ಸ್ನೇಹಕ್ಕಿಂತ ಸಮರವೇ ಸರಿ.. ಅಂತಿದ್ದಾರಾ ದರ್ಶನ್ ಮತ್ತು ಸುದೀಪ್ !

0
232

ಸ್ಯಾಂಡಲ್ ವುಡ್ ಶುರುವಾಗುತ್ತಿದೆಯಾ ಮತ್ತೆ ಭರ್ಜರಿ ಸ್ಟಾರ್‌ ವಾರ್?ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ನಡುವೆ ಶೀತಲ ಸಮರ ಶುರುವಾಗಿದೆಯಾ !? ಹೌದು ಈಗ ನಡೆಯುತ್ತಿರುವ ಕೆಲವು ಸುದ್ದಿಗಳನ್ನು ನೋಡಿದರೆ, ಕನ್ನಡದಲ್ಲಿ ಸ್ಟಾರ್ ವಾರ್ ಗಳು ಶುರುವಾಗುತ್ತಿದೆ ಅನ್ನಿಸುತ್ತದೆ.. ಸ್ನೇಹಕ್ಕಿಂತ ಸಮರವೇ ಸರಿ ಎಂಬುವ ನಿರ್ಧಾರ ತೆಗೆದುಕೊಂಡಂತಿದೆ..

ದರ್ಶನ್ ಮತ್ತು ಸುದೀಪ್ !
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ v/s ಸುದೀಪ್ ಎಂದು ಶುರುವಾಗಿದೆ.. ದರ್ಶನ್ ಬಗ್ಗೆ ಸಾಫ್ಟ್ ಕಾರ್ನರ್ ಆಗಿದ್ದ ಸುದೀಪ್, ಈಗ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ ..
ದರ್ಶನ್ ಅವರ ಸಹವಾಸವೇ ಬೇಡ ಎಂಬುವಂತಿದೆ ಸುದೀಪ್ ಅವರ ವರ್ತನೆ.. ಈಗಾಗಲೇ ಅಭಿಮಾನಿಗಳು ಸುದೀಪ್ v/s ದರ್ಶನ್ ಎಂದು ಶುರು ಮಾಡಿದ್ದಾರೆ.. ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಇದರ ಬಗ್ಗೆ ಯುದ್ಧಗಳು ಸಹ ನಡೆಯುತ್ತಿದೆ..

ಇಷ್ಟೆಲ್ಲಾ ಬೆಳವಣಿಗೆಗೆ ಏನು ಕಾರಣವೆಂದರೆ ಟ್ವಿಟ್ಟರ್ ನಲ್ಲಿ ದಾಸ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ ನಟ ಕಿಚ್ಚ ಸುದೀಪ್. ಏನೇ ಮಾಡಿದರೂ ಪ್ಯಾಚ್ಅಪ್ ಆಗದ ಸ್ಥಿತಿ ತಲುಪಿದೆ.. ದಚ್ಚು ಮತ್ತು ಕಿಚ್ಚನ ಫ್ರೆಂಡ್ ಶಿಪ್ ! ಇತ್ತೀಚಿನ ಬೆಳವಣಿಗೆಗಳಲ್ಲಿ ಮನನೊಂದು ದರ್ಶನ್ ಗೆ ಗುಡ್ ಬೈ ಹೇಳಿದ್ದಾರೆಂತೆ ಕಿಚ್ಚ ಸುದೀಪ್ ..

ಎರಡು ವರ್ಷಗಳ ಹಿಂದೆ ಟ್ವಿಟ್ಟರ್ ನಲ್ಲಿ ಸುದೀಪ್ ಅವರನ್ನು ದರ್ಶನ್ ಅವರು ಅನ್ ಫಾಲೋ ಮಾಡಿದ್ದರು.. ಆದರೆ ಎರಡು ವರ್ಷಗಳಾದರೂ ಸುದೀಪ್ ಅವರು ದರ್ಶನ್ ಅವರನ್ನು ಮಾತ್ರ ಅನ್ ಫಾಲೋ ಮಾಡಿರಲಿಲ್ಲ ಆದರೆ ಇದ್ದಕ್ಕಿದ್ದಂತೆ ಹೀಗೆ ಅನ್ ಫಾಲೋ ಮಾಡಿರುವುದರಿಂದ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ !

ಇನ್ನು ಈ ಹಿಂದೆ ದರ್ಶನ್ ಅವರು ನಾನು ಸುದೀಪ್ ಯಾವುದೇ ರೀತಿಯ ಫ್ರೆಂಡ್ಸ್ ಅಲ್ಲ ..ನಾವಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಕೋಲಿಗ್ಸ ಅಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದರು .. ಆದರೂ ಇದಕ್ಕೆ ಪ್ರತ್ಯುತ್ತರ ನೀಡದ ಸುದೀಪ್ ಅವರು ದರ್ಶನ್ ಅವರನ್ನು ಫಾಲೋ ಮಾಡುತ್ತಲೇ ಇದ್ದರು ! ಆದರೆ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಇತ್ತೀಚಿನ ಕೆಲವೊಂದಷ್ಟು ಬೆಳವಣಿಗೆಯಿಂದ ಬೇಸತ್ತ ಸುದೀಪ್ ಅವರು ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ …

ಇದರ ಬಗ್ಗೆ ಮಾತನಾಡಿದ ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಈ ರೀತಿಯ ಬೆಳವಣಿಗೆಗಳು ಕನ್ನಡದಲ್ಲಿ ಎಂದಿಗೂ ಆಗಬಾರದು .. ಏನೇ ವೈಯಕ್ತಿಕ ಬೇಸರದಲ್ಲಿದ್ದರು ಸಹಿತ, ಚಿತ್ರರಂಗದ ಬೆಳವಣಿಗೆಗಾಗಿ ದರ್ಶನ್ ಆಗಿರಬಹುದು, ಸುದೀಪ್ ಆಗಿರಬಹುದು ಕೈ ಜೋಡಿಸಬೇಕು ಎಂದು ಬೇಸರದಿಂದ ಹೇಳಿದ್ದಾರೆ..

ಹೀಗೆ ಸ್ಯಾಂಡಲ್ ವುಡ್ ಕುಚುಕುಗಳು ಬೇರಾಗಿರುವುರಿಂದ ಅಭಿಮಾನಿಗಳಿಗೆ ಸಾಕಷ್ಟು ಬೇಸರವಾಗುತ್ತಿದೆ.. ಈ ಹಿಂದೆ ಇವರಿಬ್ಬರು ಓಡಾಡುತ್ತಿದ್ದರೆ ಆರಡಿ ಕಟೌಟ್ ಓಡಾಡುತ್ತಿವೆ ಎಂದೆನಿಸುತ್ತಿತ್ತು. ಇಬ್ಬರ ಜೋಡಿ ಮತ್ತು ಸ್ನೇಹ ತುಂಬಾನೇ ಚೆನ್ನಾಗಿಯೇ ಇತ್ತು.. ಆದರೆ ಇದ್ದಕ್ಕಿದ್ದಂತೆ ಕೆಲವು ವೈಯಕ್ತಿಕ ಕಾರಣಗಳು ಮತ್ತು ಚಿತ್ರರಂಗದಲ್ಲಿ ಆದಂತಹ ಕೆಲವೊಂದು ಬೆಳವಣಿಗೆಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ ..

LEAVE A REPLY

Please enter your comment!
Please enter your name here