ಇತ್ತೀಚಿಗೆ ಚಿತ್ರರಂಗಗಳಲ್ಲಿ ಜೀವನ ಚರಿತ್ರೆ ಆಧಾರಿತ ಸಿನಿಮಾಗಳು ಹೆಚ್ಚಾಗಿ ಬರುತ್ತಿದೆ.ಅದರಲ್ಲೂ ಬಾಲಿವುಡ್ ನಲ್ಲಂತೂ ಇದರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ಕೂಡ ಸೆಟ್ಟೇರಿವೆ. ಹೀಗೆ ಸೆಟ್ ಏರಿರುವ ಸಿನಿಮಾಗಳಲ್ಲಿ ಕ್ರೀಡಾ ಆಧಾರಿತ ಸಿನಿಮಾಗಳೇ ಹೆಚ್ಚು ಎಂಬುವುದು ವಿಶೇಷ!
ಈಗಾಗಲೇ ಖ್ಯಾತ ಕ್ರಿಕೆಟಿಗ, ಭಾರತ ತಂಡಕ್ಕೆ ಮೊದಲು ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಅವರ ಬಯೋಪಿಕ್ ರೆಡಿಯಾಗುತ್ತಿದ್ದು, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಮಿಂಚುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ರಣವೀರ್ ಥೇಟ್ ಕಪಿಲ್ ದೇವ್ ತರಾನೇ ಕಾಣುತ್ತಿದ್ದಾರೆ ! ಅಸಲಿ ಸುದ್ದಿ ಏನಪ್ಪಾ ಅಂದ್ರೆ ಇದೀಗ ಇದೇ ಸಾಲಿಗೆ ಮಹಿಳಾ ಕ್ರಿಕೆಟ್ ನಾಯಕಿ ಸೇರ್ಪಡೆಯಾಗಿದ್ದಾರೆ !
ಹೌದು, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ ರೆಡಿಯಾಗುತ್ತಿದೆ. ಕೆಲವು ತಿಂಗಳುಗಳಿಂದ ಮಿಥಾಲಿಯವರ ಬಯೋಪಿಕ್ ಸಿನಿಮಾ ಬರುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಇದೀಗ ಅಧಿಕೃತವಾಗಿ ಈ ವಿಚಾರ ಅನೌನ್ಸ್ ಆಗಿದ್ದು, ಇದೇ ಡಿಸೆಂಬರ್ ೩, ಮಿಥಾಲಿಯವರ ೩೭ ನೇ ವರ್ಷದ ಜನ್ಮ ದಿನದಂದೇ ಈ ವಿಷಯವನ್ನು ಅನೌನ್ಸ್ ಮಾಡಿದ್ದಾರೆ !
ಅಂದಹಾಗೆ ಮಿಥಾಲಿ ರಾಜ್ ಪಾತ್ರದಲ್ಲಿ ಟಾಲಿವುಡ್ ಬ್ಯೂಟಿ ತಾಪ್ಸಿ ಅವರು ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ‘ಶಭಾಷ್ ಮಿಥಾಲಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ !
ರಾಹುಲ್ ಧೋಲಾಕಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ನಟಿ ತಾಪ್ಸಿ, ಮಿಥಾಲಿ ರಾಜ್ ಅವರಿಗೆ ಹಟ್ಟುಹಬ್ಬದ ಶುಭಾಶಯ ಕೋರಿ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.
ಇನ್ನು ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಟಿ ತಾಪ್ಸಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಿಷನ್ ಮಂಗಲ್ ಮತ್ತು ಸಾಂದ್ ಕಿ ಆಂಖ್ ಎರಡು ಹಿಟ್ ಚಿತ್ರಗಳನ್ನು ನೀಡಿರುವ ತಾಪ್ಸಿ ಈಗ ಮಿಥಾಲಿ ಆಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ!