ಸಲ್ಮಾನ್ ಖಾನ್ ತಂದೆಯಾಗಲಿದ್ದಾರೆಯೇ?

0
250

ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ತಂದೆ ಆಗಲಿದ್ದಾರೆ ಎಂದು ನಟಿ ರಾಣಿ ಮುಖರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ.ಖಾಸಗಿ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ರಾಣಿ ಮುಖರ್ಜಿ ಇತ್ತೀಚೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಆಗಮಿಸುತ್ತಿದ್ದಂತೆ ಮುನಿಸಿಕೊಂಡ ರಾಣಿ ಮುಖರ್ಜಿ ನನಗೆ ನೀಡಿದ ಮಾತನ್ನು ನೀವು ಪೂರ್ಣಗೊಳಿಸಿಲ್ಲ ಎಂದು ಸಲ್ಮಾನ್ ಖಾನ್ ಗೆ ಬೆದರಿಸಿದರು.

 

ಇದಕ್ಕೆ ಸಲ್ಮಾನ್ ಪ್ರಶ್ನೆ ಮಾಡಿದಾಗ, ಸ್ಕ್ರೀನ್ ಮೇಲೆ ವಿಡಿಯೋ ಪ್ಲೇ ಆಯ್ತು. ಸೀಸನ್ 11ರ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿ ಅದೇ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಮದುವೆ ಆಗದಿದ್ದರೂ ಪರವಾಗಿಲ್ಲ. ಮಕ್ಕಳನ್ನಾದರು ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ರಾಣಿ ಮಾತಿಗೆ ತಲೆ ಆಡಿಸಿದ್ದ ಸಲ್ಮಾನ್ ಒಪ್ಪಿಗೆ ಸೂಚಿಸಿದ್ದರು. ಈಗ ರಾಣಿ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ.

 

ಇಷ್ಟು ಬೇಗ ಮಕ್ಕಳು ಬರಲ್ಲ ಎಂದು ಹೇಳಿ ಸಲ್ಮಾನ್ ಜಾರಿದರು. ಆಗ, ರಾಣಿ ಹಾಗಾದರೆ, 18 ತಿಂಗಳು ಬೇಕಾ ಎಂದರು. ಇದಕ್ಕೆ ರಾಣಿ ಸುಳ್ಳು ಹೇಳುವುದಿಲ್ಲ ಎಂದು ಸಲ್ಮಾನ್ ಹೇಳಿದರು. ಇಬ್ಬರ ಮಾತುಗಳು ಮಾತ್ರ ಅಭಿಮಾನಿಗಳಲ್ಲಿ ಆಶ್ಚರ್ಯ ಹುಟ್ಟಿಸಿದೆ.

LEAVE A REPLY

Please enter your comment!
Please enter your name here