ರಾಜ್ಯಮಟ್ಟದ ಕವನ ಸ್ಪರ್ಧೆಗೆ ಆಹ್ವಾನ..!

0
352

ತನಾರತಿ ಸಾಂಸ್ಕ್ರತಿಕ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜಿಸಲಾಗಿದೆ. ಯಾದಗಿರಿಯ ತನಾರತಿ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ಕವನ ಸ್ಪರ್ಧೆ ಮತ್ತು ರಾಜ್ಯ ಮಟ್ಟದ ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವಿಚಾರ ಕುರಿತು ಮಾತನಾಡಿದ ಪ್ರತಿನಾಷ್ಠದ ಸಂಸ್ಥಾಪಕ ಅಧ್ಯಕ್ಷರಾಗಿರುವ ಡಾ. ಸಿದ್ದರಾಜ್ ಎಸ್. ರೆಡ್ಡಿ ಅವರು ತಮ್ಮ ಬರವಣಿಗೆಯ ಮೂಲಕ ಕವನಗಳನ್ನು ಬರೆಯುವ ಕವಿಯು ತಮ್ಮದೇ ವಿನೂತನ ಶೈಲಿಯಲ್ಲಿ ಬರೆದಿರುವ ಎರಡು ಕವನಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಕಳುಹಿಸಬೇಕಾಗಿದೆ.

ಕವನಗಳನ್ನು ಅನುವಾದಿತ ರೂಪದಲ್ಲಿ ಇದ್ದರೆ ಅದನ್ನು ಪರಿಗಣಿಸುವುದಿಲ ಸ್ಪರ್ದಿಗಳು ಬಹು ಮುಖ್ಯವಾಗಿ ತಾವು ಬರೆಯುವ ಕವನ ಕನಿಷ್ಟ 25 ರಿಂದ 30 ಸಾಲುಗಳನ್ನು ಮೀರಬಾರದು. ರಾಜಕೀಯ ವಿಷಯವಾಗಿ, ಜಾತಿ ಧರ್ಮ ಪರ ಅಥವಾ ವಿರೋಧವಾಗಿ ಬರೆಯುವ ಹಾಗಿಲ್ಲ. ಇದಿಷ್ಟು ಕವನ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಇರುವ ಷರತ್ತುಗಳು ಎಂಬುದನ್ನು ಸಿದ್ದರಾಜ್ ಅವರು ತಿಳಿಸಿದ್ದಾರೆ.

ಈ ಕವನ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಕವಿಗಳಿಗೆ ಕವನ ಸಂಕಲನ, ಅಭಿನಂದನಾ ಪತ್ರ, ನೆನೆಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಗುತ್ತದೆ. ಕವಿಗೋಷ್ಟಿಗೆ ಅಯ್ಕೆಯಾದ ಕವಿಗಳಿಗೆ ವೈಯಕ್ತಿಕ ಆಹ್ವಾನ ನೀಡಲಾಗುತ್ತದೆ. ಈ ಸ್ಪರ್ದೆಯಲ್ಲಿ ಭಾಗವಹಿಸಲು ಹಾಗೂ ನಿಮ್ಮ ಕವನಗಳನ್ನು ಕಳುಹಿಸಲು ಕೊನೆಯ ದಿನಾಂಕ 15-09-2019 ಆಗಿರಲಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕೊಟ್ಟಿರುವ ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9886065902, 7406125555.

LEAVE A REPLY

Please enter your comment!
Please enter your name here