ವಿಘ್ನ ನಿವಾರಕ ಗಣೇಶನಿಗೂ ಇನ್ಸೂರೆನ್ಸ್..! ಇದು ಕಲಿಯುಗ ಕಣ್ರಿ..

0
182

ಹಿಂದೂಗಳ ಪವಿತ್ರ ಉತ್ಸವ ಗಣೇಶೋತ್ಸವಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ದೇಶಾದ್ಯಂತ ಗಣೇಶೋತ್ಸವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲೆಡೆ ಸಿದ್ದತೆ ನಡೆದಿದೆ. ಇನ್ನು ದೇಶದ ಎಲ್ಲ ಕಡೆ ಗಣೇಶ ಹಬ್ಬ ಆಚರಿಸಿದರೂ, ಮಹಾರಾಷ್ಟ್ರದಲ್ಲಿ ಒಂದು ಕೈಮೇಲು. ಇಲ್ಲಿ ಕೆಲವೊಂದು ಕಡೆ, ಗಣೇಶನಿಗೆ ವಿಮೆ ಮಾಡಿಸುವ ಪದ್ದತಿಯನ್ನು ರೂಢಿಸಿಕೊಂಡು ಬರಲಾಗಿದೆ.

ಹೌದು, ಇದು ಅಚ್ಚರಿ ಎನಿಸಿದರು ಸತ್ಯ. ಮಹಾರಾಷ್ಟ್ರ ಮುಂಬೈ ಸೆಂಟ್ರಲ್ ಭಾಗದ ಕಿಂಗ್ಸ್ ಸರ್ಕಲ್‍ನಲ್ಲಿ ಗೌಡ ಸಾರಸ್ವತ ಬ್ರಾಹ ಸಮುದಾಯದವರು, ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ವಿನಾಯಕನಿಗೆ ದೇಶದ ‘ಶ್ರೀಮಂತ ಗಣೇಶ’ ಎಂದೇ ಹೆಸರು. ಇದಕ್ಕೆ ಕಾರಣವೆಂದರೆ ವೈಭೋವೋಪಿತವಾಗಿ ನಡೆಯುವ ಗಣೇಶೋತ್ಸವ ಮತ್ತು ಈ ಗಣೇಶನಿಗೆ ಮಾಡಿಸುವ ಇನ್ಸೂರೆನ್ಸ್ ಮೊತ್ತ.

ಹೌದು, ಗೌಡ ಸಾರಸ್ವತ ಬ್ರಾಹ ಸಮುದಾಯದವರು ಈ ಬಾರಿಯ ಉತ್ಸವಕ್ಕೆ ಗಣೇಶನಿಗೆ ಬರೋಬ್ಬರಿ 266.65 ಕೋಟಿ ರೂಪಾಯಿ ವಿಮೆಯನ್ನು ಮಾಡಿಸಿದ್ದಾರಂತೆ. ರಾಷ್ಟ್ರೀಕೃತ ವಿಮಾ ಕಂಪನಿಯಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಹಲವಾರು ಅಪಾಯಗಳಿಗೆ ವಿಮೆ ಮಾಡಿಸಲಾಗಿದೆ. ಭೂಕಂಪ, ಬೆಂಕಿ ಅವಗಢಕ್ಕೆ ಒಂದು ಕೋಟಿ, ಇನ್ನುಳಿದಂತೆ 20.35 ಕೋಟಿ ರೂಪಾಯಿ ಸಾರ್ವಜನಿಕ ಸ್ವತ್ತುಗಳು, ಪೆಂಡಾಲ್ ಮತ್ತು ಬರುವ ಭಕ್ತರ ವಿಮೆಗಾಗಿ ಮೀಸಲಿಡಲಾಗಿದೆ.

ಇನ್ನು ಒಟ್ಟು 266 ಕೋಟಿ ರೂಪಾಯಿಗಳಲ್ಲಿ 20.40 ಕೋಟಿ ರೂ.ಗಳ ವಿಮೆಯನ್ನು ಚಿನ್ನ, ಬೆಳ್ಳಿ ಮತ್ತು ಆಭರಣಗಳಿಗೆ, ಸ್ವಯಂಸೇವಕರು, ಪುರೋಹಿತರು, ಅಡುಗೆಯವರು, ಚಪ್ಪಲ್ ಸ್ಟಾಲ್ ನಲ್ಲಿನ ಕೆಲಸಗಾರರು, ಪಾಕಿರ್ಂಗ್ ಪ್ರದೇಶದಲ್ಲಿ ಕೆಲಸ ಮಾಡುವವರು ಮತ್ತು ಭದ್ರತಾ ಸಿಬ್ಬಂದಿಗಳಿಗೆ 224.90 ಕೋಟಿ ರೂಪಾಯಿ ವೈಯಕ್ತಿಕ ಅಪಘಾತ ವಿಮೆಗೆ ಮೀಸಲಿಡಲಾಗಿದೆ.

LEAVE A REPLY

Please enter your comment!
Please enter your name here