ಸುಪ್ರೀಂ ಮೆಟ್ಟಿಲೇರಿದ ಅನರ್ಹ ಶಾಸಕರು …

0
312

ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ರವರು ಅತೃಪ್ತ ಶಾಸಕರಿಗೆ ನೀಡಿದ್ದ ಅನರ್ಹತೆ ಆದೇಶವನ್ನು ಪ್ರಶ್ನಿಸಿ 15 ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ .

ಕಳೆದ ಸೋಮವಾರ ಅನರ್ಹಗೊಂಡಿದ್ದ ಇಬ್ಬರು ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್‍ ಕುಮಟಳ್ಳಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು ಅದರ ಬೆನ್ನಲ್ಲೆ ಉಳಿದ 15 ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸ್ಪೀಕರ್ ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ. ಅನರ್ಹ ಶಾಸಕರ ಅರ್ಜಿ ಇಂದು ಇಲ್ಲವೇ ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಅನರ್ಹ ಶಾಸಕರ ಅರ್ಜಿಯಲ್ಲಿ ಏನಿದೆ?
ಮೊದಲು ರಾಜೀನಾಮೆ ಅಂಗಿಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು ಅದರೆ ಸ್ಪೀಕರ್ ರಮೇಶ್ ಕುಮಾರ್ ರವರು ಶಾಸಕರನ್ನು ಅನರ್ಹಮಾಡಿದ್ದಾರೆ, ಅವರ ಈ ಆದೇಶ ಅಸಂವಿಧಾನಿಕವಾಗಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಶಾಸಕರನ್ನು ಅನರ್ಹ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ.
ವಿಶ್ವಾಸಮತಯಾಚನೆಗೆ ಹಾಜರಾಗುವ ಕುರಿತು ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರಿಗೆ ವಿನಾಯಿತಿ ನೀಡಿತ್ತು. ಆದರೆ ವಿಶ್ವಾಸಮತದ ವೇಳೆ ಪಕ್ಷ ನೀಡಿದ್ದ ವಿಪ್ ಉಲ್ಲಂಘನೆ ಮಾಡಿದ ಕಾರಣ ನೀಡಿ ಅನರ್ಹ ಮಾಡಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿರುವುದು ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆ ಆಗುವುದಿಲ್ಲ ಆ ಅಂಶಗಳನ್ನು ಸ್ಪೀಕರ್ ರಮೇಶ್ ಕುಮಾರ್ ರವರು ಪರಿಗಣಿಸದೆ, ಉದ್ದೇಶ ಪೂರ್ವಕವಾಗಿ ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಅನರ್ಹತೆ ನಿಯಮದಡಿ ನೋಟಿಸ್ ಕೊಟ್ಟ ಬಳಿಕ ಶಾಸಕರಿಗೆ ಪ್ರತಿಕ್ರಿಯೆ ನೀಡಲು ಏಳು ದಿನಗಳ ಕಾಲವಕಾಶವನ್ನು ನೀಡಬೇಕಿತ್ತು ಆದರೆ ಕೇವಲ 3 ದಿನ ಸಮಯಾವಕಾಶವನ್ನು ಮಾತ್ರ ನೀಡಿದ್ದಾರೆ .

ಕೆಪಿಜೆಪಿ ಶಾಸಕರಾದ ಆರ್.ಶಂಕರ್ ರವರು ಕಾಂಗ್ರೆಸ್ ಜೊತೆಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಲು ಅರ್ಜಿ ಸಲ್ಲಿಸಿದ್ದು ಅದರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿರುವುದಿಲ್ಲ , ಆದರೂ ಆರ್ ಶಂಕರ್ ರವರ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ರವರು ಯಾವುದೇ ನೋಟಿಸ್‍ ನೀಡದೇ ಕ್ರಮ ಕೈಗೊಂಡಿದ್ದು ಅವರನ್ನು ಅನರ್ಹಗೊಳಿಸಲಾಗಿದೆ.

ಅನರ್ಹತೆ ವಿಚಾರವನ್ನು ಶಾಸಕರಿಗೆ ಮೊದಲೇ ತಿಳಿಸಿ ನಂತರ ಸುದ್ದಿಗೋಷ್ಠಿ ಮಾಡಬೇಕಿತ್ತು ಆದರೆ ಸ್ಪೀಕರ್ ರಮೇಶ್ ಕುಮಾರ್ ರವರು ನೇರವಾಗಿ ಸುದ್ದಿಗೋಷ್ಠಿ ಮೂಲಕ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಶಾಸಕರ ಅನರ್ಹತೆಯ ಆದೇಶವನ್ನು ನಿಯಮದಂತೆ 24 ಗಂಟೆಯೊಳಗೆ ಸಂಬಂಧಿಸಿದವರಿಗೆ ತಲುಪಿಸಬೇಕು ಅದರೆ ಉದ್ದೇಶ ಪೂರ್ವಕವಾಗಿ ಅನರ್ಹತೆ ಆದೇಶವನ್ನು ಶಾಸಕರಿಗೆ ತಲುಪಿಸಿಲ್ಲ.

ಸ್ಪೀಕರ್ ರಮೇಶ್ ಕುಮಾರ್ ರವರು ಈ ಪ್ರಕರಣದಲ್ಲಿ ಉದ್ದೇಶ ಪೂರಕವಾಗಿಯೇ ಪಕ್ಷಪಾತ ಮಾಡಿದ್ದು ಅವರು ನೀಡಿರುವ ಅನರ್ಹತೆ ಆದೇಶವನ್ನು ವಜಾ ಮಾಡಿ ಮರು ವಿಚಾರಣೆಗೆ ಹಾಜರಾಗಲು ಸೂಚಿಸುವಂತೆ ಅನುಮತಿ ನೀಡಿ ಎಂದು ಅರ್ಜಿಯಲ್ಲಿ ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ .

LEAVE A REPLY

Please enter your comment!
Please enter your name here