ಸಲಿಂಗ ಮದುವೆಯಾಗಿ ಗರ್ಭಿಣಿಯಾದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟರ್

0
291

ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿರುವುದಾಗಿ ನ್ಯೂಜಿಲೆಂಡ್ ನ ಮಹಿಳಾ ಕಪ್ತಾನ ಎಮಿ ಸೈತಾರ್ಥವೆಟ್ ಮತ್ತು ಅವರ ಪತ್ನಿ ಹಾಗೂ ಅವರ ತಂಡದ ಆಟಗಾರ್ತಿಯಾಗಿರುವ ತಾಹು ಹೇಳಿದ್ದಾರೆ. ಸಲಿಂಗ ಜೋಡಿಯಾಗಿರುವ ಇವರು ಮಗು ಪಡೆಯುತ್ತಿರುವುದು ವಿಶೇಷ ವಾಗಿದೆ. ಇದಕ್ಕಾಗಿ ಕ್ರಿಕೆಟ್ನಿಂದ ಅನಿರ್ದಿಷ್ಟಾವಧಿ ಬ್ರೇಕ್ ತೆಗೆದುಕೊಳ್ಳಲಿರುವ 23 ವರ್ಷ ವಯಸ್ಸಿನ ಸೈತಾರ್ಥವೆಟ್ ,” ನ್ಯೂಜಿಲೆಂಡ್ ಕ್ರಿಕೆಟ್ ನನಗೆ ಕುಟುಂಬಕ್ಕಾಗಿ ಬ್ರೇಕ್ ತೆಗೆದುಕೊಳ್ಳುವಲ್ಲಿ ತುಂಬ ಸಹಕಾರ ನೀಡಿರುವುದಕ್ಕೆ ನಾನು ಭಾಗ್ಯಶಾಲಿ. ಮಾತ್ರವಲ್ಲ ನಮ್ಮ ಮಗುವನ್ನು ಪಡೆಯಲು ನಾವು ತುಂಬಾ ಕಾತರರಾಗಿದ್ದೇವೆ ” ಎಂಬುದಾಗಿ ಹೇಳಿದ್ದಾರೆ.

ಲೆಸ್ಬಿಯನ್, ಸಲಿಂಗಕಾಮಿ, ದ್ವಿಲಿಂಗಿ ಮತ್ತು ಟ್ರಾನ್ಸ್ಜೆಂಡರ್ (ಎಲ್ಜಿಬಿಟಿ) ಮದುವೆಯನ್ನು ಆಗಸ್ಟ್ 2013 ರಲ್ಲಿ ನ್ಯೂಜಿಲೆಂಡ್ ನಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ಆಮಿ ಮತ್ತು ಲೀ ಎಂಬ ಸಲಿಂಗಕಾಮಿ ದಂಪತಿಗಳು 2014 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ತದನಂತರ ಮಾರ್ಚ್ 2017 ರಲ್ಲಿ ಅವರು ವಿವಾಹವಾದರು. 2018 ರಲ್ಲಿ, ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಸಹ ತನ್ನ ತಂಡದ ಸಹ ಆಟಗಾರ್ತಿ ಮಾರಿಜನ್ನೆ ಕಾಪ್ ಅವರನ್ನು ವಿವಾಹವಾದರು.

LEAVE A REPLY

Please enter your comment!
Please enter your name here