‘ಕಣ್ಣುಗಳ ಉರಿ’ ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದು

0
150

ದೇಹದ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅದೇ ರೀತಿ ಹೆಚ್ಚಾಗಿ ಕಂಪ್ಯೂಟರ್, ಲ್ಯಾಪ್‍ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು. ಕಣ್ಣಿನ ಉರಿ ಸಮಸ್ಯೆಯಿಂದ ಹೊರಬರಲು ಈ ಮನೆಮದ್ದುಗಳನ್ನು ಉಪಯೋಗಿಸಿ.

• ನುಗ್ಗೆ ಸೊಪ್ಪನ್ನು ಅರೆದು ಸೋಸಿ ಆ ರಸವನ್ನು ಕಣ್ಣಿನ ರೆಪ್ಪೆ ಮೇಲೆ ಹಚ್ಚಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

• ತುಪ್ಪ ಮತ್ತು ಬೆಚ್ಚಗಿನ ನೀರು ಸೇರಿಸಿ ಪ್ರತಿದಿನ ರಾತ್ರಿ ಕುಡಿದರೆ ಕಣ್ಣುಗಳ ಉರಿ ಶಮನವಾಗುತ್ತದೆ.

• ಸೊಗದೆ ಬೇರಿನ ಶರಬತ್ತನ್ನು ಸೇವಿಸಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

• ದಾಳಿಂಬೆ ಚಿಗುರಿನ ಜೊತೆ ಕಷಾಯ ಮಾಡಿ ಆ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಉರಿ ನಿವಾರಣೆಯಾಗುತ್ತದೆ.

• ಶ್ರೀಗಂಧವನ್ನು ರೋಸ್‍ವಾಟರ್‍ನಲ್ಲಿ ಕಲಸಿ ರೆಪ್ಪೆಗಳ ಮೇಲೆ ಹಚ್ಚಿ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

• ಕೊತ್ತಂಬರಿ ಬೀಜದಿಂದ ಕಷಾಯ ಮಾಡಿ. ಅದರಲ್ಲಿ ಹತ್ತಿಯನ್ನು ನೆನೆಸಿ, ಆ ಹತ್ತಿಯನ್ನು ಕಣ್ಣುಗಳ ಮೇಲೆ ಇಟ್ಟರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

• ಹೆಸರು ಕಾಳಿನ ಪುಡಿಯನ್ನು ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

• ಕಣ್ಣು ಉರಿ ಇದ್ದಾಗ ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಹಾಕಿ ಕಲಸಿ ಅದನ್ನು ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲೆ ಇಡಬೇಕು.

LEAVE A REPLY

Please enter your comment!
Please enter your name here