ಇದು ಪವಾಡವಲ್ಲ ವಿಜ್ಞಾನದ ಕೌತುಕ ..!

0
284

ಮನುಷ್ಯ ಎಂದೊಡನೆ ಕಣ್ಣ ಮುಂದೆ ಬರುವ ಚಿತ್ರಣ ಒಂದು ಆಕಾರವನ್ನು ತೆರೆದಿಡುತ್ತದೆ. ತಲೆ, ಕೈಗಳು ಮತ್ತು ಕಾಲುಗಳು, ನೂರಾರು ಅಂಗಾಂಶಗಳು ಮತ್ತು ಬೆಳಕಿನ ವೇಗಕ್ಕೆ ಪ್ರತಿಸ್ಪರ್ಧಿಯಂತೆ ಕಾರ್ಯನಿರ್ವಹಿಸುವ ಮೆದುಳು ಎಲ್ಲವೂ ಅಚ್ಚರಿಯ ತಾಣ. ಆದರೆ ಈ ಸುಂದರವಾದ ಜೀವ ಇರುವ ದೇಹ ಜೀವ ಹೋದಮೇಲೆ ಎಷ್ಟೆಲ್ಲಾ ಹಂತಗಳನ್ನು ತಲುಪುತ್ತದೆ ಗೊತ್ತಾ..?

ಮನುಷ್ಯನ ಸತ್ತಮೇಲಿನ ರೂಪಾಂತರ ಹೇಳುವ ಮೊದಲು ಭಾರತದ ಉತ್ತರ ಪ್ರದೇಶದಲ್ಲಿ ನಡೆದಿರುವ ಕೌತುಕ ಘಟನೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ. ಇಲ್ಲಿನ ಸ್ಮಶಾನದಲ್ಲಿ ಹೂತಿದ್ದ ಶವ 22 ವರ್ಷಗಳ ನಂತರವೂ ಹಾಗೆಯೇ ಉಳಿದಿದೆ ಎಂಬುದೇ ಆ ನಂಬಲಸಾಧ್ಯವಾದ ಘಟನೆ. ಸ್ಥಲೀಯರು ಆ ವ್ಯಕ್ತಿಯ ಬಗ್ಗೆ ಪವಾಡದ ಆತುಗಳನ್ನು ಹೇಳುತ್ತಿದ್ದಾರೆ ಆದರೆ ಇಲ್ಲಿ ವೈಜ್ಞಾನಿಕ ಕಾರಣಗಳ ಬಗ್ಗೆ ತನಿಖೆಯಾಗಬೇಕು ಎಂಬುದು ಕೆಲವರ ಬೇಡಿಕೆ.

ಹಾಗಾದ್ರೆ ಜೀವ ಹೊದ ಒಂದು ದೇಹದ ರೂಪಾಂತರ ಹೇಗಿರುತ್ತೆ ಎಂಬ ಮೂಲ ಪ್ರಶ್ನೆಗೆ ವಿಜ್ಞಾನ ಹೇಳುವ ಉತ್ತರ ವ್ಯಕ್ತಿ ಸತ್ತ 24 ರಿಂದ 27 ಗಂಟೆಯಲ್ಲಿ ದೇಹದೊಳಗಿನ ಅಂಗಾಂಶಗಳು ಕೊಳೆಯಲು ಆರಂಭಿಸುತ್ತದೆ. ವ್ಯಕ್ತಿ ಸತ್ತಯ ಮೂರರಿಂದ ಐದು ದಿನದಲ್ಲಿ ವ್ಯಕ್ತಿಯ ರಕ್ತಸಂಚಾರ ನಿಂತಿದ್ದು ಅದು ಮೂಗು ಮತ್ತು ಬಾಯಿಂದ ಹೊರಬರುತ್ತದೆ.

ಇನ್ನು ಸತ್ತ ವ್ಯಕ್ತಿಯ ದೇಹ ಎಂಟರಿಂದ ಹತ್ತು ದಿನಗಳು ಕಳೆದಂತೆ ಹಸಿರು ಬಣ್ಣದಿಂದ ಕೆಂಪುಬಣ್ಣಕ್ಕೆ ತಿರುಗುತ್ತದೆ. ರಕ್ತ ಮತ್ತು ಮಾಂಸಗಳು ಕೊಳೆಯಲಾರಂಭಿಸಿ ಒಂದು ಅನಿಲವನ್ನು ಹೊರಹಾಕುತ್ತದೆ. ಕೆಲ ವಾರಗಲ ಬಳಿಕ ಉಗುರು ಮತ್ತು ಹಲ್ಲುಗಳು ಹೊರಬರುತ್ತದೆ. ಇನ್ನು ತಿಂಗಳಾದ ಮೇಲೆ ವ್ಯಕ್ತಿಯ ದೇಹ ಕರಗಲಾರಂಭಿಸುತ್ತದೆ. ಒಂದು ವರ್ಷ ಕಳೆದರೆ ಕೇವಲ ಅಸ್ತಿಪಂಜರವಾಗಿರುತ್ತದೆ. ಹೀಗೆ ದೇಹ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಮತ್ತು ಅಸ್ತಿತ್ವ ಕಳೆದುಕೊಳ್ಳುತ್ತದೆ.

ಹಾಗಾದ್ರೆ ಎಲ್ಲಾ ದೇಹಗಳು ಕರಗುತ್ತದೆಯಾ..? ಇಲ್ಲ ಆಧುನಿಕ ವಿಜ್ಞಾನ ಮಾನವನ ದೇಹವನ್ನು ಕೊಳೆಯದಂತೆ ರಕ್ಷಿಸುವ ವಿಧಾನಗಳನ್ನು ಕರಗತ ಮಾಡಿಕೊಂಡಿದ್ದಾನೆ. ರಾಸಾಯನಿಕ ವಿಧಾನಗಳ ಮೂಲಕ ದೇಹವನ್ನು ಸ್ವಲ್ಪವೂ ಮಂಕಾಗದ ಹಾಗೆ ಜೋಪಾನವಾಗಿ ಇಡಬಹುದು ಎಂಬುದನ್ನು ಪ್ರಾಯೋಗಿಕವಾಗಿಯೇ ತೋರಿಸಿದ್ದಾನೆ.

ಜಗತ್ತಿನಲ್ಲಿ ಸತ್ತ ವ್ಯಕ್ತಿಗಳನ್ನು ಅವರ ನೆನಪಿನಾರ್ಥ ಅವರ ಸಾಧನೆಗಳನ್ನಿ ತಿಳಿಯಲು ಅವರ ದೇಹಗಳನ್ನು ಸಂರಕ್ಷಿಸಿ ಇಡಲಾಗಿದೆ. ಇಂತಹವರ ಪೈಕಿ ಖ್ಯಾತ ಕಮ್ಯುನಿಸ್ಟ್ ಲೆನಿನ್ ಶರೀರವನ್ನು ಇಂದಿಗೂ ಇಟ್ಟಿರುವುದು ಸಾಕ್ಷಿಯಾಗಿದೆ. ಲೆನಿನ್ ರಷ್ಯದಲ್ಲಿನ ಕ್ರಾಂತಿಗೆ ಹೆಸರುವಾಸಿ. ಇತನ ಸ್ಮರಣೆಯನ್ನು ಆತನ ನಿರ್ಜೀವ ದೇಹದೊಡನೆ ರಕ್ಷಿಸಿಡಲಾಗಿದೆ.

LEAVE A REPLY

Please enter your comment!
Please enter your name here