ಮೋದಿ ಹುಟ್ಟು ಹಬ್ಬದಂದೆ 4.5 ಬಿಲಿಯನ್ ಡಾಲರ್ ಮೊತ್ತದ ಭಾರತೀಯ ಷೇರುಗಳ ಕುಸಿತ..!

0
744

ಇಂದು ಪ್ರಧಾನಿ ಮೋದಿಯವರು ತಮ್ಮ 69ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತ ದೇಶದ ಆರ್ಥಿಕತೆ ತೀವ್ರ ಕುಸಿತ ಕಂಡಿದೆ. ಭಾರತದ ಆರ್ಥಿಕ ಬೆಳವಣಿಗೆ ಕುಸಿತ ಕಾಣುತ್ತಿರುವ ಬೆನ್ನಲ್ಲೇ, ಜಾಗತಿಕ ಹೂಡಿಕೆದಾರರು ಭಾರತದ ಪ್ರಧಾನಿ ನರೇಂದ್ರ ಮೋದಿ ಮೇಲೆ ತಾವಿಟ್ಟಿದ್ದ ವಿಶ್ವಾಸವನ್ನು ಕಳೆದುಕೊಳ್ಳಲಾರಂಭಿಸಿದ್ದಾರೆ. ಹೀಗಾಗಿಯೇ ಭಾರತೀಯ ಷೇರು ಮಾರುಕಟ್ಟೆಗೆ ಸುಮಾರು 45 ಬಿಲಿಯನ್ ಡಾಲರ್ ಸುರಿದಿದ್ದ ಜಾಗತಿಕ ಹೂಡಿಕೆದಾರರು ಈಗ ತಮ್ಮ ಹೂಡಿಕೆಗಳನ್ನು ವಾಪಸ್ ಪಡೆಯಲಾರಂಬಿಸಿದ್ದಾರೆ.

ಜಾಗತಿಕ ಹೂಡಿಕೆದಾರರು ಹೂಡಿಕೆ ಹಿಂತೆಗೆತದ ಪರಿಣಾಮ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇನ್ನು 1999ರ ನಂತರ ಇದೇ ಮೊದಲ ಬಾರಿ ಇಷ್ಟೊಂದು ಭಾರೀ ಮೊತ್ತದ ಷೇರುಗಳನ್ನು ವಿದೇಶಿ ಬಂಡವಾಳದಾರರು ಮಾರಾಟ ಮಾಡಿದ್ದಾರೆ. 2014ಗಿಂತ ಮುಂಚೆ ಮೋದಿ ಸುತ್ತ ಇದ್ದ ಅತಿಯಾದ ನಿರೀಕ್ಷೆಯೆಲ್ಲ ಹುಸಿಯಾಗುತ್ತಿದೆ. ಭಾರತದ ಆರ್ಥಿಕ ಹಿಂಜರಿತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು ಜಿಡಿಪಿ ಪ್ರಮಾಣ ಕುಸಿತ ಕಂಡಿರುವ ಹೊರತಾಗಿ ಭಾರತದ ಆರ್ಥಿಕತೆ ಅಂಕಿಸಂಖ್ಯೆಗಿಂತಲೂ ಕೆಟ್ಟದ್ದಾಗಿದೆ ಎಂದು ಐಎಂಎಫ್ ಹೇಳಿದೆ.

ಇನ್ನು ಭಾರತದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷದಲ್ಲಿಯೇ ಗರಿಷ್ಠ್ಠವಾಗಿದೆ. ಇನ್ನೊಂದೆಡೆ ಆಟೋಮೊಬೈಲ್, ಜವಳಿ, ಸಾರಿಗೆ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿಯೂ ಕುಸಿತ ಹೆಚ್ಚುತ್ತಿದೆ. ಈ ಸಮಸ್ಯೆಗಳೆಲ್ಲವೂ 2016ರಲ್ಲಿ ಅಮಾನ್ಯೀಕರಣದಿಂದ ಆರಂಭಗೊಂಡು ನಂತರ ಜಿಎಸ್‍ಟಿ ಜಾರಿಯ ನಂತರ ಇನ್ನಷ್ಟು ಹೆಚ್ಚಾಗಿದೆ ಎಂದು ಮೋರ್ಗನ್ ಸ್ಟೇನ್ಲಿ ಸಂಸ್ಥೆಯ ಅರ್ಥಶಾಸ್ತ್ರಜ್ಞೆ ಮೌಪಸ್ಸಂತ್ ಚಛ್ರ ಅಭಿಪಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here