ಆರ್ ಎಸ್‍ಎಸ್ ಸೇರಿದ್ರಾ ಐಪಿಎಸ್ ಅಣ್ಣಾಮಲೈ..?!

0
270

ಕರ್ನಾಟಕ ಕದರ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ ಅಣ್ಣಾಮಲೈ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಅಚ್ಚರಿ ಎಂದರೆ ಅಣ್ಣಾಮಲೈ ಇದೀಗ ತಮಿಳುನಾಡಿನ ಆರ್ ಎಸ್‍ಎಸ್ ಘಟನವನ್ನು ಸೇರಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರ್ಪಡೆಗೊಂಡು ತಮಿಳುನಾಡಿನಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ಅವರು, “ನಾನು ಯಾವುದೇ ಸಂಘಟನೆಗೆ ಸೇರಿಲ್ಲ. ನಾನು ಸಂಘಟನೆಯೊಂದಕ್ಕೆ ಸೇರಿದ್ದೇನೆ ಎಂಬುದೆಲ್ಲ ಸುಳು. ನಾನು ಒಂದು ಧರ್ಮದ ಪರ ನಿಂತಿದ್ದೇನೆ ಎಂದೂ ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ನನ್ನ ರಾಜೀನಾಮೆಯನ್ನು ಸರ್ಕಾರವು ಅಧಿಕೃತವಾಗಿ ಸ್ವೀಕರಿಸಿದ ಬಳಿಕ ನನ್ನ ಭವಿಷ್ಯದ ಹೆಜ್ಜೆಗಳು ಮತ್ತು ನಿಲುವನ್ನು ಸ್ಪಷ್ಟಪಡಿಸುತ್ತೇನೆ. ಅಲ್ಲಿಯವರಿಗೆ ಯಾವುದೇ ರೀತಿಯ ಊಹಾಪೋಹಗಳಿಂದ ಕಿವಿಗೊಡಬಾರದು” ಎಂದು ತಮ್ಮ ಅಭಿಮಾನಿಗಳಲ್ಲಿ ಅಣ್ಣಾಮಲೈ ಅವರು ಮನವಿ ಮಾಡಿದ್ದಾರೆ.

ನಾನು ನಿವೃತ್ತ ಪೊಲೀಸ್ ಅಧಿಕಾರಿ ಮಾತ್ರ

ನಾನೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಮಾತ್ರ. ನಾನು ಸುಮಾರು ಒಂದು ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಇಲಾಖೆ ನನಗೆ ಅನೇಕ ಮೌಲ್ಯಗಳನ್ನು ಕಲಿಸಿದೆ. ಇನ್ನು ನಾನು ಇದುವರೆಗೆ ಯಾವುದೇ ಸಂಘಟನೆಗೂ ಸೇರಿಲ್ಲ. ನಾನು ಸಂಘಟನೆಯೊಂದಕ್ಕೆ ಸೇರಿ ಕೊಯಮತ್ತೂರಿನಲ್ಲಿ ಅದರ ಶಾಖೆ ತೆರೆದಿದ್ದೇನೆ ಎಂಬ ಸಂಗತಿಗಳು ಸತ್ಯಕ್ಕೆ ದೂರವಾದದ್ದು. ನಾನು ಐಪಿಎಸ್ ಹುದ್ದೆಗೆ ನೀಡಿರುವ ರಾಜೀನಾಮೆ ಕೇಂದ್ರ ಸರ್ಕಾರದಿಂದ ಅಂಗೀಕೃತವಾಗಿಲ್ಲ. ಹಾಗಾಗಿ ನಾನು ಈಗಲೂ ಸಹ ಸರ್ಕಾರದ ಭಾಗವಾಗಿದ್ದೇನೆ. ಹೀಗಾಗಿ ಯಾವುದೇ ಸಂಘ-ಸಂಸ್ಥೆಗಳನ್ನು ಸೇರುವ ಪ್ರಶ್ನೆಯೇ ನನ್ನ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here