ಮದುವೆಯಾಗದ ಯುವಕ-ಯುವತಿ ಲಾಡ್ಜ್ನ ಒಂದೇ ರೂಂನಲ್ಲಿರುವುದು ಕ್ರಿಮಿನಲ್ ಅಪರಾಧವೇನಲ್ಲ ಅಂತ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ.ಎಸ್.ರಮೇಶ್ ಅವರು ನೀಡಿರುವ ಈ ಆದೇಶದಲ್ಲಿ ಅವಿವಾಹಿತ ಹುಡುಗ-ಹುಡುಗಿ ಹೋಟೆಲ್ ಕೊಠಡಿಗಳಲ್ಲಿ ಇರುವುದನ್ನು ನಿಷೇಧಿಸುವುದಕ್ಕೆ ಯಾವುದೇ ಕಾನೂನು ಅಥವಾ ನಿಯಮಗಳಿಲ್ಲ ಹೇಳಿದ್ದಾರೆ.
ಇನ್ನು ಕೊಯಮತ್ತೂರಿನಲ್ಲಿ ಬಾಡಿಗೆ ಸೇವಾ ಅಪಾರ್ಟ್ಮೆಂಟ್ ಅನ್ನು ಡಿ-ಸೀಲ್ ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸುವಾಗ ಅವರು ಈ ಆದೇಶವನ್ನು ನೀಡಿದ್ದಾರೆ. ಇತ್ತೀಚೆಗೆ ಕೋಯಂಬತ್ತೂರಿನಲ್ಲಿ ಖಾಸಗಿ ಲಾಡ್ಜ್ವೊಂದಕ್ಕೆ ಜಿಲ್ಲಾಧಿಕಾರಿ ಸೀಲ್ ಹಾಕಿದ್ದರು. ಆ ಲಾಡ್ಜ್ನ ರೂಂವೊಂದರಲ್ಲಿ ಅವಿವಾಹಿತ ಜೋಡಿ ಮತ್ತು ಮತ್ತೊಂದು ರೂಂನಲ್ಲಿ ಮದ್ಯದ ಬಾಟಲ್ಗಳು ದೊರಕಿದ್ದವು ಪೊಲೀಸ್, ರೆವೆನ್ಯೂ ಅಧಿಕಾರಿಗಳು ಲಾಡ್ಜ್ನ್ನು ಸೀಜ್ ಮಾಡಿದ್ದರು.
ಇದನ್ನು ಪ್ರಶ್ನಿಸಿ ಲಾಡ್ಜ್ ಮಾಲೀಕ ಮದ್ರಾಸ್ ಹೈಕೋರ್ಟ್ನಲ್ಲಿ ಪಿಟಿಷನ್ ದಾಖಲು ಮಾಡಿದ್ದರು. ಈ ವೇಳೆ ನ್ಯಾಯಾಪೀಠ . ಅವಿವಾಹಿತ ಸ್ತ್ರೀ, ಪುರುಷ ಒಂದೇ ರೂಂನಲ್ಲಿ ಇರಬಾರದೆಂಬ ಕಾನೂನು ಇಲ್ಲದ ಮೇಲೆ ಅದು ತಪ್ಪು ಹೇಗಾಗುತ್ತೆ ಎಂದು ಪ್ರಶ್ನಿಸಿ, ಒಂದೇ ರೂಂನಲ್ಲಿ ಅವಿವಾಹಿತ ಜೋಡಿ ಇರುವುದು ಅಪರಾಧವೆಂದು ನೋಡಲು ಸಾಧ್ಯವಿಲ್ಲ ಅಂತಾ ಸ್ಪಷ್ಟಪಡಿಸಿದೆ.