ್ರ ಸರಣಿಯಾಗಿದೆ.

LEAVE A REPLY

Please enter your comment!
Please enter your name here