ಆ ಸಂದೇಶದಲ್ಲಿರುವುದು ಅವರ ಭಾಷೆಯಾ..?

0
259

ವಿಜ್ಞಾನಿಗಳಿಗೆ ಹೊಸ ಸವಾಲ ಎದುರಾಗಿದ್ದು ಭೂಮಿಯಾಚೆಗಿನ ಜೀವದ ಹಡುಕಾಟದಲ್ಲಿರುಇವ ವಿಜ್ಞಾನಿಗಳಿಗೆ ಸಿಕ್ಕಿರುವ ಆ ಒಂದು ಸುಳಿವು ಈಗ ನಿದ್ದೆಗಡಿಸಿದೆ. ಕೆಲದಿನಗಳಿಂದ ಬಂದಿರುವ ಸಂದೇಶ ಏನು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಅನ್ಯಗ್ರಹ ಜೀವಿಗಳ ಇರುವಿಕೆ ಬಗ್ಗೆ ಸತತ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ನೂರಾರು ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹೀಗಿರುವಾಗ ಸದ್ಯ ಬಂದಿರುವ ಹೊಸ ಮಾಹಿತಿ ಆ ಒಂದು ಸಂದೇಶ. ಭೂಮಿಯಾಚೆಗಿನ ಭಾಗದಿಂದ ದೊರೆತಿರುವ ಸಿಗ್ನಲ್ ಬಗ್ಗೆ ವಿಜ್ಞಾನಿಗಳು ಶೋಧನೆಯಲ್ಲಿ ತೊಡಗಿದ್ದಾರೆ.

ಸದ್ಯ ವಿಜ್ಞಾನಿಗಳಿಗೆ ದೊರೆತಿರುವ ಸಂದೇಶ ಶಕ್ತಿಯ ಸ್ಫೋಟ ಅಥವಾ ಫಾಸ್ಟ್ ರೆಡಿಯೋ ಬಸ್ರ್ಡ (ಎಫ್‍ಆರ್‍ಬಿ) ಎಂದು ಗುರುತಿಸಲಾಗುವ ಇಂತಹ ಎಂಟು ಸಂದೇಶಗಳು ಭೂಮಿಯಲ್ಲಿ ಸ್ಥಾಪಿಸಿರುವ ರೇಡಿಯೋ ಟೆಲಿಸ್ಕೋಪ್‍ಗಳಿಗೆ ಬಂದಿದೆ. ಈ ಸಂದೇಶಗಳ ಮೂಲ ಬಯಲಾಗಬೇಕಿದೆ.

ಅಷ್ಟಕ್ಕೂ ಈ ಸಂದೇಶಗಳು ಹೊಸದೇನಲ್ಲ, ಈ ಹಿಂದೆ ಅಂದರೆ 2007 ರಲ್ಲಿಯೂ ಇಂತಹ ಸಂದೇಶಗಳು ಬಂದಿತ್ತು. ಇನ್ನು ಆಗ ಬಮದಿದ್ದ ಸಿಗ್ನಲ್ ಮತ್ತು ಈಗ ಹೊಸದಾಗಿ ಸಿಕ್ಕಿರುವ ಸಿಗ್ನಲ್ ಎರಡನ್ನು ಪರೀಕ್ಷೆ ಮಾಡಬೇಕಾಗಿದೆ. ಎಪ್‍ಆರ್‍ಬಿ ಸಿಗ್ನಲ್‍ನ ಅರ್ಥವನ್ನು ಅದರ ಮರ್ಮವನ್ನು ವಿಜ್ಞಾನಿಗಳು ಅರಿಯಬೇಕಿದೆ.

ಒಂದು ಮಾಹಿತಿಯ ಪ್ರಕಾರ ಭೂಮಿಯ ಹತ್ತಿರದಿಂದಲೇ ಈ ಸಿಗ್ನಲ್‍ಗಳು ಬರುತ್ತಿವೆ. ಇನ್ನೂ ಈ ಸಿಗ್ನಲ್‍ಗಳು ಭೂಮಿ ಇರುವ ಮಿಲ್ಕಿ ವೇ ಗ್ಯಾಲಕ್ಸಿಯಿಂದಲೇ ಬಂದಿದೆ ಎಂಬುದು ವಿಜ್ಞಾನಿಗಳ ಮೊದಲ ಮಾತು.
ಇನ್ನು ಕೆನಡಾದಲ್ಲಿರುವ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಎಕ್ಸರಿಮೆಂಟ್‍ನ ಟೆಲಿಸ್ಕೋಪ್‍ಗೆ ದೊರೆತಿರುವ ಸಂದೇಶಗಳು ನಿಖರವಾದ ಅರ್ಥವನ್ನು ಭೇದಿಸಲು ವಿಜ್ಞಾನಿಗಳು ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ವಿಜ್ಞಾನಿಗಳಿಗೆ ಎದುರಾಗಿರುವ ಪ್ರಶ್ನೆಗಳು ಇದು ನಿಜವಾಗಿಯೂ ಅನ್ಯಗ್ರಹ ಜೀವಿಗಳದ್ದೋ ಅಥವಾ ನಕ್ಷತ್ರಗಳ ಕೊನೆಯ ಹಂತವಾದ ಕಪ್ಪುರಂಧ್ರವಾಗುವ ಕ್ರಿಯೆಯದ್ದೊ ಅನ್ನೋದು ಡೌಟ್.

ಭೂಮಿಯ ರಚನೆ ಮತ್ತು ಬ್ರಹ್ಮಾಂಡದ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳಿಗೆ ಈ ಹೊಸ ಸಂದೇಶದಿಂದ ಅವರ ಪ್ರಯತ್ನ ಮತ್ತು ನಿರಂತರ ಪರಿಶ್ರಮಕ್ಕೆ ಇಂದಲ್ಲ ನಾಳೆ ಉತ್ತರ ಸಿಗಲಿದೆ. ಸುಖಾ ಸುಮ್ಮನೆ ಅನ್ಯಗ್ರಹ ಜೀವಿಗಲಿವೆ ಅವುಗಳೇ ಈ ಸಂದೇಶ ಕಳುಹಿಸಿದೆ ಎನ್ನುವ ಊಹೆ ಮಾತುಗಳಿಗೆ ಆಸ್ಪದವಿಲ್ಲದೆ ವಿಜ್ಞಾನಿಗಳು ನಿರ್ಧಿಷ್ವಾಗಿ ಆ ಸಂದೇಶದ ಮೂಲಗಳನ್ನು ಹೊರಗೆಳೆಯುತ್ತಾರೆ.

LEAVE A REPLY

Please enter your comment!
Please enter your name here