ಇದು ಖಂಡಿತ ಚಿಕನ್ ಅಲ್ಲ, ಅದು ನಿಜಕ್ಕೂ ಸತ್ತ ಹುಡುಗಿ ತಲೆ ಅಲ್ಲ..ಏನಿರಬಹುದು ಊಹಿಸಿ..?

0
815

ಈ ಫೋಟೋದಲ್ಲಿ ಇರುವುದು ನೋಡಲು ಥೇಟ್ ಟರ್ಕಿಯ ರೀತಿ ಹಾಗೂ ಸತ್ತ ಹುಡುಗಿ ತಲೆಯಂತೆ ಕಾಣುತ್ತದೆ. ಆದರೆ ಇದು ನಿಜಕ್ಕೂ ಚಿಕನ್ ಅಲ್ಲ ಹಾಗೂ ಸತ್ತ ಹುಡುಗಿ ತಲೆ ಅಲ್ಲ. ಕ್ರಿಸ್‍ಮಸ್ ಹತ್ತಿರ ಬರುತ್ತಿದೆ. ಕೇಕ್ ತಯಾರಕರು ಜನರನ್ನು ಸೆಳೆಯಲು ನಾನಾ ವಿಧವಾದ ಕೇಕ್‍ಗಳನ್ನು ತಯಾರಿಸುತ್ತಿದ್ದಾರೆ. ಅವುಗಳಲ್ಲಿ ಇದು ಕೂಡಾ ಒಂದು.

 

 

ಆದರೆ, ಇದು ಏನೇನೂ ಅಲ್ಲ, ಇನ್ನೂ ಚಿತ್ರವಿಚಿತ್ರ ಕೇಕ್‍ಗಳನ್ನು ತಯಾರಿಸಲಾಗುತ್ತದೆ. ಇದೆಲ್ಲಾ ಗ್ರಾಹಕರನ್ನು ಸೆಳೆಯುವ ತಂತ್ರವಷ್ಟೇ. ಕೆಲವರಂತೂ ತಾವೇ ಖುದ್ದು ನಮಗೆ ಇಂತದ್ದೇ ಆಕೃತಿಯ ಕೇಕ್ ಬೇಕು ಎಂದು ಕೇಳಿದಷ್ಟು ಹಣ ಕೊಟ್ಟು ಆರ್ಡರ್ ನೀಡುತ್ತಾರೆ.

 

 

ಇನ್ನು ಈ ಟರ್ಕಿ ಕೇಕ್ ಹಾಗೂ ಹುಡುಗಿ ತಲೆ ಕೇಕ್‍ಗಳನ್ನು ತಯಾರಿಸಿದ್ದು ಸಾರಾ ಹಾರ್ಡಿ ಎಂಬ ಫುಡ್ ಆರ್ಟಿಸ್ಟ್. ಈಕೆ ತನ್ನದೇ ಆದ ಒಂದು ಫುಡ್ ಮ್ಯೂಸಿಯಂ ಸ್ಥಾಪಿಸಿದ್ದಾರೆ. ಆದರೆ ಈ ಮ್ಯೂಸಿಯಂನಲ್ಲಿ ಇರುವುದು ಎಡಿಬಲ್ ಫುಡ್ ಕಲಾಕೃತಿಗಳು. ಅಂದರೆ ತಿನ್ನಲು ಯೋಗ್ಯವಾದಂತ ವಿವಿಧ ಆಕೃತಿಯ ಕೇಕ್‍ಗಳು, ಚಾಕೊಲೇಟ್‍ಗಳು.

 

 

ನೋಡಲು ಹೃದಯದಂತೇ ಇರುವ ಚಾಕೊಲೇಟ್, ಕಪ್ಪೆಗಳ ಆಕಾರದ ಚಾಕೊಲೇಟ್, ಹುಳುಗಳ ಆಕಾರದ ಚಾಕೊಲೇಟ್, ಟರ್ಕಿ ಕೇಕ್, ಮೆದುಳು ಆಕಾರದ ಕೇಕ್, ಹುಡುಗಿ ತಲೆಯ ಕೇಕ್ ಹೀಗೆ ವಿವಿಧ ರೀತಿಯ ಕೇಕ್ ಹಾಗೂ ಚಾಕೊಲೇಟ್‍ಗಳನ್ನು ಈಕೆಯ ಮ್ಯೂಸಿಯಂನಲ್ಲಿ ಕಾಣಬಹುದು.

 

 

ಇನ್ನು ಜನರು ಇವುಗಳನ್ನು ಮುಗಿಬಿದ್ದು ಕೊಂಡುಕೊಳ್ಳುತ್ತಾರಂತೆ. ಕ್ರಿಸ್‍ಮಸ್ ಸಂಭ್ರಮ ಕೂಡಾ ಈಗಾಗಲೇ ಆರಂಭವಾಗಿದ್ದು ಸಾರಾಗೆ ಪುರುಸೊತ್ತೇ ಇಲ್ವಂತೆ. ಕೇಕ್, ಚಾಕೊಲೇಟ್ ತಯಾರಿಸುವಲ್ಲಿ ಫುಲ್ ಬ್ಯುಸಿ. ಅಂದ ಹಾಗೆ ಈ ಟರ್ಕಿ ಕೇಕ್ ಬೆಲೆ 45 ಸಾವಿರ ರೂಪಾಯಿಗಿಂತ ಹೆಚ್ಚಂತೆ.

 

 

ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲಿ ಕೂಡಾ ಇಂತಹ ಚಾಕೊಲೇಟ್ ಹಾಗೂ ಕೇಕ್ ತಯಾರಕರು ಇದು ಇವುಗಳಿಂದಲೇ ಅವರು ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ನೀವೂ ಕೂಡಾ ನಿಮಗೆ ಬೇಕಾದ ಆಕಾರದ ಕೇಕ್ ಆರ್ಡರ್ ಮಾಡಬಹುದು.

LEAVE A REPLY

Please enter your comment!
Please enter your name here