ಹೋಟೆಲ್ ಶೈಲಿಯಲ್ಲಿ ಶ್ಯಾವಿಗೆ ಉಪ್ಪಿಟ್ಟು ಮಾಡುವುದು ಬಹಳ ಸುಲಭ!

0
250

ಪ್ರತಿದಿನ ಬೆಳಗ್ಗೆ ಆದರೆ ಸಾಕು ಹೆಣ್ಣುಮಕ್ಕಳು ವಿಶೇಷವಾದ ಅಡುಗೆ ಮಾಡಬೇಕಲ್ಲ.. ಏನು ಮಾಡಲಿ ಅದರಲ್ಲೂ ವೇಗವಾಗಿ ಶುಚಿಯಾಗಿ ರುಚಿಯಾಗಿ ಮಾಡಬೇಕಾದ ತಿಂಡಿಗಳನ್ನು ನಿದ್ರೆ ಮಾಡುವಾಗ ಕನಸಲ್ಲೂ ಯೋಚನೆ ಮಾಡುತ್ತಿರುತ್ತಾರೆ !!

ಅದೇ ರೀತಿಯಲ್ಲಿ ಹೋಟಲ್ ಶೈಲಿಯಲ್ಲಿ ಮಾಡಬಹುದಾದ ಶ್ಯಾವಿಗೆ ಉಪ್ಪಿಟ್ಟನ್ನು ಕೇವಲ 5 ನಿಮಿಷದಲ್ಲಿ ರೆಡಿ ಮಾಡುವ ರೆಸಿಪಿ ಯನ್ನು ನಾವು ತಿಳಿಸುತ್ತೇವೆ !

ಶಾವಿಗೆ ಉಪ್ಪಿಟ್ಟಿಗೆ ಬೇಕಾದ ಸಾಮಗ್ರಿಗಳು :-

250g ಶಾವಿಗೆ

ಒಗ್ಗರಣೆಗೆ – medium size 2 ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು

-1/2 ಇಂಚು ಶುಂಠಿಯನ್ನು ತೆರೆದಿಟ್ಟುಕೊಳ್ಳಬೇಕು

-3 ರಿ೦ದ 4 table spoon ಅಷ್ಟು ಕೊತ್ತಂಬರಿ ಸೊಪ್ಪು

-3 ರಿ೦ದ 4 ಹಸಿ ಮೆಣಸಿನಕಾಯಿ (ಖಾರ ನೋಡಿಕೊಂಡು ಹಾಕಬೇಕು)

-ಸ್ವಲ್ಪ ಕರಿಬೇವು

– 1 Table spoon ಕಡಲೆ ಬೇಳೆ,1/2 ಉದ್ದಿನ ಬೇಳೆ ..

1 tea spoon ಅಷ್ಟು ಅರಿಶಿನ, ಅರ್ಧ ಹೋಳು ನಿಂಬೆ ಹಣ್ಣು

1/2 tea spoon ಅಷ್ಟು ಸಾಸಿವೆ ಉಪ್ಪು ರುಚಿಗೆ ತಕ್ಕಷ್ಟು

3 table spoon ಅಷ್ಟು ಕಡಲೆಕಾಯಿ ಎಣ್ಣೆ

ಮಾಡುವ ವಿಧಾನ :-

ಮೊದಲಿಗೆ ಒಲೆಯ ಮೇಲೆ ಒಂದು ಲೀಟರ್ ನೀರನ್ನು ಕದಿಯುವುದಕ್ಕೆ ಇಡಬೇಕು.. ತದನಂತರ ಕುದಿಯುವ ನೀರಿಗೆ 1 table spoon ಅಷ್ಟು ಕಡಲೆಕಾಯಿ ಎಣ್ಣೆಯನ್ನು ಹಾಕಬೇಕು.(ಈ ರೀತಿ ಎಣ್ಣೆ ಹಾಕುವುದರಿಂದ ಶಾವಿಗೆ ಮುದ್ದೆ ರೀತಿ ಹಾಕುವುದಿಲ್ಲ ಮತ್ತು ಅಂಟಿಕೊಳ್ಳುವುದಿಲ್ಲ. ಬಿಡುಬಿಡಿಯಾಗಿ ಆಗುತ್ತದೆ )

ತದನಂತರ ಕುದಿಯುತ್ತಿರುವ ನೀರಿಗೆ ಯಾವುದೇ ರೀತಿ ಪುಡಿ ಮಾಡದಂತೆ ಶಾವಿಗೆಯನ್ನು ಹಾಕಬೇಕು (ಪುಡಿ ಮಾಡಿದರೆ ಒಗ್ಗರಣೆ ಸಮಯದಲ್ಲಿ ಮುದ್ದೆಯಂತೆ ಆಗುತ್ತದೆ )

ತದನಂತರ ಎರಡು ನಿಮಿಷಗಳ ಕಾಲ ನೀರಲ್ಲಿ ಶಾವಿಗೆ ಬಾಯ್ಲ್ ಆಗಲು ಬಿಡಬೇಕು. ನಂತರ ಬಾಯ್ಲ್ ಆಗಿರುವ ಶಾವಿಗೆಯನ್ನು ಸೋಸುವ ಪಾತ್ರೆಯಲ್ಲಿ ಸೋಸಿಕೊಂಡು ಸಾರಿಗೆಗೆ ದಂಡನೆಯ ನೀರನ್ನು ಹಾಕಿಕೊಳ್ಳಬೇಕು (ಈ ರೀತಿ ತಣ್ಣನೆಯ ನೀರನ್ನು ಹಾಕಿಕೊಳ್ಳುವುದರಿಂದ ಶಾವಿಗೆ ಬಿಡಿಬಿಡಿಯಾಗಿ ಆಗುತ್ತದೆ )

ತದನಂತರ ಒಗ್ಗರಣೆಗ ರೆಡಿ ಮಾಡಿಕೊಳ್ಳುವುದು :-

ಒಂದು ಬಾಂಡ್ಲಿಯಲ್ಲಿ 3 table spoon ಅಷ್ಟು ಸಣ್ಣ ಹೆಣ್ಣು ಹಾಕಿ ಬಿಸಿ ಮಾಡಲು ಬಿಡಬೇಕು. ಎಣ್ಣೆ ಬಿಸಿಯಾದ ನಂತರ ಕಡಲೆ ಬೇಳೆಯನ್ನು ಹಾಕಿ ಒಂದು ನಿಮಿಷ ಬಾಡಿಸಬೇಕು. ನಂತರ ಉದ್ದಿನ ಬೇಳೆ ,ಸಾಸಿವೆ ಹಾಕಿಕೊಂಡು ಬಾಡಿಸಬೇಕು. ಎಲ್ಲಾ ಫ್ರೈ ಆದ ನಂತರ ತುರೆದುಕೊಂಡ ಶುಂಠಿ, ಕರಿಬೇವು, ಹಸಿಮೆಣಸಿನಕಾಯಿ ಅರಿಶಿಣ, ಈರುಳ್ಳಿಯನ್ನು ಹಾಕಿಕೊಂಡು ಈರುಳ್ಳಿ ಮೃದುವಾಗಿ ಆಗುವವರೆಗೂ ಮಾಡಿಸಿಕೊಳ್ಳಬೇಕು ..

ತದನಂತರ ಬಾಯಿಲ್ ಮಾಡಿದ್ದ ಶಾವಿಗೆಯನ್ನು ಒಗ್ಗರಣೆ ಬಾಂಡಲೆಗೆ ಹಾಕಬೇಕು. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು .

ಎರಡು ನಿಮಿಷ ಬಾಡಿಸಿ ನಂತರ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಬೇಕು..
ಹಾಗೆ ಎರಡು ನಿಮಿಷಗಳ ಕಾಲ ಲೋ ಫ್ರೇಮ್ನಲ್ಲಿ ಬಿಸಿಯಾಗಲು ಬಿಡಬೇಕು ..

ಇಷ್ಟವಿದ್ದಲ್ಲಿ ಗೋಡಂಬಿಯನ್ನು ಸಹ ಹಾಕಿಕೊಳ್ಳಬಹುದು ಹಾಗೆಯೇ ಶಾವಿಗೆ ಉಪ್ಪಿಟ್ಟಿಗೆ ಬೆಸ್ಟ್ ಕಾಂಬಿನೇಷನ್ ಅಂದರೆ ಚಟ್ನಿ ! ತುಂಬಾನೇ ರುಚಿಕರವಾಗಿರುತ್ತದೆ

LEAVE A REPLY

Please enter your comment!
Please enter your name here